ಕಿರುತೆರೆ ನಟಿ ಮೇಘಾ ಶೆಟ್ಟಿ ಮನೆಯಲ್ಲಿ ಸಂಭ್ರಮಾಚರಣೆ; ಕನ್ನಡಿಗರಿಗೆ ಸಿಹಿಸುದ್ದಿ
Sep 5, 2024, 18:22 IST
|
ನಟಿ ಮೇಘಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು, ನಟಿ ಅಪಾರ ಫಾಲೋವರ್ಸ್ ಹೊಂದಿದ್ದಾರೆ. ಇದೀಗ ಮೇಘಾ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಿರುತೆರೆ ನಟಿ ಮೇಘಾ ಶೆಟ್ಟಿ ಇಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಟಿಗೆ ಅನೇಕ ನಟ-ನಟಿಯರು ಹಾಗೂ ಅಭಿಮಾನಿಗಳು ಶುಭಕೋರಿದ್ಧಾರೆ. ಸೆಲೆಬ್ರೇಷನ್ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಮೇಘಾ ಶೆಟ್ಟಿ ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ತಾರೆ. ಇದೀಗ ತನ್ನ ಬರ್ತ್ ಡೇ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಮನೆಯಲ್ಲಿ ಸಂಭ್ರಮ ಮಿತಿಮೀರಿದೆ ಹೌದು ಹೌದು.. ಮೇಘಾ ಶೆಟ್ಟಿ ಮನೆಗೆ ಒಟ್ಟೊಟ್ಟಿಗೆ ಎರಡು ಐಷಾರಾಮಿ ಕಾರುಗಳು ಎಂಟ್ರಿಕೊಟ್ಟಿವೆ. ನೀಲಿ ಬಣ್ಣದ ಬಿಎಂಡಬ್ಲ್ಯೂ ಹಾಗೂ ಕಪ್ಪು ಬಣ್ಣದ ಎಂಜಿ ಹೆಕ್ಟರ್ ಕಾರುಗಳನ್ನು ಮೇಘಾ ಶೆಟ್ಟಿ ಮತ್ತು ಕುಟುಂಬ ಖರೀದಿಸಿದೆ. ಹೊಸ ಕಾರುಗಳು ಮನೆಗೆ ಬಂದ ಖುಷಿಯಲ್ಲಿದ್ದಾರೆ ಮೇಘಾ ಶೆಟ್ಟಿ.
ಅದೇ ಖುಷಿಯಲ್ಲಿ ಕಾರಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಸ ಪಟ್ಟಿದ್ದಾರೆ. ನಟಿ ಮೇಘಾ ಶೆಟ್ಟಿ ಅವರು ‘ಜೊತೆ ಜೊತೆಯಲಿ’ ಧಾರಾವಾಹಿ ತೊರೆದ ಬಳಿಕ ಹಿರಿತೆರೆಯಲ್ಲೇ ಬ್ಯುಸಿ ಆಗಬೇಕು ಎನ್ನುವ ನಿರ್ಧಾರಕ್ಕೆ ಬಂದಂತಿದೆ. ಅದಕ್ಕೆ ಬೇಕಿರುವ ಸಿದ್ಧತೆಗಳನ್ನು ಅವರು ಮಾಡಿಕೊಳ್ಳುತ್ತಿದ್ದಾರೆ. ಇನ್ನು ಹೆಸರಿಡದ ಹೊಸ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಮೇಘಾ ಶೆಟ್ಟಿ.
ವಿಶೇಷ ಏನೆಂದರೆ ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಕನ್ನಡ, ಹಿಂದಿ, ಮರಾಠಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ತಯಾರಾಗಲಿದೆ. ಇಂಡಿಯನ್ ಫಿಲ್ಮ್ ಫ್ಯಾಕ್ಟರಿ ಸಂಸ್ಥೆ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದು, ಬಿಗ್ ಬಜೆಟ್ ಸಿನಿಮಾ ಆಗಿದೆ. ಹಲವು ಸಿನಿಮಾಗಳಿಗಾಗಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಸಡಗರ ರಾಘವೇಂದ್ರ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಯುವಪ್ರತಿಭೆ ಕವಿಶ್ ಶೆಟ್ಟಿ ನಾಯಕನಾಗಿದ್ದರೆ.
ಕವಿಶ್ ಅವರಿಗೆ ಇದು ಎರಡನೇ ಸಿನಿಮಾ, ಜಿಲಕ ಎನ್ನುವ ಸಿನಿಮಾದಲ್ಲಿ ಈ ಮೊದಲು ನಟಿಸಿದ್ದರು ಕವಿಶ್. ಮುಂದಿನ ದಿನಗಳಲ್ಲಿ ಮೇಘಾ ಶೆಟ್ಟಿ ಅವರು ದೊಡ್ಡ ಸ್ಟಾರ್ ಆಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಿದ್ದಾರೆ ಗಾಂಧಿನಗರದ ಮಂದಿ.