ಮದುವೆ ಮುನ್ನವೇ ರೆಸ್ಟೋರೆಂಟ್ ನಲ್ಲಿ ಕಾಣಿಸಿಕೊಂಡ ವೈಷ್ಣವಿ ಹಾಗೂ ಅನುಕೂಲ್, ನಿಶ್ಚಿತಾರ್ಥ ಬಳಿಕ ತಿರುಗಾಟ ಎಂದ ವೈಷ್ಣವಿ

 | 
ದೇವಿ, ಅಗ್ನಿಸಾಕ್ಷಿ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿ ಇದೀಗ ಸೀತಾರಾಮ ಸೀರಿಯಲ್ ಅಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ವೈಷ್ಣವಿ ಗೌಡ ಇತ್ತೀಚೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಈ ಬೆನ್ನಲ್ಲೇ ಭಾವಿ ಪತಿ ಜೊತೆಗೆ ವೈಷ್ಣವಿ ಡಿನ್ನರ್ ಡೇಟ್‌ಗೆ ತೆರಳಿದ್ದಾರೆ. ಇಬ್ಬರ ರೊಮ್ಯಾಂಟಿಕ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಷ್ಟಕ್ಕೂ ಅನುಕೂಲ್ ಮಿಶ್ರಾ ಜೊತೆ ನಟಿ ಸ್ವಿಮ್ಮಿಂಗ್ ಪೂಲ್ ಬಳಿ ಊಟ ಸವಿದಿದ್ದಾರೆ. ರೊಮ್ಯಾಂಟಿಕ್‌ ಆಗಿ ಸಮಯ ಕಳೆದಿದ್ದಾರೆ. ಈ ಕುರಿತು ಅನುಕೂಲ್ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಹೊಸ ಜೋಡಿ ಸದಾ ಚೆನ್ನಾಗಿರಲಿ‌, ಸೂಪರ್‌ ಜೋಡಿ ಅಂತ ಅಭಿಮಾನಿಗಳು. ನೋಡೊಕು ಕೂಡಾ ಹೇಳಿ ಮಾಡಿಸಿದ ಜೋಡಿಗಳು ನೀವು ಹಾಗಾಗಿ ಸದಾ ಕಾಲ ಸಂತೋಷ ನಿಮ್ಮದಾಗಿರಲಿ ಎಂದು ಹಾರೈಸಿದ್ದಾರೆ. Yy
ಏ.14ರಂದು ಏರ್‌ಫೋರ್ಸ್ ಲೆಫ್ಟಿನೆಂಟ್ ಆಗಿರುವ ಛತ್ತೀಸ್‌ಗಢ ಮೂಲದ ಅನುಕೂಲ್ ಜೊತೆ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಒಂದು ವರ್ಷದಿಂದ ಅನುಕೂಲ್ ಪರಿಚಯವಿದೆ. ಇದು ಲವ್ ಮ್ಯಾರೇಜ್ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಇದು ಅರೇಂಜ್ ಮ್ಯಾರೇಜ್. ಇದು ಹಿರಿಯರು ನೋಡಿ ನಿಶ್ಚಯಿಸಿದ ಮದುವೆ ಎಂದು ವೈಷ್ಣವಿ ಕ್ಲ್ಯಾರಿಟಿ ನೀಡಿದ್ದಾರೆ.
ಮ್ಯಾಟ್ರಿಮೋನಿ ಮೂಲಕ ಜಾತಕ ಶೇರ್ ಆದ ಬಳಿಕ ಪೋಷಕರು ಈ ಮದುವೆ ನಿಶ್ಚಯಿಸಿದರು. ನಾವಿಬ್ಬರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು 1 ವರ್ಷ ಸಮಯ ತೆಗೆದುಕೊಂಡಿದ್ದೆವು. ಮದುವೆ ತಯಾರಿ ನಡೀತಿದೆ. ಶೀಘ್ರದಲ್ಲೇ ಮದುವೆ ಆಗುತ್ತೇನೆ ಎಂದರು. ಅಲ್ಲಿಗೆ ಇದು ಲವ್ ಮ್ಯಾರೇಜ್ ಅದು ಇದು ಎಂದು ಬೆನ್ನ ಹಿಂದೆ ಮಾತಾಡುವುದು ಕೂಡಾ ನಿಂತಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.