ಗೋಲ್ಡ್ ‌ಸುರೇಶ್‌ಗೆ ದಮ್ಕಿ ಹಾಕಿದ ವರ್ತೂರ್ ಸಂತು, ಹೊರಗಡೆ ‌ಬಂದ್ ಮೇಲೆ ಇ‍ದೆ‌ ಅವ್ನಿಗೆ

 | 
ಗೀ

 ಬಿಗ್ಬಾಸ್ ಕಾರ್ಯಕ್ರಮ ಆರಂಭವಾದ ದಿನದಿಂದ ಒಂದಲ್ಲಾ ಒಂದು ರೀತಿಯಲ್ಲಿ ಸದ್ದು ಮಾಡ್ತಿದೆ.ಬಿಗ್​ ಬಾಸ್​ ಸೀಸನ್​ 10 ಸೂಪರ್​ ಡೂಪರ್ ಹಿಟ್​. ಹ್ಯಾಪಿ ಬಿಗ್​ ಬಾಸ್​ ಅಂತ ಶುರುವಾದ ಶೋ ನೆಕ್ಸ್ಟ್​ ಲೆವಲ್​​ನಲ್ಲಿ ಹೈಪ್​ ಕ್ರಿಯೇಟ್​ ಮಾಡಿತ್ತು. ಈ ಯಶಸ್ಸಿಗೆ ಸ್ಪರ್ಧಿಗಳ ಆಯ್ಕೆ ಕೂಡ ಕಾರಣ. ಪ್ರತಿಯೊಂದು ಕ್ಯಾಟಗರಿಯಲ್ಲೂ ದಿ ಬೆಸ್ಟ್​ ವ್ಯಕ್ತಿತ್ವಗಳನ್ನ ಬಿಗ್​ ಮನೆಗೆ ತರಲಾಗಿತ್ತು.

ಬಿಗ್‌ ಬಾಸ್‌ ಸೀಸನ್​ 10ರ ಸ್ಪರ್ಧಿಗಳು ಅಷ್ಟೇ. ನಿರೀಕ್ಷೆಯಂತೆ ತಮ್ಮ ವ್ಯಕ್ತಿತ್ವಗಳನ್ನ ಬಿಟ್ಟುಕೊಡದೇ ಸೌಂಡ್​ ಮಾಡಿದ್ರು. ಮೋಸ್ಟ್​ ಪಾಪ್ಯೂಲರ್​ ಶೋ ಅನ್ನೋ ದಾಖಲೆ ಬರೆದರು. ಅದೇ ಫಾರ್ಮಲಾ ಬಳಸಿ ಸೀಸನ್​ 11ರ ಸ್ಪರ್ಧಿಗಳ ಲಿಸ್ಟ್​ ಸಜ್ಜು ಮಾಡಲಾಗಿತ್ತು ಅನ್ನೋದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಪ್ರತಿಯೊಬ್ಬ ಸ್ಪರ್ಧಿಯನ್ನ ಹೋಲಿಕೆ ಮಾಡಲಾಗಿತ್ತು. ವರ್ತೂರು ಸಂತೋಷ್ ಅವರ ಸ್ಥಾನದಲ್ಲಿ ಗೋಲ್ಡ್​ ಸುರೇಶ್​ ಅವರನ್ನ ತರಲಾಗಿದೆ ಅನ್ನೋ ಮಾತುಗಳು ಕೇಳಿ ಬಂದಿದ್ದವು.


 ಈ ಬಗ್ಗೆ ಸಂದರ್ಶನ​​ ಒಂದರಲ್ಲಿ ವರ್ತೂರು ಸಂತೋಷ್​ಗೆ ಪ್ರಶ್ನೆ ಎದುರಾದಾಗ ಗರಂ ಆಗಿದ್ದಾರೆ.ವರ್ತೂರು ಸಂತೋಷ್ ಈವಾಗಿನ ಕಾಲದಲ್ಲಿ 3 ಸಾವಿರ ರೂಪಾಯಿ ಗೋಲ್ಡ್​ ಹಾಕೊಂಡು ವಿಡಿಯೋ ಮಾಡೋರು ಇದ್ದಾರೆ. ಇನ್ನು ಒರಿಜಿನಲ್‌ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಗೋಲ್ಡ್‌ ಹಾಕಿರೋರ ಮರ್ಯಾದೆ ಏನಾಯ್ತು ಎಂದು ಟಾಂಗ್​ ಕೊಟ್ಟಿದ್ದಾರೆ.

ಅಷ್ಟಕ್ಕೂ ಸೀಸನ್​​ 11ರ ಬಿಗ್​ ಬಾಸ್​ ಸ್ಪರ್ಧಿಗಳು ಸ್ಕ್ರಿಪ್ಟ್​ ಬರೆದುಕೊಂಡು ಬಂದಂಗೆ ಆಟ ಆಡುತ್ತಿದ್ದಾರೆ. ಐದು ನಿಮಿಷಕ್ಕೆ ಕಿತ್ತಾಡುತ್ತಾರೆ. ಇನ್​ ಐದು​ ನಿಮಿಷಕ್ಕೆ ಒಂದಾಗುತ್ತಾರೆ. ಮತ್ತೆ​ ಐದು​ ನಿಮಷಕ್ಕೆ ಅಳುತ್ತಾರೆ. ಇದೆಲ್ಲಾ ನೋಡಿದ್ರೆ ಸ್ಕ್ರಿಪ್ಟೆಡ್​ ಅನ್ನೋದು ಬಹಳ ಎವಿಡೆಂಟ್​​ ಆಗಿ ಕಾಣುತ್ತೆ ಎಂದಿದ್ದಾರೆ.

ಗೋಲ್ಡ್​ ಸುರೇಶ್​ ಬಿಗ್​ ಬಾಸ್​ ಮನೆಯಿಂದ ಹೊರಗಡೆ ಬಂದ್ಮೇಲೆ ನೇರ ನೇರ ಸುದ್ದಿಗೋಷ್ಟಿ ಮಾಡ್ತೀನಿ. ನನ್ನ ಬಗ್ಗೆ ಅವ್ರು ಆಡಿದ ಮಾತುಗಳಿಗೆ ಎದುರುಗೆ ಉತ್ತರ ಕೊಡ್ತಿನಿ ಅಂತ ಸವಾಲ್​ ಹಾಕಿದ್ದಾರೆ. ವರ್ತೂರ್​ ಸಂತೋಷ್​ ಅವರ ಈ ಹೇಳಿಕೆಗಳು ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.