ವೈಷ್ಣವ್ ಪತ್ನಿ ಲಕ್ಷ್ಮಿ ಕಿಡ್ನಾಪ್, ತಾಯಿ ನಿಜರೂಪ ಈಗಲಾದರೂ ಗೊತ್ತಾಗುತ್ತ ವೈಷ್ಣವ್ ಗೆ

 | 
Jx
ಜನಪ್ರಿಯ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕಥೆ ಅಂತಿಮ ಹಂತದಲ್ಲಿದೆ. ತನ್ನ ವಿರುದ್ಧ ಸಂಚು ಮಾಡಿದ ಲಕ್ಷ್ಮೀಯನ್ನು ಹೇಗಾದರೂ ಮಾಡಿ ಮನೆಯಿಂದ ಹೊರ ಕಳಿಸಬೇಕು, ಮಗ ವೈಷ್ಣವ್‌ಗೆ ಮತ್ತೊಂದು ಮದುವೆ ಮಾಡಬೇಕು ಎಂದು ಕಾವೇರಿ ಪ್ಲ್ಯಾನ್‌ ಮಾಡುತ್ತಿದ್ದಾಳೆ. ತನ್ನ ಪ್ಲ್ಯಾನ್‌ ಯಶಸ್ವಿಯಾಗಲು ಚಿಂಗಾರಿಯನ್ನು ಬಳಸಿಕೊಂಡಿದ್ದಾಳೆ. ವೈಷ್ಣವ್‌ ಕೂಡಾ ಅಮ್ಮ ಹೇಳಿದ್ದೇ ವೇದವಾಕ್ಯ ಎಂದು, ಮತ್ತೊಂದು ಮದುವೆ ಆಗಲು ಒಪ್ಪಿಕೊಳ್ಳುತ್ತಾನೆ. ಆದರೆ ಸೋಮವಾರದ ಎಪಿಸೋಡ್‌ನಲ್ಲಿ ಧಾರಾವಾಹಿ ಕಥೆಗೆ ಟ್ವಿಸ್ಟ್‌ ಸಿಕ್ಕಿದೆ.
ಕಾವೇರಿಗೆ ಬ್ಲಾಕ್‌ಮೇಲ್‌ ಮಾಡಲು, ಮನೆ ಕೆಲಸದವಳಂತೆ ನಾಟಕ ಮಾಡುತ್ತಿರುವ ಚಿಂಗಾರಿ ಒಂದು ಮಾಸ್ಟರ್‌ ಪ್ಲ್ಯಾನ್‌ ಮಾಡುತ್ತಾಳೆ. ಹಾಲಿಗೆ ನಿದ್ರೆ ಮಾತ್ರೆ ಬೆರೆಸಿ, ಅದರ ಜೊತೆ ಡ್ರೈ ಫ್ರೂಟ್ಸ್‌ ತಂದು ಕಾವೇರಿಗೆ ಕೊಡುತ್ತಾಳೆ. ವೈಷ್ಣವ್‌ ಎಂಗೇಜ್‌ಮೆಂಟ್‌ ಮುಗಿಯುವವರೆಗೂ ಲಕ್ಷ್ಮೀಗೆ ಯಾವ ವಿಚಾರ ಕೂಡಾ ಗೊತ್ತಾಗಬಾರದು, ಅವಳು ನನ್ನ ಪುಟ್ಟನಿಂದ ದೂರ ಇರುವಂತೆ ನೋಡಿಕೋ ಎಂದು ಕಾವೇರಿ ಸೂಚಿಸುತ್ತಾಳೆ. ನೀವು ಯೋಚನೆ ಮಾಡಬೇಡಿ ಮೇಡಂ ನಾನು ಎಲ್ಲಾ ನೋಡಿಕೊಳ್ಳುತ್ತೇನೆ. ಸದ್ಯಕ್ಕೆ ಹಾಲು ಕುಡಿಯಿರಿ, ನಿಮಗಾಗಿ ಹಾಲಿಗೆ ಕೇಸರಿ ಬೆರೆಸಿ, ಜೊತೆಗೆ ಡ್ರೈ ಫ್ರೂಟ್ಸ್‌ ಕೂಡಾ ತಂದಿದ್ದೇನೆ. ಇದನ್ನು ಕುಡಿದರೆ ನಿಮ್ಮ ಟೆನ್ಷನ್‌ ಕಡಿಮೆ ಆಗುತ್ತದೆ ಎನ್ನುತ್ತಾಳೆ. ಕಾವೇರಿ ಹಾಲನ್ನು ಕುಡಿಯುತ್ತಾಳೆ. ತಕ್ಷಣವೇ ಅವಳಿಗೆ ನಿದ್ರೆ ಆವರಿಸುತ್ತದೆ.
ಕಾವೇರಿ ಮಂಪರಿನಲ್ಲಿರುವುದನ್ನು ಖಚಿತಪಡಿಸಿಕೊಂಡ ಚಿಂಗಾರಿ, ಇದೇ ಸರಿಯಾದ ಸಮಯ ಎಂದು ಕೀರ್ತಿ ಹಾಗೂ ಲಕ್ಷ್ಮೀ ಕೊಲೆ ಬಗ್ಗೆ ಕೇಳುತ್ತಾಳೆ. ಮತ್ತಿನಲ್ಲಿದ್ದ ಕಾವೇರಿ, ನನಗೆ ಲಕ್ಷ್ಮೀ ಕಂಡರೆ ಇಷ್ಟ ಇಲ್ಲ, ಅವಳನ್ನು ಹೇಗಾದರೂ ನನ್ನ ಮಗನಿಂದ ದೂರ ಮಾಡೋಣ ಎಂದುಕೊಂಡೆ, ಆದರೆ ಕೀರ್ತಿ ಅಡ್ಡಿಯಾದಳು, ಅದಕ್ಕೆ ಅವಳನ್ನು ಬೆಟ್ಟದ ಮೇಲಿನಿಂದ ತಳ್ಳಿ ಕೊಲೆ ಮಾಡಿದೆ, ಲಕ್ಷ್ಮೀಯನ್ನೂ ಮುಗಿಸಬೇಕು ಎಂಬ ಕಾರಣಕ್ಕೆ ಅವಳನ್ನು ರೀಟ್ರೀಟ್‌ ಸೆಂಟರ್‌ಗೆ ಸೇರಿಸಿ ಅವಳನ್ನೂ ಕೊಲೆ ಮಾಡಲು ಪ್ರಯತ್ನಿಸಿದೆ, ಅವಳು ತಪ್ಪಿಸಿಕೊಂಡುಬಿಟ್ಟಳು, ನನ್ನ ವಿರುದ್ಧ ಸಂಚು ಮಾಡಿದ ಅವಳಿಗೆ ಬುದ್ಧಿ ಕಲಿಸಲು ಪುಟ್ಟನಿಂದ ದೂರ ಮಾಡುತ್ತಿದ್ದೇನೆ ಎನ್ನುತ್ತಾಳೆ. ಇದನ್ನೆಲ್ಲಾ ಚಿಂಗಾರಿ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಾಳೆ.
ಕಾವೇರಿ ಮಾತುಗಳನ್ನು ಮರೆಯಲ್ಲಿ ನಿಂತು ಯಾರೋ ಕೇಳಿಸಿಕೊಳ್ಳುತ್ತಾರೆ. ಮರುದಿನ ವೈಷ್ಣವ್‌, ತನ್ನ ಎಂಗೇಜ್‌ಮೆಂಟ್‌ಗಾಗಿ ಡ್ರೆಸ್‌ ಸೆಲೆಕ್ಟ್‌ ಮಾಡಲು ಅಮ್ಮನ ಸಹಾಯ ಕೇಳುತ್ತಾನೆ. ನೀನು ಯಾವ ಡ್ರೆಸ್‌ ಹಾಕಿದರೂ ಚೆನ್ನಾಗಿರುತ್ತದೆ ಎಂದು ಕಾವೇರಿ ಹೇಳುತ್ತಾಳೆ. ಚಿಕ್ಕಂದಿನಿಂದ ಇಲ್ಲಿವರೆಗೂ ನನ್ನ ಬದುಕಿನಲ್ಲಿ ಎಲ್ಲವನ್ನೂ ನೀನೇ ಆಯ್ಕೆ ಮಾಡಿದ್ದು, ಈಗಲೂ ಎಂಗೇಜ್‌ಮೆಂಟ್‌ಗೆ ನೀನೇ ಡ್ರೆಸ್‌ ಸೆಲೆಕ್ಟ್‌ ಮಾಡಬೇಕು ಎನ್ನುತ್ತಾನೆ. ಕಾವೇರಿ, ಟ್ಯಾಬ್‌ ನೋಡಿ ಡ್ರೆಸ್‌ ಫೈನಲ್‌ ಮಾಡುತ್ತಾಳೆ. 
ಈ ನಡುವೆ ವೈಷ್ಣವ್‌, ಸಾಗರಿಯನ್ನು ಭೇಟಿ ಮಾಡುತ್ತಾನೆ. ಎಲ್ಲಾ ಗೊತ್ತಿದ್ದೂ ಏಕೆ ನಾಟಕ ಮಾಡುತ್ತಿದ್ದೀಯ? ನೀನು ಮನವಿ ಮಾಡಿದ್ದಕ್ಕೆ ನಿನಗೆ ಸಹಾಯ ಮಾಡುತ್ತಿದ್ದೇನೆ, ನಿನಗೂ ಗೊತ್ತು ಈಗಾಗಲೇ ನನ್ನ ನಿಶ್ಚಿತಾರ್ಥ ನಡೆದಿದೆ, ಈ ನಾಟಕದಿಂದ ನನ್ನ ವೈಯಕ್ತಿಕ ಜೀವನಕ್ಕೆ ಏನೂ ಸಮಸ್ಯೆ ಆಗಬಾರದು ಎನ್ನುತ್ತಾಳೆ. ನೀನು ಹೆದರಬೇಡ, ಇಷ್ಟು ದಿನಗಳೇ ಕಾದಿರುವ ನಾಳೆ ಒಂದು ದಿನ ಇರು, ಖಂಡಿತ ನಿನಗೆ ಏನೂ ಸಮಸ್ಯೆ ಆಗುವುದಿಲ್ಲ ಎಂದು ಸಾಗರಿಗೆ ಭರವಸೆ ನೀಡುತ್ತಾನೆ. ಹೇಗೆ ಹಲವು ಟ್ವಿಸ್ಟ್ ಅಂಡ್ ಟರ್ನ್ ತೆಗೆದುಕೊಂಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.