ಹಂಪಿ ಉತ್ಸಾಹದಲ್ಲಿ ಎದ್ದುಬಿದ್ದು ಮೈ ಬಳುಕಿಸಿದ ವೈಷ್ಣವಿ ಗೌಡ

 | 
Nx
ಕೆಲವರು ಪ್ರಸಿದ್ಧ ವ್ಯಕ್ತಿಗಳಾಗಿ ಗುರುತಿಸಿಕೊಂಡಿದ್ದರು ಕೂಡಾ ಎಲ್ಲಿ ಯಾವ ರೀತಿಯ ಬಟ್ಟೆ ಧರಿಸಬೇಕು. ಹೇಗೆ ಮಾತನಾಡಬೇಕು ಎನ್ನುವುದು ಕೂಡ ಅರ್ಥವಾಗುವುದಿಲ್ಲ. ಅಷ್ಟಕ್ಕೂ ಇದೆಲ್ಲಾ ಹೇಳೋಕೆ ಕಾರಣವೇನೆಂದರೆ ಫೆಬ್ರವರಿ 28ರಿಂದ ಮೂರು ದಿನಗಳವರೆಗೆ ನಡೆದ ಹಂಪಿ ಉತ್ಸವಕ್ಕೆ ಇದಾಗಲೇ ತೆರೆ ಬಿದ್ದಾಗಿದೆ. ಆದರೆ ಅಲ್ಲಿಯ ಕೆಲವು ವಿಡಿಯೋಗಳು ಈಗ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ.  ಹಂಪಿ ಉತ್ಸವ ಎಂದರೆ ಅದು ನಮ್ಮ ನಾಡಿನ ಸಂಸ್ಕೃತಿಯನ್ನು ತೋರಿಸುವ ಉತ್ಸವ. ಕರ್ನಾಟಕದ ಜಾನಪದ ನೃತ್ಯಗಳು ಮತ್ತು ಜಾನಪದ ಸಂಗೀತದ ಶ್ರೀಮಂತಿಕೆಯನ್ನು ಪ್ರದರ್ಶಿಸುವ ಅದ್ಭುತ ವೇದಿಕೆ ಇದು.
 ಕದಂಬೋತ್ಸವ, ಕರಾವಳಿ ಉತ್ಸವ.ಹೀಗೆ ಕೆಲವು ಉತ್ಸವಗಳನ್ನು ಪ್ರತಿವರ್ಷ ಆಚರಿಸುತ್ತಾ ಬಂದಿರುವ ಹಿಂದಿನ ಉದ್ದೇಶವೂ ಅದೇ ಆಗಿದೆ. ಆದರೆ ಇಂಥ ಉತ್ಸವಗಳು ಬರಬರುತ್ತಾ ಬೇರೆಯದ್ದೇ ರೂಪ ಪಡೆಯುತ್ತಿರುವ ಬಗ್ಗೆ ಇದಾಗಲೇ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿರುವುದೂ ಇದೆ. ಡಾನ್ಸ್​, ಸಂಗೀತದ ಹೆಸರಿನಲ್ಲಿ ಬೇರೆಯದ್ದೇ ರೀತಿಯ ವರ್ತನೆ ಮಾಡುತ್ತಿರುವ ಬಗ್ಗೆ ಸೋಷಿಯಲ್​ ಮೀಡಿಯಾಗಳಲ್ಲಿಯೂ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.
ಇದೀಗ ಹಂಪಿ ಉತ್ಸವದಲ್ಲಿ ಸೀತಾರಾಮ ಸೀತೆಯ ಪಾತ್ರಧಾರಿ ನಟಿ ವೈಷ್ಣವಿ ಗೌಡ ಅವರು, ಎಕ್ಕಾ ರಾಜಾ ರಾಣಿ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಇದಕ್ಕೂ ಮುನ್ನ ವೇದಿಕೆಯ ಮೇಲೆ ಅವರನ್ನು ಶಾರದೆಯ ವರಪುತ್ರಿ ಎಂದೆಲ್ಲಾ ಬಣ್ಣಿಸಲಾಯಿತು. ಅವರ ಅದ್ಭುತ ನಟನೆ, ನಟನಾ ಕೌಶಲಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಲಾಯಿತು. ಆದರೆ ಬಳಿಕ ಅವರು ಈ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಸೋಷಿಯಲ್​ ಮೀಡಿಯಾದಲ್ಲಿ ಟೀಕೆಗಳ ಸುರಿಮಳೆಯೇ ಆಗುತ್ತಿದೆ.
https://youtube.com/shorts/sH0QA9OJM1M?si=m83fCOis-9FKYoUW
 ಬಾರ್​ ಡಾನ್ಸ್​ ಮಾಡಲು ಹಂಪಿಯಂಥ ಉತ್ಸವದ ವೇದಿಕೆ ನಿಮಗೆ ಬೇಕಿತ್ತಾ ಎಂದು ಕಮೆಂಟಿಗರು ಪ್ರಶ್ನಿಸುತ್ತಿದ್ದಾರೆ. ಎಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂದು ನಿಮಗೆ ಗೊತ್ತಿಲ್ಲವೆ ಎಂದು ಪ್ರಶ್ನಿಸಿದರೆ, ಆ ಪ್ರಶ್ನೆಯನ್ನು ಆಯೋಜಕರಿಗೆ ಹೇಳಬೇಕು ಎಂದು ಮತ್ತೊಂದಿಷ್ಟು ಮಂದಿ ರಿಪ್ಲೈ ಮಾಡಿದ್ದಾರೆ. 
ವೈಷ್ಣವಿ ಗೌಡ ಅವರು ಅದ್ಭುತ ನೃತ್ಯಗಾತಿ ಕೂಡ ಹೌದು. ಅದನ್ನೇ ನೀವು ಹಂಪಿ ಉತ್ಸವದಲ್ಲಿಯೂ ಮಾಡಿ ತೋರಿಸಬಹುದಿತ್ತಲ್ವಾ? ಸೊಂಟ ಬಳುಕಿಸಲು ಅದೂ ಈ ಹಾಡಿಗೆ ಇಂಥ ಸಾಂಸ್ಕೃತಿಕ ವೇದಿಕೆಯನ್ನು ಬಳಸಿಕೊಂಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಕಮೆಂಟ್​ನಲ್ಲಿ ಪ್ರಶ್ನಿಸಲಾಗುತ್ತಿದೆ. ನಾಡಿನ ಸಂಸ್ಕೃತಿಯನ್ನು ಬೆಳಗಿಸಬೇಕಾದ ಇಂಥ ಉತ್ಸವಗಳು ಈಗೀಗ ಕೀಳುಮಟ್ಟದ ಅಭಿರುಚಿಯನ್ನು ತೋರಿಸುತ್ತಿವೆ ಎಂದು ಮತ್ತಷ್ಟು ಮಂದಿ ಕಿಡಿ ಕಾರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.