ವರ್ತೂರು ಸಂತೋಷ್ ತಾಯಿ ಜೊತೆ ಜಗಳ ಮಾಡಿಕೊಂಡ ಮಾವ, ವ.ರ್ತೂರು ನಿಜಬಣ್ಣ ಬೆಳಕಿಗೆ

 | 
Hx

ಬಿಗ್ ಬಾಸ್‌ ಸೀಸನ್ 10 ನ ಸ್ಪರ್ಧಿ ವರ್ತೂರ್ ಸಂತೋಷ್ ಬಗ್ಗೆ ಈಗಾಗಲೇ ಶೋಷಿಯಲ್ ಮೀಡಿಯಾದಲ್ಲಿ ಹಲವಾರು ಆರೋಪಗಳು ಹರಿದಾಡುತ್ತಿವೆ. ಮೊದಲು ವರ್ತೂರ್ ಸಂತೋಷ್ ಅವರು ಹುಲಿ ಉಗುರು ಧರಿಸಿದ್ದರು ಎಂದು ಅರೆಸ್ಟ್ ಆಗಿದ್ದರು. 

ಈಗ ಕೆಲವು ದಿನಗಳ ಹಿಂದೆ ಅವರು ಮದುವೆ ಆಗುತ್ತೇನೆ ಎಂದ ಕಾರಣಕ್ಕೆ ಅವರ ಮಾವ ಸೋಮನಾಥ್  ಸಾಂತೋಷ್ ಬಗ್ಗೆ ಹಿಂದಿನ ಹಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದರು. ಆದರೆ ಅವುಗಳು ಯಾವುದೂ ನಿಜವಲ್ಲ ಎಲ್ಲ ಸುಳ್ಳು ಎಂದು ಸಂತೋಷ್ ಕುಟುಂಬಸ್ಥರು ಈಗ ಮಾಧ್ಯಮಗಳ ಮುಂದೆ ಹೇಳಿದ್ದಾರೆ. 

ಈ ಹಿಂದೆ ವರ್ತುರ್ ಸಂತೋಷ್ ವಿರುದ್ಧ ಅವರ ಮಾವ ಸೋಮನಾಥ್‌ ಆರೋಪಿಸಿದ್ದರು. ವರ್ತೂರು ಸಂತೋಷ್‌ಗೆ ಮದುವೆಯಾಗಿದೆ, ನನ್ನ ಮುಂದೆ ನನ್ನ  ಮಗಳಿಗೆ ತಾಳಿ ಕಟ್ಟಿದ್ದಾನೆ. ಮದುವೆಗೆ ಸುಮಾರು ಹನ್ನೆರಡು ಸಾವಿರ ಜನರು ಆಗಮಿಸಿದ್ದರು. ಮಗಳು ಗರ್ಭಿಣಿ ಎನ್ನದೆ ಅವಳ ಕುತ್ತಿಗೆಗೆ ಚಾಕು ಇಟ್ಟಿದ್ದ. 

ಹಾಗೆಯೇ ಅವನು ಡ್ರಗ್ಸ್ ಅಡಿಕ್ಟ್ ಕೂಡ ಆಗಿದ್ದ. 
ಅವನಿಗೆ ಹೆಣ್ಣು ಮಗು ಕೂಡ ಆಗಿದೆ. ಎರಡು ವರ್ಷವಾದರೂ ಮಗುವನ್ನ ನೋಡಲು ಬಂದಿಲ್ಲ. ಎಂದು ಸೋಮನಾಥ್ ಆರೋಪಿಸಿದ್ದರು. ಆದರೆ ಈಗ ಈ ಎಲ್ಲಾ ಆರೋಪಗಳು ಶುದ್ಧ ಸುಳ್ಳು ಎಂದು ಹೇಳಿ ವರ್ತೂರು ಸಂತೋಷ್‌ ಕುಟುಂಬಸ್ಥರು ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. 

ಇದರ ಬಗ್ಗೆ ಮಾತನಾಡಿದ ವರ್ತೂರು ಸಂತೋಷ್‌ ಅವರ ಸೋದರತ್ತೆ ಪ್ರಿಯಾಂಕಾ  ಮಾಧ್ಯಮದ ಮುಂದೆ ಈ ರೀತಿ ಹೇಳಿದ್ದಾರೆ. ಅವರ ಮಾವ ಸೋಮನಾಥ್‌ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು. ಮದುವೆಯಾಗಿರೋದು ನಿಜ. ನನಗೆ ಮದುವೆಯಾಗಿಲ್ಲ ಅಂತ ವರ್ತೂರು ಸಂತೋಷ್‌ ಎಲ್ಲಿ ಹೇಳಿದ್ದಾನೆ? ಅವನು ಹಾಗೆ ಹೇಳಿಲ್ಲ. ವರ್ತೂರು ಸಂತೋಷ್ ಮಾವ ಹೇಳ್ತಿರೋದೆಲ್ಲಾ ಸುಳ್ಳು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದಕ್ಕೆಲ್ಲ ಕಾರಣ ವರ್ತೂರು ಸಂತೋಷ್ ಬೆಳೆಯುತ್ತಿರುವುದು. ಅದನ್ನು ಸಹಿಸಲು ಆಗದ ಕಾರಣ ಅವರು ಈ ರೀತಿ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಇನ್ನೊಂದು ಮುಖ್ಯ ವಿಚಾರ ಏನೆಂದ್ರೆ ಸಂತೋಷ್ ಅವನು ಡ್ರಗ್ ಅಡಿಕ್ಟ್ ಅಲ್ಲ. ಮಗಳನ್ನ ಇವರೇ ಕರ್ಕೊಂಡ್ ಹೋಗಿದ್ದಾರೆ. ಇನ್ನು ನೋಡುವುದಾದರೆ ಸಂತೋಷ್ ಹುಲಿ ಉಗುರು ವಿಚಾರಕ್ಕೆ ಜೈಲಿಗೆ ಹೋದಾಗ ಅವರು ಏನು ಹೇಳಲಿಲ್ಲ ಮತ್ತು ಬಂದು ನೋಡಲು ಇಲ್ಲ. ಎಂದು ಪ್ರಿಯಾಂಕಾ ತಿಳಿಸಿದ್ದಾರೆ.

ಈ ಎಲ್ಲ ಆರೋಪಗಳು ನಿಜವಾಗಿಯೂ ಇದ್ದರೆ ವರ್ತೂರು ಸಂತೋಷ್‌ ಅವರು ಬಿಗ್ ಬಾಸ್ ಗೆ ಹೋಗುತ್ತಿರಲಿಲ್ಲ, ಹಾಗೆಯೇ ಅವರು ಇಂದು ಇಷ್ಟೊಂದು ಜನ ಅಭಿಮಾನಿಗಳನ್ನು ಹೊಂದುತ್ತಿರಲಿಲ್ಲ. ಈ ಎಲ್ಲ ಆರೋಪಗಳು ಶುದ್ಧ ಸುಳ್ಳು ಎಂದು ವರ್ತೂರು ಸಂತೋಷ್‌ ಸೋದರ ಮಾವ ಸತೀಶ್ ತಿಳಿಸಿದ್ದಾರೆ. ಇನ್ನು ಈ ಕುರಿತಾಗಿ ಈಗಾಗಲೇ ಸಂತೋಷ್ ಮಾವ ಸೋಮನಾಥ್ ಅವರಿಗೂ ಸಂತೋಷ್ ತಾಯಿಗೂ ಜಗಳವಾಗಿದೆ. ತನ್ನ ಮಗನ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಬೇಡ ಎಂದು ಆವಾಜ್ ಹಾಕಿದ್ರು ಎನ್ನಲಾಗುತ್ತಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ