ತನಿಷಾ ಹಿಂದೆ ಬಿದ್ದಿರುವ ವರ್ತೂರು, ಬಿಗ್ ಬಾಸ್ ಮುಗಿದ ಬಳಿಕ ಹೋಟೆಲ್ ಗಳಲ್ಲಿ ನಲ್ಲಿ ಸುತ್ತಾಟ

 | 
Vvb

ಬಿಗ್ ಬಾಸ್‌ ಕನ್ನಡ 10 ಮುಕ್ತಾಯಗೊಂಡಿದೆ. ವಿಜೇತರಾಗಿ ಕಾರ್ತಿಕ್ ಮಹೇಶ್‌ ಹೊರಹೊಮ್ಮಿದ್ದಾರೆ. ಡ್ರೋನ್ ಪ್ರತಾಪ್‌ಗೆ ಎರಡನೇ ಸ್ಥಾನ, ಸಂಗೀತಾ ಶೃಂಗೇರಿಗೆ ಮೂರನೇ ಸ್ಥಾನ, ವಿನಯ್‌ಗೆ ನಾಲ್ಕನೇ ಸ್ಥಾನ, ವರ್ತೂರು ಸಂತೋಷ್‌ಗೆ ಐದನೇ ಸ್ಥಾನ ಹಾಗೂ ತುಕಾಲಿ ಸಂತುಗೆ ಆರನೇ ಸ್ಥಾನ ಲಭಿಸಿದೆ.

ಬಿಗ್ ಬಾಸ್ ಮುಗಿಯುತ್ತಿದ್ದ ಹಾಗೆ, ಸಂದರ್ಶನಗಳಲ್ಲಿ ವರ್ತೂರು ಸಂತೋಷ್ ಬಿಜಿಯಾಗಿದ್ದರು. ಇದೀಗ ಕೊಂಚ ಬಿಡುವು ಮಾಡಿಕೊಂಡು ಬೆಂಕಿ ಖ್ಯಾತಿಯ ತನಿಷಾ ಕುಪ್ಪಂಡ ಅವರನ್ನ ವರ್ತೂರು ಸಂತೋಷ್ ಭೇಟಿ ಮಾಡಿದ್ದಾರೆ. ತನಿಷಾ ಕುಪ್ಪಂಡ ಅವರ ಹೋಟೆಲ್‌ಗೆ ವರ್ತೂರು ಸಂತೋಷ್ ವಿಸಿಟ್ ಮಾಡಿದ್ದಾರೆ.

ನಟಿ ತನಿಷಾ ಕುಪ್ಪಂಡ ಹೋಟೆಲ್ ಉದ್ಯಮಿ ಕೂಡ ಹೌದು. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ತನಿಷಾ ಕುಪ್ಪಂಡ ಹೋಟೆಲ್‌ ಹೊಂದಿದ್ದಾರೆ. ಅಪ್ಪು’ಸ್ 93 ಕಿಚನ್ ಎಂಬ ಹೋಟೆಲ್‌ಗೆ ತನಿಷಾ ಕುಪ್ಪಂಡ ಒಡತಿ. ಬಿಗ್ ಬಾಸ್‌ ಮನೆಯಿಂದ ಹೊರಗೆ ಬರುತ್ತಿದ್ದಂತೆಯೇ ಬಿಡುವು ಮಾಡಿಕೊಂಡು ತನಿಷಾ ಮಾಲೀಕತ್ವದ ಹೋಟೆಲ್‌ಗೆ ವರ್ತೂರು ಸಂತೋಷ್‌ ಭೇಟಿಕೊಟ್ಟಿದ್ದಾರೆ.

ತಮ್ಮ ಹೋಟೆಲ್‌ಗೆ ಭೇಟಿ ನೀಡಿದ ವರ್ತೂರು ಸಂತೋಷ್‌ಗೆ ತನಿಷಾ ಕುಪ್ಪಂಡ ಸೋಷಿಯಲ್ ಮೀಡಿಯಾದ ಮೂಲಕ ಧನ್ಯವಾದಗಳನ್ನ ತಿಳಿಸಿದ್ದಾರೆ. ಜೊತೆಗೆ, ವರ್ತೂರು ಸಂತೋಷ್‌ ಜೊತೆಗಿನ ತಮ್ಮ ಫೋಟೋವನ್ನ ತನಿಷಾ ಕುಪ್ಪಂಡ ಶೇರ್ ಮಾಡಿದ್ದಾರೆ. ಬಿಗ್ ಬಾಸ್‌ ಕನ್ನಡ 10 ಕಾರ್ಯಕ್ರಮದಲ್ಲಿ ಬೆಂಕಿ ಎಂದೇ ಫೇಮಸ್‌ ಆದವರು ತನಿಷಾ ಕುಪ್ಪಂಡ. ನೇರವಾಗಿ ಮುಖಕ್ಕೆ ಹೊಡೆದಂತೆ ಮಾತನಾಡುತ್ತಿದ್ದ ತನಿಷಾ ಕುಪ್ಪಂಡ ಅವರಿಗೆ ಸಹ ಸ್ಪರ್ಧಿಗಳು ಬೆಂಕಿ ಅಂತಲೇ ಕರೆಯುತ್ತಿದ್ದರು. 

ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಮಧ್ಯೆ ಆತ್ಮೀಯತೆ ಬೆಳೆಯಿತು. ಹೀಗಾಗಿ, ಇಬ್ಬರ ಬಾಂಡಿಂಗ್‌ಗೆ ಬೆಂಕಿಯ ಬಲೆ ಎಂಬ ಚಿತ್ರದ ಹೆಸರನ್ನ ನೀಡಲಾಗಿತ್ತು. ಇವರಿಬ್ಬರೂ ಮದುವೆ ಆಗುತ್ತಾರೆ ಎಂಬ ಸುದ್ದಿ ಕೂಡ ಹಬ್ಬಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.