ತುಕಾಲಿ ಸಂತು ಮಾಡಿದ ಕೆಲಸಕ್ಕೆ ರೊಚ್ಚಿಗೆದ್ದ ಪತ್ನಿ, ಇಶಾನಿ ಜೊತೆ ತುಕಾಲಿ ಸ್ನೇಹ

 | 
Hggg

ಮೊದಲ ವಾರದ ಬಳಿಕ ತುಕಾಲಿ ಸಂತೋಷ್ ವಿರುದ್ಧ ಮನೆಯ ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ತುಕಾಲಿ ಸಂತು ಪತ್ನಿ ಮಾನಸ, ತುಕಾಲಿ ಸಂತು ಅವರನ್ನು ಬಿಗ್​ಬಾಸ್ ಮನೆಯಲ್ಲಿ ಟಾರ್ಗೆಟ್ ಮಾಡಲಾಗಿದೆ ಎಂದಿದ್ದಾರೆ. ಬಿಗ್​ಬಾಸ್  ಮನೆಯಲ್ಲಿ ಮೊದಲ ವಾರದ ಕೊನೆಯಲ್ಲಿ ಹಲವು ಸದಸ್ಯರು ತುಕಾಲಿ ಸಂತು ವಿರುದ್ಧ ತಿರುಗಿ ಬಿದ್ದಿದ್ದರು. 
 
ಸಂತು ಅವರು ಮಾಡುವ ಹಾಸ್ಯ ಸರಿಬರುತ್ತಿಲ್ಲ, ಅವರು ವ್ಯಂಗ್ಯ ಮಾಡುತ್ತಾರೆ, ಬೇಸರವಾಗುವಂತೆ ಹಾಸ್ಯ ಮಾಡುತ್ತಾರೆ ಎಂದೆಲ್ಲ ಹೇಳಿದ್ದರು. ನಟ ಸುದೀಪ್ ಸಹ ತುಕಾಲಿ ಸಂತು ಅವರ ಹಾಸ್ಯದ ಬಗ್ಗೆ ಪರೋಕ್ಷವಾಗಿ ಟೀಕೆ ಮಾಡಿದ್ದರು. ಇದೀಗ ತುಕಾಲಿ ಸಂತು ಪತ್ನಿ ಮಾನಸ ಈ ಬಗ್ಗೆ ಮಾತನಾಡಿದ್ದು, ತುಕಾಲಿ ಸಂತು ಅವರನ್ನು ಟಾರ್ಗೆಟ್ ಮಾಡಿರುವುದು ಕಂಡು ಬಹಳ ಬೇಸರವಾಯ್ತು ಎಂದಿದ್ದಾರೆ.

ಮಾತ್ರವಲ್ಲದೆ, ತುಕಾಲಿ ಸಂತು ಅವರು ತಪ್ಪು ಮಾಡಿದ್ದಾರೆ ಎಂದರೆ ಅವರಿಗೆ ತಿದ್ದುಕೊಳ್ಳಲು ಅವಕಾಶವನ್ನೂ ನೀಡಬೇಕು ಎಂದಿದ್ದಾರೆ. ತುಕಾಲಿ ಸಂತು ಹಾಗೂ ಅವರ ಪತ್ನಿಯ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಬಿಗ್​ಬಾಸ್ ಮನೆಯಲ್ಲಿರುವ ತುಕಾಲಿ ಸಂತು ಆಗಾಗ್ಗೆ ತಮ್ಮ ಪತ್ನಿಯನ್ನುದ್ದೇಶಿಸಿ ಚಿನ್ನಿ-ಚಿನ್ನಿ ಎನ್ನುತ್ತಾ ಮಾತನಾಡುತ್ತಿರುತ್ತಾರೆ. ಹಬ್ಬ ಮಾಡು, ಪೂಜೆ ಮಾಡು ಎಂದೆಲ್ಲ ಬಿಗ್​ಬಾಸ್ ಮನೆಯಿಂದಲೇ ನಿರ್ದೇಶನ ನೀಡುತ್ತಿರುತ್ತಾರೆ.

ಅಲ್ಲದೆ ಸಂತೋಷ್ ಅವರ ಪತ್ನಿ ಮಾನಸಾ ಈದೀಗ ಅವರನ್ನು ಬೈದಿದ್ದಾರೆ ತಾನಾಯಿತು ತನ್ನ ಆಟವಾಯಿತು ಎಂದು ಆಡಬೇಕು ಅದನ್ನು ಬಿಟ್ಟು ಇವರಿಗೇಕೆ ಬೇಕು ಕಂಡವರ ಮನೆ ವಿಚಾರ ಸುಮ್ಮನೆ ಆಟ ಆಡಿದ್ರೆ ಏನೂ ಆಗುವುದಿಲ್ಲ ಎನ್ನುವುದು ಇವರಿಗೆ ಗೊತ್ತಾಗೋದು ಯಾವಾಗ. ಮಾಡೋದೆಲ್ಲ ಮಾಡಿ ಆಮೇಲೆ ಸುದೀಪ್ ಸರ್ ಕೆಂಗಣ್ಣಿಗೆ ಗುರಿಯಾಗುತ್ತಾರೆ ಇಲ್ಲವೇ ಮನೆಯವರ ಬಾಯಲ್ಲಿ ಕನಿಸ್ಟವಾಗುತ್ತಾರೆ ಎಂದು ನುಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.