ಭವ್ಯಾಗೆ ಮದುವೆ ಆಫರ್ ಮಾಡಿದ ತ್ರಿವಿಕ್ರಮ್ ತಾಯಿ, ಕುಣಿದು ಕುಪ್ಪಳಿಸಿದ ಭವ್ಯಾ ಗೌಡ

 | 
Bs
ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಹಾಗೂ ತ್ರಿವಿಕ್ರಮ್ ‌ಜೋಡಿಗೆ ಸಾಕಷ್ಟು ವೀಕ್ಷಕರು ಫಿದಾ ಆಗಿದ್ದಾರೆ. ತ್ರಿವಿಕ್ರಮ್ ಅವರು ಬಿಗ್ ಬಾಸ್ ಆರಂಭದಿಂದಲೂ ಭವ್ಯಾ ಜೊತೆ ಒಡನಾಟ ಇಟ್ಟುಕೊಂಡವರು. ಈ ಇಬ್ಬರ ಮಧ್ಯೆ ಸ್ನೇಹನಾ‌ ಪ್ರೀತಿನಾ ಎಂಬುವುದು ಇದೀಗ ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.
ಇನ್ನು‌ ಕಳೆದ ವಾರ ಬಿಗ್ ಬಾಸ್ ಮನೆಯಿಂದ‌ ಸೀಕ್ರೇಟ್ ರೂಮ್ ಸೇರುವ ಹಿನ್ನೆಲೆ ತ್ರಿವಿಕ್ರಮ್ ಅವರನ್ನು ಎಲಿಮಿನೇಷನ್ ಮಾಡಲಾಗಿತ್ತು.‌ ಈ ವೇಳೆ ಭವ್ಯಾ ಅವರು ‌ಸಾಕಷ್ಟು ಕಣ್ನೀರು ಹಾಕಿದ್ದಾರೆ. ಇದನ್ನೆಲ್ಲ ‌ನೋಡಿದ ವೀಕ್ಷಕರು ಈ ಇಬ್ಬರ ನಡುವೆ ಪ್ರೀತಿ ಇದೆ ಅಂದುಕೊಂಡಿದ್ದರು.
ಆದರೆ, ಇದೀಗ ತ್ರಿವಿಕ್ರಮ್ ಅವರ ತಾಯಿ ಭವ್ಯಾ ಅವರಿಗೆ ತ್ರಿವಿಕ್ರಮ್ ಜೊತೆ ನೀನು ರಾಧಾಕೃಷ್ಣ ತರ ಇದ್ದಿಯಾ ಎಂದಿದ್ದಾರೆ.