ವೈಷ್ಣವಿ ಗೌಡ ಹೊಸ ರೀಲ್ಸ್; ಬಟ್ಟೆ ಹಾರುವಷ್ಟರ ಮಟ್ಟಕ್ಕೆ ಕುಣಿದ ಸೀತೆ

 | 
Uu

ಹಣಕ್ಕಾಗಿ ಹೆಣ ಬಾಯ್ಬಿಡುವ ಕಾಲವಿದು ಅಂತಹದರಲ್ಲಿ ನಮ್ಮ ನಟಿಯರನ್ನು ಕೇಳಬೇಕೆ. ಹೌದು ನಟಿ ವೈಷ್ಣವಿ ಗೌಡ ಈ ಹಿಂದೆ ಅಗ್ನಿಸಾಕ್ಷಿ ಸೀರಿಯಲ್​ನಲ್ಲಿ ಸನ್ನಿಧಿ ಎಂದೇ ಫೇಮಸ್​ ಆದವರು. ಇದೀಗ ಸನ್ನಿಧಿಯ ಜಾಗವನ್ನು ಸೀತೆ ಪಡೆದುಕೊಂಡಿದ್ದಾಳೆ. ಸೀತಾರಾಮ ಸೀರಿಯಲ್​ನ ವೈಷ್ಣವಿ ಅವರ ಸೀತಾಳ ಪಾತ್ರ ಮನೆಮಾತಾಗಿದೆ. 

ನಿಜ ಜೀವನದಲ್ಲಿ ಮದ್ವೆಯಾಗದಿದ್ರೂ ಸೀರಿಯಲ್​ನಲ್ಲಿ ಸಿಹಿ ಎಂಬ ಪುಟಾಣಿಯ ತಾಯಿಯಾಗಿರುವ ಸೀತೆಯ ಪಾತ್ರಧಾರಿ ವೈಷ್ಣವಿ ಅವರು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​. ಆಗಾಗ್ಗೆ ಸಕತ್​ ಪೋಸ್​ ಕೊಟ್ಟು ಫೋಟೋ, ವಿಡಿಯೋ ಶೂಟ್​ಗಳನ್ನು ಮಾಡಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಟ್ರೋಲ್​ ಕೂಡ ಆಗುತ್ತಾರೆ. ಸೀತಾ ಪಾತ್ರಕ್ಕೆ ಅದರದ್ದೇ ಆದ ಗಾಂಭೀರ್ಯ ಇರುವ ಹಿನ್ನೆಲೆಯಲ್ಲಿ, ಮಿನಿ, ಷಾರ್ಟ್ಸ್​, ಅರೆಬರೆ ಡ್ರೆಸ್​ ಇಂಥವುಗಳಲ್ಲಿ ಕೆಲವು ಅಭಿಮಾನಿಗಳು ವೈಷ್ಣವಿ ಅವರನ್ನು ನೋಡಲು ಇಷ್ಟಪಡುವುದಿಲ್ಲ.

ಅದಕ್ಕಾಗಿಯೇ ಕೆಲವೊಮ್ಮೆ ಬೇಸರವನ್ನೂ ವ್ಯಕ್ತಪಡಿಸುವುದು ಇದೆ. ಆದ್ರೆ ಆದರೆ ಇದ್ಯಾವುದಕ್ಕೂ ವೈಷ್ಣವಿ ಜಗ್ಗುವುದಿಲ್ಲ. ಸೀತಾಳೇ ಬೇರೆ, ವೈಷ್ಣವಿಯೇ ಬೇರೆ ಎನ್ನುವುದು ಅವರ ಮಾತು. ಇದೀಗ ಮಿನಿ ಫ್ರಾಕ್​ ಧರಿಸಿರುವ ವೈಷ್ಣವಿ ಮೇಲಿನಿಂದ ಹಾರುತ್ತಾ ರೀಲ್ಸ್​ ಒಂದನ್ನು ಮಾಡಿದ್ದಾರೆ. ಇವರ ಫ್ರಾಕ್​ ಸಂಪೂರ್ಣ ಮೇಲಕ್ಕೆ ಹೋಗಿರುವುದನ್ನು ಗಮನಿಸಿರುವ ನೆಟ್ಟಿಗರು, ಹಾರಿಸುತ್ತಾ ಹಾರಿಸುತ್ತಾ ಏನನ್ನು ತೋರಿಸಲು ಇಚ್ಛಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ. 

ಇನ್ನು ಈ ರೀತಿಯ ಡ್ರೆಸ್​ ನಿಮಗೆ ಶೋಭೆ ತರುವುದಿಲ್ಲ ಎಂದೂ ಕೆಲವರು ಹೇಳುತ್ತಿದ್ದಾರೆ.ಇನ್ನು ವೈಷ್ಣವಿ ಅವರ ಕುರಿತು ಹೇಳುವುದಾದರೆ,  ವೈಷ್ಣವಿ ಕಿರುತೆರೆ ಕಲಾವಿದೆ ಮಾತ್ರವಲ್ಲದೇ ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಇವರು ಕಿರುತೆರೆ ಪ್ರವೇಶಿಸಿದ್ದರ ಬಗ್ಗೆಯೂ ಹಿಂದೊಮ್ಮೆ ಹೇಳಿಕೊಂಡಿದ್ದರು. ಇವರು ಒಂದು ದಿನ ತಮ್ಮ ತಾಯಿಯೊಂದಿಗೆ ಮಂದಿರಕ್ಕೆ ಹೋದಾಗ ಸಹಾಯಕ ನಿರ್ದೇಶಕರೊಬ್ಬರು ನೋಡಿ ತಮ್ಮ ಸೀರಿಯಲ್‌ ದೇವಿಯಲ್ಲಿ ನಟಿಸಲು ಆಫರ್ ನೀಡಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದರು.

ಹೀಗೆ ಜೀ ಕನ್ನಡದ ದೇವಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿರೋ ವೈಷ್ಣವಿ, ಪುನರ್‌ ವಿವಾಹದಲ್ಲಿ ನಟಿಸಿದರು. ಆದರೆ ಇವೆಲ್ಲಕ್ಕಿಂತ ಅಗ್ನಿಸಾಕ್ಷಿ ಸೀರಿಯಲ್‌ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಇದೀಗ ಸೀತೆಯಾಗಿ ಜನರನ್ನು ರಂಜಿಸುತ್ತಿದ್ದಾರೆ. ಇವರ ಶಿಕ್ಷಣದ ಕುರಿತು ಹೇಳುವುದಾದರೆ, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿಯೇ ಸೀರಿಯಲ್​ಗಳ ಬಿಜಿಯಿಂದಾಗಿ  ಪದವಿ ಅರ್ಧಕ್ಕೆ ಬಿಟ್ಟರು.

ನಂತರ ಬೆಂಗಳೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ಮೂಲಕ ಪದವಿ ಪಡೆದರು. ಭರತನಾಟ್ಯ, ಕೂಚಿಪುಡಿ ಪರಿಣತೆಯಾಗಿರುವ ವೈಷ್ಣವಿ  ಬೆಲ್ಲಿ ಡ್ಯಾನ್ಸ್​ನಲ್ಲಿಯೂ ಮಿಂಚುತ್ತಿದ್ದಾರೆ.  ದೊಡ್ಡ ಪರದೆ ಮೇಲೆಯೂ ಇವರಿಗೆ ನಟಿಸುವ ಅವಕಾಶ ಸಿಕ್ಕಿತ್ತು. ಗಿರಿಗಿಟ್ಲೆ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಆದರೆ ಕಿರುತೆರೆಯಿಂದಲೇ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಇವರ ಜರ್ನಿ ಇಲ್ಲಿಯೇ ಚೆನ್ನಾಗಿದೆ ಎನ್ನುತ್ತಾರೆ ವೈಷ್ಣವಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarundu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.