ತನಿಷಾ ಕೆನ್ನೆಗೆ ಬಲ ವಂತವಾಗಿ ಮುತ್ತಿಟ್ಟ ವರ್ತೂರು, ತ.ಲೆಕೆಡಿಸಿಕೊಂಡ ಬಿಗ್ ಬಾಸ್

 | 
Hgh

ಕಳೆದ ಎರಡು ದಿನಗಳಿಂದ ಬಿಗ್‌ಬಾಸ್‌ ಕನ್ನಡ ಮನೆಯೊಳಗೆ ಪ್ರಾಥಮಿಕ ಶಾಲೆ ಆಟ ಜೋರಾಗಿ ನಡೆಯುತ್ತಿದೆ. ಇಂದಿನ ಬಿಗ್‌ಬಾಸ್‌ ಕನ್ನಡದ ಎಪಿಸೋಡ್‌ನಲ್ಲಿ ತುಕಾಲಿ ಸಂತೋಷ್‌ ಅವರು ಮೇಷ್ಟ್ರು ಆಗಿದ್ದಾರೆ. ನಮ್ರತಾ ಕೂಡ ಮೇಡಂ ಆಗಿ ಸಖತ್‌ ಡ್ಯಾನ್ಸ್‌ ಮಾಡಿದ್ದಾರೆ.

ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ಪ್ರಾರಂಭವಾದ ಹಿರಿಯ ಪ್ರಾಥಮಿಕ ಶಾಲೆ ಜೋರಾಗಿ ನಡೆಯುತ್ತಿದೆ. ಇರುವುದು ಎಂಟೇ ವಿದ್ಯಾರ್ಥಿಗಳಾದರೂ ಪರಮ ತುಂಟತನ ತೋರುತ್ತಿದ್ದಾರೆ. ಒಬ್ಬರಿಗಿಂತ ಇನ್ನೊಬ್ಬರು ಕಿಲಾಡಿತನದಲ್ಲಿ ಜೋರು. ಮೇಷ್ಟ್ರುಗಳನ್ನು ಗೋಳು ಹೊಯ್ದುಕೊಳ್ಳುವುದರಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಮುಂದು. 

ಈ ಎಲ್ಲ ತುಂಟಾಟಗಳ ಕಿಡಿ ಜಿಯೋಸಿನಿಮಾದಲ್ಲಿ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ.
ನಿನ್ನೆ ತನಿಷಾ ಟೀಚರ್‌ರಿಂದ ವ್ಯಕ್ತಿತ್ವ ವಿಕಸನದ ಪಾಠ ಕಲಿತ ವಿದ್ಯಾರ್ಥಿಗಳು, ಮೈಕಲ್‌ ಮೇಷ್ಟ್ರ ಜೊತೆಗೆ ರೋಮಾಂಚನವೀ ಕನ್ನಡ ಎಂದು ರಾಗವಾಗಿ ಹಾಡಿದ್ದರು ಕೂಡ. ಪ್ರತಾಪ್ ಸರ್‌ ಅವರಿಂದ ಗಣಿತ ಕಲಿತು ಚುರುಕಾಗಿರುವ ಹುಡುಗರಿಗೆ ಇಂದು ನಮ್ರತಾ ಮ್ಯಾಮ್‌ ಡಾನ್ಸ್ ಹೇಳಿಕೊಟ್ಟಿದ್ದಾರೆ.

ವಿನಯ್‌, ಅವಿನಾಶ್ ಮತ್ತು ಕಾರ್ತಿಕ್ ಬ್ಲ್ಯಾಕ್‌ ಬೋರ್ಡ್‌ ಎದುರು ಸಖತ್ ಡಾನ್ಸ್ ಮಾಡಿದ್ದಾರೆ. ಚಂದವಾಗಿ ಸೀರೆ ಉಟ್ಟುಕೊಂಡ ನಮ್ರತಾ ಮೇಡಂ ಸಖತ್ತಾಗಿ ಸ್ಟೆಪ್ ಹಾಕ್ತಿದ್ರೆ ಇಂಥ ಅವಕಾಶಕ್ಕಾಗೇ ಕಾಯ್ತಿರೋ ವಿದ್ಯಾರ್ಥಿಗಳು ಸುಮ್ಮನೆ ಕೂಡುತ್ತಾರೆಯೇ? ಪಾಠದಲ್ಲಿ ಇಲ್ಲದ ಜೋಷ್‌ ಡಾನ್ಸ್‌ನಲ್ಲಿ ಹೊರಹೊಮ್ಮಿದೆ.  

ಬರೀ ಡಾನ್ಸ್ ಅಷ್ಟೇ ಅಲ್ಲ, ನಾಟಕದಲ್ಲಿಯೂ ಸೈ ಅನಿಸಿಕೊಂಡಿದ್ದಾರೆ ವಿದ್ಯಾರ್ಥಿಗಳು. ಮುಗ್ಧತೆಗೆ ಮತ್ತೊಂದು ಹೆಸರಂತಿರುವ ವರ್ತೂರು ಸಂತೋಷ್‌, ತನಿಷಾ ಕೆನ್ನೆಯ ಮೇಲೆ ಬೆರಳಾಡಿಸುತ್ತ, ಪಟಾಕಿ ಯಾರದಾಗಿದ್ರೂ ಹಚ್ಚೋರು ಮಾತ್ರ ನಾವಾಗಿರ್ಬೇಕು ಅಂತ ಮಾಸ್ ಡೈಲಾಗ್ ಹೊಡೀತಿದ್ದಾರೆ.  

ಇಂಗ್ಲಿಷ್ ಬರದ ತುಕಾಲಿ ಮೇಷ್ಟ್ರು, ಪದ್ಯ ಪಾಠ ಮಾಡೋಕೆ ಬಂದ್ರೆ ಹೇಗಿರತ್ತೆ? ವಿದ್ಯಾರ್ಥಿಗಳೆಲ್ಲ ಹೆಂಡ ಕುಡಿಸಿಬಿಟ್ಟ ಮಂಗನಂತಾಗುತ್ತಾರೆ. ನಾನು ಹೇಳಿಹೊಟ್ಟಿದ್ದನ್ನು ಸರಿಯಾಗಿ ಹೇಳಬೇಕು ಎನ್ನುವ ಮೇಷ್ಟ್ರ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ವಿದ್ಯಾರ್ಥಿಗಳು, ಗುರುಗಳು ಥೂ ಎಂದು ಉಗಿದರೆ ಅದನ್ನೂ ಪಾಲಿಸುತ್ತ ಗುರುಗಳಿಗೆ ಉಗಿಯುತ್ತಿದ್ದಾರೆ. 
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.