ಬಿಗ್ ಬಾಸ್ ಮನೆಗೆ ವರ್ತೂರು ಸಂತೋಷ್, ಹೇಗಿರಲಿದೆ ಗೊತ್ತಾ ಸಂತು ಎಂಟ್ರಿ

 | 
ಸಾಕ೨

ಹುಲಿ ಉಗುರು ಪೆಂಡೆಂಟ್‌ ಧರಿಸಿದ್ದ ಹಿನ್ನೆಲೆ ವರ್ತೂರು ಸಂತೋಷ್‌ ಬಂಧನವಾಗಿತ್ತು. ಪ್ರಕರಣ ಸಂಬಂಧ ವರ್ತೂರು ಸಂತೋಷ್‌ಗೆ ಷರತ್ತುಬದ್ಧ ಜಾಮೀನು  ಸಿಕ್ಕಿದೆ. ₹4,000 ಅಥವಾ ಒಬ್ಬರ ಶ್ಯೂರಿಟಿ ಮೇರೆಗೆ 2ನೇ ಎಸಿಜೆಎಂ ಕೋರ್ಟ್‌ನಿಂದ  ಜಾಮೀನು ಮಂಜೂರಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಬಿಗ್ ಬಾಸ್ ಗೆ ಮರಳಿದ್ದಾರೆ ಹಳ್ಳಿಕಾರ್ ತಳಿಯ ಒಡೆಯ ಜನ ಮೆಚ್ಚಿದ ರೈತ ವರ್ತೂರ್ ಸಂತೋಷ್ ಅವರು.

ಸಂತೋಷ್‌ಗೆ ಜಾಮೀನು ಸಿಕ್ತಿದ್ದಂತೆ ಜೈಲು ಬಳಿ ಬಿಗ್‌ ಬಾಸ್‌ ರಿಯಾಲಿಟಿ ಷೋನ ಕಾರು ಬಂದಿದೆ. ಇವತ್ತೆ ಸಂತೋಷ್‌ ಮತ್ತೆ ಬಿಗ್ ಬಾಸ್‌ಗೆ ಹೋಗ್ತಾರಾ ಅನ್ನೋ ಕುತುಹಲ ಮೂಡಿತ್ತು ಹೌದು ಸಂಜೆ ವೇಳೆಗೆ ಸಂತೋಷ್‌ ಪರ ವಕೀಲರು, ಸಂಬಂಧಿಕರು, ಅಭಿಮಾನಿಗಳು ಜೈಲು ಬಳಿ ಜಮಾಯಿಸಿದ್ದರು. ಕೋರ್ಟ್‌ ಅಮೀನ್ ಆದೇಶ ಪ್ರತಿ ನೀಡಿದ ಬಳಿಕ ವರ್ತೂರು ಸಂತೋಷ್‌ನನ್ನು ಜೈಲಿನಿಂದ ಬಿಡುಗಡೆ ಮಾಡಲಾಯ್ತು. 

ನಗು ಮೊಗದಿಂದಲೇ ಜೈಲಿನಿಂದ ಹೊರಬಂದ ಸಂತೋಷ್‌ ಯಾವುದೇ ಪ್ರಶ್ನೆಗಳಿಗೂ ಉತ್ತರ ಕೊಡದೆ ನೇರವಾಗಿ ಬಿಗ್‌ಬಾಸ್‌ಗೆ ತೆರಳಿದರು. ವರ್ತೂರು ಸಂತೋಷ್ ಹುಲಿ ಉಗುರಿನ ಪೆಂಡೆಂಟ್ ಕೇಸ್‌ನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ವರ್ತೂರ್ ಸಂತೋಷ್ ಸ್ನೇಹಿತ ಹಾಗೂ ಚಿನ್ನದ ಪೆಂಡೆಂಟ್‌ ಮಾಡಿಕೊಟ್ಟ ಚಿನ್ನದ ಅಂಗಡಿ ಮಾಲೀಕರಿಗೆ ನೋಟಿಸ್ ಕೊಡಲಾಗಿದೆ. 

ಆದರೆ ಇಬ್ಬರು ನಾಪತ್ತೆ ಆಗಿದ್ದು, ಪತ್ತೆಗೆ ಜಾಲ ಬೀಸಲಾಗಿದೆ. ಸ್ಥಳೀಯ FSL ನಲ್ಲಿ ಹುಲಿ ಉಗುರು ಒರಿಜಿನಲ್ ಎನ್ನಲಾಗಿದ್ದು, ಡೆಹ್ರಾಡೂನ್ FSL ಗೆ ರವಾನೆ ಮಾಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಇನ್ನು ಏನೇ ಬರಲಿ ಏನೇ ಇರಲಿ ನಾನು ಎದುರಿಸುತ್ತೇನೆ ಎಂಬ ನಗು ವರ್ತೂರ್ ಸಂತೋಷ್ ಮುಖದಲ್ಲಿ ಕಾಣಿಸುತ್ತಿತ್ತು. 

ಪರಪ್ಪನ ಅಗ್ರಹಾರ ಜೈಲಿನಿಂದ ಎಲ್ಲಿ ಹೋಗಬೇಕು ಎನ್ನುವುದು ಸಂತೋಷ್‌ಗೆ ಬಿಟ್ಟಿದ್ದು ಎನ್ನುವುದು ಅವರ ಮನೆಯವರು ಹಾಗೂ ಸ್ನೇಹಿತರ ಅಭಿಪ್ರಾಯ. ಆದರೆ, ಹೆಚ್ಚಿನ ಗೆಳೆಯರು ಸಂತೋಷ್‌ ಮತ್ತೆ ಬಿಗ್‌ ಬಾಸ್‌ಗೇ ಹೋಗಬೇಕು, ಅಲ್ಲಿಂದ ಗೆದ್ದೇ ಊರಿಗೆ ಬರಬೇಕು ಎಂದು ಆಶಿಸುತ್ತಿದ್ದ ಕಾರಣದಿಂದ ಮತ್ತೆ ಬಿಗ್ಬಾಸ್ ಮನೆಗೆ ಬಂದಿದ್ದಾರೆ ವರ್ತೂರ್ ಸಂತೋಷ್ ಎನ್ನಲಾಗುತ್ತಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.