ತುಕಾಲಿ ಸಂತು ಹಾಗೂ ಪತ್ನಿಗೆ ವಂಚನೆ; ಬೀದಿಗಿಳಿದ ಜೋಡಿ

 | 
Us

ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ನಟ ತುಕಾಲಿ ಸಂತೋಷ್, ಆನಂತರ ಬಿಗ್ ಬಾಸ್ ಕನ್ನಡ ಸೀನಸ್ 10ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ತುಕಾಲಿ ಸಂತು ಜೊತೆಗೆ ಅವರ ಪತ್ನಿ ಮಾನಸಾ ಕೂಡ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಜೋಡಿ ಒಂದು ಮನವಿಯನ್ನು ಮಾಡಿಕೊಂಡಿದೆ. ಯಾರೂ ಕೂಡ ಮೋಸ ಹೋಗಬೇಡಿ. ಎಂದು ಕೇಳಿಕೊಂಡಿದೆ.

ಅಷ್ಟಕ್ಕೂ ಏನಕ್ಕೆ ಎಂದರೆ ತುಕಾಲಿ ಸಂತೋಷ್ ಅವರ ಪತ್ನಿ ಮಾನಸಾ ಅವರು manasa_santhosh_official ಎಂಬ ಇನ್‌ಸ್ಟಾಗ್ರಾಮ್ ಅಕೌಂಟ್ ಹೊಂದಿದ್ದರು. ಇದಕ್ಕೆ 45 ಸಾವಿರಕ್ಕೂ ಅಧಿಕ ಫಾಲೋವರ್ಸ್ ಕೂಡ ಇದ್ದರು. ಇದೀಗ ಆದರೆ ಆ ಅಕೌಂಟ್‌ ಅನ್ನು ಹ್ಯಾಕ್ ಮಾಡಲಾಗಿದೆ. ಅಷ್ಟೇ ಅಲ್ಲ, ಆ ಅಕೌಂಟ್‌ನಿಂದ ಮೇಸೆಜ್ ಮಾಡಿ, ವಂಚನೆ ಮಾಡಲಾಗುತ್ತಿದೆಯಂತೆ. ಅದನ್ನರಿತ ಸಂತು ಮತ್ತು ಮಾನಸಾ ಒಂದು ವಿಡಿಯೋ ಕೂಡ ಸ್ಪಷ್ಟನೆ ನೀಡಿದ್ದಾರೆ.

https://vijaykarnataka.com/tv/news/bigg-boss-kannada-10-fame-tukali-santhosh-wife-manasa-instagram-account-hacked/amp_articleshow/110443175.cms

ತುಕಾಲಿ ಸಂತೋಷ್ ಅವರು ಒಂದು ವಿಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ ಮಾನಸಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನನ್ನ ಮಾನಸಾ ಸಂತೋಷ್ ಅನ್ನೋ ಅಫಿಷಿಯಲ್ ಇನ್‌ಸ್ಟಾಗ್ರಾಮ್ ಪೇಜ್ ಹ್ಯಾಕ್ ಆಗಿದೆ. ಆ ಅಕೌಂಟ್‌ನಿಂದ, ನೀವು 40 ಸಾವಿರ ರೂ. ಹೂಡಿಕೆ ಮಾಡಿ, ನಿಮಗೆ ವಾಪಸ್ 4.90 ಲಕ್ಷ ರೂ. ವಾಪಸ್ ಕೊಡ್ತಿವಿ ಅಂತ ಮೇಸೆಜ್ ಕಳಿಸ್ತಾ ಇದ್ದಾರೆ. ದಯವಿಟ್ಟು ಯಾರೂ ಕೂಡ ಅದನ್ನು ನಂಬಬಾರದು. 

ಯಾರ ಮಾತನ್ನೋ ನಂಬಿ, ದುಡ್ಡು ಹಾಕಿ ಕಳೆದುಕೊಳ್ಳಬೇಡಿ. ನನ್ನ ಅಕೌಂಟ್ ಹ್ಯಾಕ್ ಆಗಿರುವುದರಿಂದ ಬೇರೆ ಯಾರೋ ರೀತಿ ಮೇಸೆಜ್ ಹಾಕುತ್ತಿದ್ದಾರೆ ಎಂದು ಮಾನಸಾ ಹೇಳಿದ್ದಾರೆ.ಹ್ಯಾಕ್ ಆಗಿರುವ ನನ್ನ ಅಕೌಂಟ್‌ನಿಂದ ಕೆಲವೊಂದು ಲಿಂಕ್‌ಗಳನ್ನು ಕಳಿಸುತ್ತಾರೆ. ದಯವಿಟ್ಟು ಅವುಗಳನ್ನು ಓಪನ್ ಮಾಡಬೇಡಿ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ. ದುಡ್ಡು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಮಾನಸಾ ಜನರಲ್ಲಿ ಮನವಿ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.