ವೈಷ್ಣವಿ ಗೌಡ ಹಾಗೂ ಪ್ರಿಯಾ ನಡುವೆ ಜಗಳ, ಧಾರಾವಾಹಿ ವೀಕ್ಷಕರಿಗೆ ಬಾರಿ ನಿರಾಸೆ
Apr 8, 2025, 15:36 IST
|

ಸೀತಾರಾಮ ಸೀರಿಯಲ್ ಪ್ರಿಯಾ ಉರ್ಫ್ ಮೇಘನಾ ಶಂಕರಪ್ಪ ಮತ್ತು ಸೀತಾ ಅರ್ಥಾತ್ ವೈಷ್ಣವಿ ಗೌಡ ಅವರು ರಿಯಲ್ ಲೈಫ್ನಲ್ಲೂ ಸಕತ್ ಫ್ರೆಂಡ್ಸ್. ಇಬ್ಬರೂ ಸೇರಿ ಹಲವಾರು ರೀಲ್ಸ್ಗಳನ್ನು ಮಾಡುತ್ತಲೇ ಇರುತ್ತಾರೆ. ಇದೀಗ ನಟಿ ಮೇಘನಾ ಅವರ ಮದುವೆ ನಡೆದಿದ್ದು, ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ. ವೈಷ್ಣವಿ ಮಾತ್ರ ಇನ್ನೂ ಸಿಂಗಲ್ ಆಗಿಯೇ ಇದ್ದಾರೆ. ಇವರು ಹೋದಲ್ಲ, ಬಂದಲ್ಲಿ ಮದುವೆಯ ಬಗ್ಗೆ ಪ್ರಶ್ನೆಗಳ ಸುರಿಮಳೆಯೇ ಆಗುತ್ತದೆ.
ಸೀತಾರಾಮ ಸೀರಿಯಲ್ ನಾಯಕ ರಾಮ್ ಅರ್ಥಾತ್ ಗಗನ್ ಚೆಂಗಪ್ಪಾ ಕೂಡ ಸಿಂಗಲ್ ಆಗಿರುವ ಕಾರಣ ಹಾಗೂ ಇವರಿಬ್ಬರ ಕೆಮೆಸ್ಟ್ರಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿರುವ ಕಾರಣ, ನಿಜ ಜೀವನದಲ್ಲಿಯೂ ಇವರೇ ಜೋಡಿಯಾಗಲಿ ಎಂದು ಹಾರೈಸುತ್ತಿರುವವರೇ ಹೆಚ್ಚುಮಂದಿ. ಅಷ್ಟಕ್ಕೂ ಯಾವುದೇ ಸೀರಿಯಲ್ಗಳಲ್ಲಿ ಒಬ್ಬ ನಟ-ನಟಿ ಬಾಂಡಿಂಗ್ ಚೆನ್ನಾಗಿ ಇದ್ದ ತಕ್ಷಣ, ಅವರನ್ನು ಇವರ ಜೊತೆ ಸಂಬಂಧ ಮಾಡುವುದು ಮೊದಲಿನಿಂದಲೂ ನಡೆದು ಬಂದಿದೆ ಅನ್ನಿ.
ಮೇಘನಾ ಅವರ ಮದುವೆಯಾದ ಬೆನ್ನಲ್ಲೇ, ಈ ಸ್ನೇಹಿತೆಯರ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೈಷ್ಣವಿ ಅವರ ರಿಯಲ್ ಲೈಫ್ ಕ್ರಶ್ ಬಗ್ಗೆ ಮೇಘನಾ ಕೇಳಿದ್ದಾರೆ. ನಿಮ್ಮ ಕ್ರಷ್ ಯಾರು ಎಂದು ಕೇಳಿದ್ದಾರೆ. ಮೊದ ಮೊದಲಿಗೆ ಹಾರಿಕೆ ಉತ್ತರ ಕೊಟ್ಟಿದ್ದಾರೆ ವೈಷ್ಣವಿ. ನನಗ್ಯಾರೂ ಕ್ರಷ್ ಇಲ್ಲ. ಶಾಲಾ-ಕಾಲೇಜಿಗೆ ಹೋಗುವಾಗ ತಲೆ ಬಗ್ಗಿಸಿಕೊಂಡು ಹೋಗುತ್ತಿದ್ದೆ ಎಂದೆಲ್ಲಾ ಹೇಳಿದ್ದಾರೆ. ಇನ್ನು ಪ್ರಿಯಾ ಮೇಲೆ ಕೋಪಗೊಂಡು ಏಯ್ ಸುಮ್ನಿರು ಎಂದು ಜಗಳ ಮಾಡಿದ್ದಾರೆ.
ಕೊನೆಗೂ ಮೇಘನಾ ಅವರು ತುಂಬಾ ಸಲ ಕೇಳಿದಾಗ, ತಮ್ಮ ಮೊದಲ ಕ್ರಷ್ ಬಗ್ಗೆ ಮಾತನಾಡಿದ್ದಾರೆ. ಇದೀಗ ಮೊದಲ ಕ್ರಷ್ ಯಾರು ಎಂದು ಮೇಘನಾ ಅವರು ಕೇಳಿದಾಗ ಗಣೇಶ್ ಎಂಬ ಹೆಸರು ಅವರದ್ದು ಎಂದಿದ್ದಾರೆ. ಯಾವುದೋ ಗಣೇಶ್ ಎಂದು ತಿಳಿದ ಮೇಘನಾ ಅವರಿಗೆ ಮದ್ವೆಯಾಗಿದ್ಯಾ ಎಂದಾಗ, ವೈಷ್ಣವಿ ಹೌದು ಎಂದಿದ್ದಾರೆ.ಕೊನೆಗೆ ಅವರನ್ನು ಗೋಲ್ಡನ್ ಸ್ಟಾರ್ ಎಂದೂ ಕರೆಯುತ್ತಾರೆ ಎಂದಾಗ, ಮೇಘನಾ ಇದು ಚೀಟಿಂಗ್, ನಾನು ಸೆಲೆಬ್ರಿಟಿಗಳ ಬಗ್ಗೆ ಕೇಳಲಿಲ್ಲ ಎಂದಿದ್ದಾರೆ. ಕೊನೆಗೂ ವೈಷ್ಣವಿ ಮೌನ ಮುರಿದಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.