ಕಿರುತೆರೆ ನಟಿ ಅಂಕಿತ ಅಮರ್ ಭರ್ಜರಿ ಡ್ಯಾನ್ಸ್ ಗೆ ಫಿದಾ ಅಗಿ ಬಿಟ್ಟ ಕಾಲೇಜು ವಿದ್ಯಾರ್ಥಿಗಳು
Dec 12, 2024, 16:29 IST
|
ಕನ್ನಡದ ಖ್ಯಾತ ಸೀರಿಯಲ್ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದ ಅಂಕಿತ ಅಮರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ಬೆಳಗಾವಿಯ ಲಿಂಗರಾಜ್ ಕಾಲೇಜುವೊಂದರಲ್ಲಿ ಭರತನಾಟ್ಯದ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆದಿದ್ದಾರೆ.
ಇನ್ನು ಅಂಕಿತ ಅವರ ಡ್ಯಾನ್ಸ್ ನೋಡಿದ ವಿದ್ಯಾರ್ಥಿಗಳು ಸಂಭ್ರಮಿಸಿದ್ದಾರೆ. ಜೊತೆಗೆ ನೆಚ್ಚಿನ ನಟಿಯ ಅಭಿನಯಕ್ಕೂ ಸಾಕಷ್ಟು ಅಭಿಮಾನಿಗಳು ನೆರದಿದ್ದರು. ಇನ್ನು ಅಂಕಿತ ಅಮರ್ ಅವರು ಕಿರುತೆರೆ ಅಲ್ಲದೇ ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದಾರೆ.
ಇನ್ನು ಅಪ್ಪಟ ಹಿಂದೂ ಸಂಸ್ಕ್ರತಿಯನ್ನು ಪಾಲಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಬದಲಾವಣೆ ತರಲು ಅಂಕಿತ ಅವರು ಮುಂದಾಗಿದ್ದಾರೆ. ಇನ್ನು ಮುಂದಿನ ಸಿನಿಮಾಗಳಲ್ಲಿ ಹೊಸ ರೀತಿಯ ಪಾತ್ರದ ಮೂಲಕ ಪ್ರೇಕ್ಷಕರ ಮನಮೆಚ್ಚಲು ಮುಂದಾಗಿದ್ದಾರೆ.
ಇನ್ನು ಅಂಕಿತ ಅಮರ್ ಅವರು ಬ್ರೇಕ್ ಡ್ಯಾನ್ಸ್ ಹಾಗೂ ಭರತನಾಟ್ಯದಂತಹ ಕಲೆಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದಾರೆ. ಇದರ ಜೊತೆಗೆ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿಬಂದ ಇವರು ಆಧ್ಯಾತ್ಮಿಕ ವಿಚಾರದಲ್ಲೂ ಸಾಕಷ್ಟು ವಿಚಾರವಂತರಾಗಿದ್ದಾರೆ.