ರಾತ್ರೋರಾತ್ರಿ ತುಕಾಲಿ ಕಾರು ಆಕ್ಸಿಡೆಂಟ್; ಸಂತು ಕಾರು ಪುಡಿ ಪುಡಿ

 | 
ಿೂ೬೭

ತುಕಾಲಿ ಸಂತೋಷ್  ಅವರು ಇತ್ತೀಚೆಗೆ ಹೊಸ ಕಾರು ಖರೀದಿಸಿದ್ದು ಸಾಕಷ್ಟು ಸುದ್ದಿ ಆಗಿತ್ತು. ಕನಸು ನನಸಾಯಿತು ಎಂದು ಹೇಳಿಕೊಂಡಿದ್ದರು. ಮಾರ್ಚ್ 13ರ ಸಂಜೆ ಈ ಕಾರು ಅಪಘಾತಕ್ಕೆ ಒಳಗಾಗಿತ್ತು. ಆಟೋ ಹಾಗೂ ತುಕಾಲಿ ಸಂತೋಷ್ ಕಾರಿನ ಮಧ್ಯೆ ಅಪಘಾತ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡ ಆಟೋ ಚಾಲಕ ಜಗದೀಶ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಆ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ತುಕಾಲಿ ಸಂತೋಷ್ ಅವರು ಹೊಳೆನರಸೀಪುರದವರು. ತುಕಾಲಿ ಸಂತೋಷ್​ ಅವರು ತಮ್ಮ ಕಾರಿನಲ್ಲಿ ತುಮಕೂರು ಕಡೆಯಿಂದ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರ ಕಡೆ ಹೋಗುತ್ತಿದ್ದರು. ಅದೇ ವೇಳೆ ಕುಣಿಗಲ್​ನಿಂದ ಕುರುಡಿಹಳ್ಳಿಗೆ ಆಟೋ ತೆರಳುತ್ತಿತ್ತು. ತುಕಾಲಿ ಸಂತೋಷ್​ ಕಾರಿನ ಬಲ ಭಾಗಕ್ಕೆ ಆಟೋ ಡಿಕ್ಕಿ ಹೊಡೆದಿದೆ. ಆಟೋ ಬಹುತೇಕ ನಜ್ಜುಗುಜ್ಜಾಗಿತ್ತು. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಈ ಅಪಘಾತ ನಡೆದಿದೆ.

ತುಕಾಲಿ ಸಂತೋಷ್ ಅವರು ಹಲವು ರಿಯಾಲಿಟಿ ಶೋಗಳ ಮೂಲಕ ಫೇಮಸ್ ಆಗಿದ್ದಾರೆ. ‘ಗಿಚ್ಚಿ ಗಿಲಿ ಗಿಲಿ ಸೀಸನ್ 3’, ‘ಜೋಡಿ ನಂಬರ್ 1’, ‘ಕಾಮಿಡಿ ಕಿಲಾಡಿಗಳು 3’ ರಿಯಾಲಿಟಿ ಶೋಗಳ ಮೂಲಕ ಅವರು ಜನಪ್ರಿಯತೆ ಪಡೆದಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ಗೆ ಕಾಲಿಟ್ಟು ಮತ್ತಷ್ಟು ಖ್ಯಾತಿ ಪಡೆದರು. ವರ್ತೂರು ಸಂತೋಷ್ ಜೊತೆಗಿನ ಗೆಳೆತನದ ಕಾರಣದಿಂದಲೂ ತುಕಾಲಿ ಸಂತೋಷ್ ಸುದ್ದಿ ಆದರು. ಈಗ ಕಾರು ಅಪಘಾತದ ಮೂಲಕ ಸುದ್ದಿ ಆಗಿದ್ದಾರೆ.

ಇತ್ತೀಚೆಗಷ್ಟೇ ಅಂದರೆ, ಮಾರ್ಚ್‌ ಮೊದಲ ವಾರದಲ್ಲಿಯೇ ಕಿಯಾ ಕಂಪನಿಯ ಹೊಸ ಕಾರನ್ನು ಖರೀದಿಸಿದ್ದರು ತುಕಾಲಿ ಸಂತೋಷ್‌. ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡು, ಕನಸೊಂದು ನನಸಾಗಿದೆ ಎಂದು ಬರೆದಿಕೊಂಡಿದ್ದರು. ಇದೀಗ ಈ ಘಟನೆ ನಡೆದಿದ್ದು ಬೇಸರದ ಸಂಗತಿಯಾಗಿದೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.