ನ.ಟಿ ಪ್ರೇಮಾ ಅವರ ನಿಜವಾದ ಪ್ರೀತಿಯನ್ನು ತಿರಸ್ಕರಿಸಿದ್ರಾ ಉಪೇಂದ್ರ, ಕರಿಮಣಿ ಮಾಲೀಕ ಹಾಡಿನಲ್ಲಿದೆ ಸೀಕ್ರೆಟ್

 | 
Gbb
ಏನಿಲ್ಲ ಏನಿಲ್ಲ.. ಹಾಡು ಸಖತ್ ವೈರಲ್ ಆಗಿದೆ. ಇನ್​ಸ್ಟಾಗ್ರಾಮ್ ಓಪನ್ ಮಾಡಿದರೆ ರೀಲ್ಸ್​​ಗಳಲ್ಲಿ ಈ ಹಾಡು ರಾರಾಜಿಸುತ್ತಿದೆ. ಈ ಹಾಡಿಗೆ ಬೇರೆ ಬೇರೆ ವರ್ಷನ್​ಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಇದು ಉಪೇಂದ್ರ ಸಿನಿಮಾದ ಹಾಡು. ಈ ಚಿತ್ರ ರಿಲೀಸ್ ಆಗಿ 25 ವರ್ಷ ಪೂರ್ಣಗೊಳ್ಳುತ್ತಾ ಬಂದಿದೆ. ಆದಾಗ್ಯೂ ಸಿನಿಮಾದ ಹಾಡಿನ ಬಗ್ಗೆ ಇರೋ ಕ್ರೇಜ್ ಕಡಿಮೆ ಆಗಿಲ್ಲ. ಈ ಹಾಡನ್ನು ಬರೆದಿದ್ದು ಏಕೆ? ಮೊದಲು ಇದ್ದ ಸಾಹಿತ್ಯ ಏನು ಎಂಬ ಬಗ್ಗೆ ಗುರುಕಿರಣ್ ಅವರು ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಉಪೇಂದ್ರ ಸಿನಿಮಾ ರಿಲೀಸ್ ಆಗಿದ್ದು 1999ರ ಅಕ್ಟೋಬರ್ 22ರಂದು. ಉಪೇಂದ್ರ ಅವರು ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನ ಮಾಡಿದ್ದರು. ಈ ಚಿತ್ರ ಅಂದಿನ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈ ಸಿನಿಮಾಗೆ ಎಆರ್​ ರೆಹಮಾನ್ ಅವರನ್ನು ಕರೆತರಬೇಕು ಎಂಬ ಆಲೋಚನೆ ಉಪೇಂದ್ರ ಅವರಿಗೆ ಇತ್ತು. ಅನು ಮಲ್ಲಿಕ್ ಅವರ ಬಳಿಯೂ ಹೋಗಿ ಕೇಳಲಾಯಿತು. ಯಾರೂ ಸಿಗದಿದ್ದಾಗ ಉಪೇಂದ್ರ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದು ಸಂಗೀತ ನಿರ್ದೇಶಕ ಗುರುಕಿರಣ್.
ಸೂರತ್ಕಲ್​ಗೆ ತೆರಳಿದ್ದೆವು. ಅಲ್ಲಿ ಉಳಿದುಕೊಂಡು ಈ ಚಿತ್ರದ ಸಾಂಗ್​ಗಳನ್ನು​ ಕಂಪೋಸ್ ಮಾಡಿದ್ದೆವು. ಎಂಟಿವಿ ಹಾಡನ್ನು ಮೊದಲು ರೆಕಾರ್ಡ್ ಮಾಡಿದೆವು. ಉಪೇಂದ್ರ ಹಾಗೂ ಪ್ರೇಮಾ ಮಧ್ಯೆ ಏನೋ ನಡೆಯುತ್ತಿದೆ ಎನ್ನುವ ವದಂತಿ ಹಬ್ಬಿತ್ತು. ಈ ಕಾರಣಕ್ಕೆ ಏನಿಲ್ಲ ಏನೇನೂ ಇಲ್ಲ ಎಂದು ಉಪೇಂದ್ರ ಸಾಲುಗಳನ್ನು ನೀಡಿದರು. ಇಬ್ಬರೂ ಒಟ್ಟಿಗೆ ಆ್ಯಕ್ಟ್ ಮಾಡಿದ್ದರಿಂದ ಈ ಸಾಲುಗಳನ್ನು ಅವರು ಬರೆದರು ಎಂದಿದ್ದರು ಗುರುಕಿರಣ್. ನಂತರ ಈ ಹಾಡಿನ ಸಾಹಿತ್ಯವನ್ನು ಏನಿಲ್ಲ ಏನಿಲ್ಲ..ಎಂದು ಬದಲಾಯಿಸಲಾಯಿತು.
ಏನಿಲ್ಲ.. ಎಂದು ಹೇಳುತ್ತಿದ್ದಂತೆ ಅರ್ಧ ಗಂಟೆಗೆ ಸಂಪೂರ್ಣ ಟ್ಯೂನ್ ರೆಡಿ ಆಯಿತು. ಇದೆಲ್ಲ ರೆಡಿ ಆಗಿದ್ದು ಮಧ್ಯರಾತ್ರಿಯಲ್ಲಿ. ನಾವು ರಾತ್ರಿ ಕುಳಿತು ಟ್ಯೂನ್ ಕಂಪೋಸ್ ಮಾಡುತ್ತಿದ್ದೆವು. ಟ್ಯೂನ್ ರೆಡಿ ಆದ ಖುಷಿಗೆ ಹೋಗಿ ಟೀ ಕುಡಿದು ಬಂದೆವು ಎಂದು ಗುರುಕಿರಣ್ ಅವರು ಹಳೆಯ ಘಟನೆ ತೆರೆದಿಟ್ಟಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.