ಸಿಹಿಸುದ್ದಿ ಕೊಟ್ಟ ತ್ರಿವಿಕ್ರಮ್, ಭವ್ಯಾ ಗೌಡಗೆ ಮೋಸ ಮಾಡಿ ಹೊಸ ಹೆಣ್ಣಿನ ಜೊತೆ ಮದುವೆ ಸಂಭ್ರಮ
Feb 25, 2025, 11:38 IST
|

ಬಿಗ್ ಬಾಸ್ ಕನ್ನಡ 11 ರನ್ನರ್ ಅಪ್ ಆದ ತ್ರಿವಿಕ್ರಮ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿಗೆ ನಾಯಕ ಆಗಲಿದ್ದಾರೆ ಎಂಬ ಸುದ್ದಿಯನ್ನ ಮೊನ್ನೆಯಷ್ಟೇ ನಾವೇ ಬ್ರೇಕ್ ಮಾಡಿದ್ವಿ. ಅದೇ ಸುದ್ದಿ ಇದೀಗ ಅಧಿಕೃತವಾಗಿದೆ. ಕಲರ್ಸ್ ಕನ್ನಡ ವಾಹಿನಿ ಇಂದು ಮುದ್ದು ಸೊಸೆ ಧಾರಾವಾಹಿಗೆ ಅಫೀಶಿಯಲ್ ಆಗಿ ನಾಯಕನನ್ನು ಅನೌನ್ಸ್ ಮಾಡಿದೆ.
ಪದ್ಮಾವತಿ ಸೀರಿಯಲ್‌ನಲ್ಲಿ ಜನಮನ್ನಣೆ ಗಳಿಸಿದ 'ಬಿಗ್ ಬಾಸ್' ರನ್ನರ್ ಅಪ್ ತ್ರಿವಿಕ್ರಮ್ ಈಗ ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಬಿಗ್ ಬಾಸ್ ಮುಗೀತು ಮತ್ತೇನು? ಎನ್ನುವ ಹಲವು ಪ್ರಶ್ನೆಗಳಿಗೆ ಈ ಮೂಲಕ ತ್ರಿವಿಕ್ರಮ್ ತಮ್ಮ ಅಭಿಮಾನಿಗಳಿಗೆ ಉತ್ತರ ಕೊಟ್ಟಿದ್ದಾರೆ.ಹೌದು.. ನಟಿ ಮೇಘಾ ಶೆಟ್ಟಿ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮುದ್ದು ಸೊಸೆ ಸೀರಿಯಲ್ ಪ್ರೋಮೋ ಇತ್ತೀಚೆಗೆ ರಿವೀಲ್ ಆಗಿತ್ತು.
ಅಂತರಪಟ ಧಾರಾವಾಹಿ ಖ್ಯಾತಿಯ ಪ್ರತಿಮಾ ಮುದ್ದು ಸೊಸೆ ಆಗುವುದಕ್ಕೆ ಹೊರಟಿದ್ದಾರೆ. ಮದುಮಗಳಂತೆ ಸಿಂಗರಿಸಿಕೊಂಡು ಸ್ಕೂಲ್‌ನಲ್ಲಿ ಪರೀಕ್ಷೆ ಬರೆಯುವುದಕ್ಕೆ ಪ್ರತಿಮಾ ಬಂದಿದ್ದರು. ಪ್ರೋಮೋವನ್ನು ನೋಡಿದ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಈ ಧಾರಾವಾಹಿಗೆ ನಟ ತ್ರಿವಿಕ್ರಮ್ ಅವರೇ ನಾಯಕ ಎನ್ನುವ ಸುದ್ದಿ ಕೂಡ ಜೋರಾಗಿತ್ತು. ಅಂತೂ ಅಂತೆ ಕಂತೆಗಳಿಗೆ ಈಗ ಬ್ರೇಕ್ ಬಿದ್ದಿದೆ. ಮುದ್ದು ಸೊಸೆ ಪ್ರತಿಮಾಗೆ ತ್ರಿವಿಕ್ರಮ್ ನಾಯಕ ಆಗಿದ್ದಾರೆ.
ಇನ್ನು ತ್ರಿವಿಕ್ರಮ್ ಮುದ್ದು ಸೊಸೆಗೆ ನಾಯಕ ಅಂತ ಅದಾಗಲೇ ಸೋಷಿಯಲ್ ಮೀಡಿಯಾದಲ್ಲಿ ನಟಿಯನ್ನು ಚೇಂಜ್ ಮಾಡಿ.ನಮಗೆ ಭವ್ಯಾ ಗೌಡ ಬೇಕು. ಮೋಕ್ಷಿತಾ ಪೈ ತ್ರಿವಿಕ್ರಮ್‌ಗೆ ನಾಯಕಿ ಆಗಬೇಕು ಎಂದೆಲ್ಲಾ ಫ್ಯಾನ್ಸ್ ಒತ್ತಾಯಿಸಿದ್ದರು. ಆದರೆ ಇದು ಸ್ಕೂಲ್ ಓದುವ ಹುಡುಗಿಗೆ ಮದುವೆ ಮಾಡುವ ಕಥೆ ಆಗಿರುವುದರಿಂದ ವಾಹಿನಿಯವರ ನಿರ್ಧಾರ ಪ್ರತಿಮಾ ಅವರೇ ಆಗಿದ್ದಾರೆ.
ಒಟ್ಟಾರೆ ಈ ಹಿಂದೆ ನಾವೇ ಈ ಧಾರಾವಾಹಿಗೆ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ತ್ರಿವಿಕ್ರಮ್, ನಾಯಕ ಆಗಲಿದ್ದಾರೆ ಎಂಬ ಸೂಚನೆಯನ್ನು ಕೊಟ್ಟಿದ್ವಿ. ಅದರಂತೆ ಬಿಗ್ ಬಾಸ್ ರನ್ನರ್ ಅಪ್ ತಮ್ಮ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.