ಮಂಗಳೂರಿನ ಇಬ್ಬರು ಬಿಜೆಪಿ ‍MLA ಗಳಿಗೆ ನಡುಕ ಹುಟ್ಟಿಸಿದ ಯು.ಟಿ ಖಾದರ್, ಸದನದಲ್ಲೇ ವಾರ್ನಿಂಗ್

 | 
Vj

ಡಿಸೆಂಬರ್ ಅಲ್ಲಿ  ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನವನ್ನು ತಮ್ಮ ನಾಯಕತ್ವ, ಮಾತಿನ ಶೈಲಿ, ಆಡಳಿತ ಪಕ್ಷಕ್ಕೆ ಚುರುಕು ಮುಟ್ಟಿಸುವ ಪ್ರಶ್ನೆಗಳ ಮೂಲಕ ಬೆಚ್ಚಗಿರಿಸಿದ್ದು ಕರಾವಳಿಯ ಶಾಸಕರುಗಳು.ಸದನ ಆರಂಭವಾದ ದಿನದಂದಲೇ ಕರಾವಳಿ ಭಾಗದ ಪ್ರಮುಖ ಬಿಜೆಪಿ ಶಾಸಕರುಗಳಾದ ಸುನೀಲ್ ಕುಮಾರ್, ಡಾ.ಭರತ್ ಶೆಟ್ಟಿ, ಹರೀಶ್ ಪೂಂಜಾ, ವೇದವ್ಯಾಸ ಕಾಮತ್ ಹಾಗೂ ಗುರುರಾಜ ಗಂಟಿಹೊಳೆಯವರು ಆಡಳಿತ ಪಕ್ಷವನ್ನು ಪಾಟಿಸವಾಲಿಗೆ ಒಳಪಡಿಸಿ, ಇಕ್ಕಟ್ಟಿಗೆ ಸಿಕ್ಕಿಸುವ ಮೂಲಕ ವಿರೋಧ ಪಕ್ಷವಾದ ಬಿಜೆಪಿಗೆ ಅಧಿವೇಶನದಾದ್ಯಂತ ನವಚೈತನ್ಯ, ನವ ಶಕ್ತಿಯನ್ನು ತಂದಿದ್ದರು.

ಈ ಎಲ್ಲಾ ಶಾಸಕರುಗಳು ನಡೆದ 11 ದಿನಗಳ ಕಾಲ ಅಧಿವೇಶನದಲ್ಲಿ ಸಮಯಕ್ಕೆ ಸರಿಯಾಗಿ ಹಾಜರಿದ್ದು, ಸದನದ ಕಾರ್ಯ ಕಲಾಪಗಳಲ್ಲಿ ಭಾಗಿಯಾಗಿದ್ದಾರೆ. ಈ ಅಧಿವೇಶನದ ಮೂಲಕ ಕರಾವಳಿ ಭಾಗದ ಬಿಜೆಪಿ ಶಾಸಕರ ಮೇಲೆ ಕರಾವಳಿಯ ಕಾರ್ಯಕರ್ತರಲ್ಲದೇ, ಇತರೆ ಭಾಗದ ಕಾರ್ಯಕರ್ತರಿಗೂ ವಿಶೇಷ ಅಭಿಮಾನ ಸೃಷ್ಠಿಯಾಗಿದೆ. ಕರಾವಳಿಯ ಯುವ ಶಾಸಕರೆಲ್ಲರೂ ಗಟ್ಟಿಧ್ವನಿಯಾಗಿ ಪಕ್ಷವನ್ನು ಪ್ರತಿನಿಧಿಸಿದ್ದಾರೆ.

ಪ್ರಥಮ ಬಾರಿಗೆ ಶಾಸಕರೆಲ್ಲರೂ ಒಟ್ಟಾಗಿ ನಿಂತ ಸದನದಲ್ಲಿ ಹೋರಾಡಿದ ಬಗೆಗೆ ರಾಜ್ಯದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಮರಳು ಮಾಫಿಯಾ  ವಿಷಯಗಳ ಮೂಲಕ ಗಮನ ಸೆಳೆದ ವೇದವ್ಯಾಸ ಕಾಮತ್ ಅವರು ಮಾತಿನ ಭರದಲ್ಲಿ ಏಕವಚನದಲ್ಲಿ ಮಾತನಾಡಿದ್ದರಿಂದ ಕೋಪಗೊಂಡ ಖಾದರ್ ಅವರು ಇದನ್ನು ಸಂತೆ ಎಂದುಕೊಂಡಿದ್ದೀರ. ಕೂತ್ಕೊಳ್ಳಿ ಎಂದು ಗರಂ ಆಗಿದ್ದಾರೆ . 

ಇನ್ನು ವಿ.ಸುನೀಲ್ ಕುಮಾರ್, ಡಾ.ಭರತ್ ಶೆಟ್ಟಿ ಮಾತ್ರವಲ್ಲದೇ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆಯವರು ಸಮಯ ದೊರೆತಾಗಲೆಲ್ಲ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಹಾಗಾಗಿ ಸ್ಪೀಕರ್ ಖಾದರ್ ಅವರು ಕೋಪಗೊಂಡು ಇದು ಬಸ್ ಸ್ಟಾಂಡ್ ಅಲ್ಲ ಕುತ್ಕೊ ಎಂದು ನುಡಿದು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.