ಆ ವಿಡಿಯೋ ಇಟ್ಟುಕೊಂಡು ಮಾಜಿ ಪ್ರೇಯಸಿಗೆ ಬ್ಲ್ಯಾಕ್ ಮೇಲ್, ನಟ ವರುಣ್ ಆರಾಧ್ಯ ಅಂದರ್?
Sep 12, 2024, 10:29 IST
|
ಬೃಂದಾವನ ಧಾರವಾಹಿಯಲ್ಲಿ ಮಿಂಚಿದ್ದ ಕಿರುತೆರೆ ನಟ ವರುಣ್ ಅರಾಧ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೃಂದಾವನ ಸೀರಿಯಲ್ನಲ್ಲಿ ನಟಿಸುತ್ತಿದ್ದ ವರುಣ್ ಆರಾಧ್ಯ ಅವರು ಸೀರಿಯಲ್ಗೆ ಎಂಟ್ರಿ ಕೊಡುವ ಸ್ವಲ್ಪ ಮುನ್ನ ಅವರ ಬ್ರೇಕಪ್ ಆಗಿತ್ತು. ವರುಣ್ ಆರಾಧ್ಯ ಹಾಗೂ ವರ್ಷ ಕಾವೇರಿ ಅವರು ಸೋಷಿಯಲ್ ಮೀಡಿಯಾದ ಫೇಮಸ್ ಜೋಡಿಯಾಗಿದ್ದರು.
ಬಸವೇಶ್ವರನಗರ ಸೆನ್ ಪೊಲೀಸ್ ಠಾಣೆಯಲ್ಲಿ ಸದ್ಯ ವರುಣ್ ಆರಾಧ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಷ್ಟಕ್ಕೂ ಇನ್ಯಾರೋ ಅಲ್ಲ ಬದಲಾಗಿ ಮಾಜಿ ಪತ್ನಿ ಸೋಷಿಯಲ್ ಮೀಡಿಯಾ ಸ್ಟಾರ್ ವರ್ಷಾ ಕಾವೇರಿಯಿಂದ ದೂರು ದಾಖಲಾಗಿರುವುದು ತಿಳಿದು ಬಂದಿದೆ. ಇನ್ನು ದೂರು ನೀಡಿರುವ ವರ್ಷಾ ಕಾವೇರಿ ಮಾಜಿ ಪ್ರಿಯಕರನ ವಿರುದ್ಧ ಹಲವು ಆರೋಪ ಮಾಡಿದ್ದಾರೆ. ಬೃಂದಾವನ ಸೀರಿಯಲ್ ನಟ ವರುಣ್ ಅರಾಧ್ಯ ಸದ್ಯ ಈ ಕೇಸ್ನಲ್ಲಿ ಸಿಲುಕಿಕೊಂಡಿದ್ದಾರೆ.
ಅಷ್ಟಕ್ಕೂ ವರುಣ್ ವರ್ಷಾ ಕಾವೇರಿಯ ಖಾಸಗಿ ವಿಡಿಯೋ, ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ವರುಣ್ ಆರಾಧ್ಯ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುತ್ತಿದ್ದ ಜೋಡಿ ಫೇಸ್ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಎಲ್ಲಾ ಫ್ಲಾಟ್ಫಾರ್ಮ್ನಲ್ಲಿ ಫೇಮಸ್ ಆಗಿದ್ದರು.
ಜೊತೆಯಲ್ಲಿದ್ದ ವೈಯಕ್ತಿಕ ಪೋಟೊ ವಿಡಿಯೋ ಮಾಡಿಕೊಂಡು ಬೆದರಿಕೆ ಆರೋಪ ಮಾಡಿರುವುದಾಗಿ ವರ್ಷಾ ಕಾವೇರಿ ಆರೋಪಿಸಿದ್ದಾರೆ. ಬೇರಯವರನ್ನ ಮದುವೆಯಾದ್ರೆ ಅವನನ್ನ ಸಾಯುಸಿ ನಿನ್ನನ್ನು ಸಾಯಿಸುತ್ತೇನೆಂದು ವರುಣ್ ಆರಾಧ್ಯ ಬೆದರಿಕೆ ಹಾಕಿದ್ದಾಗಿ ವರ್ಷಾ ಆರೋಪ ಮಾಡಿದ್ದಾರೆ ಎನ್ನಲಾಗಿದೆ.ವಾಟ್ಸಪ್ ಗೆ ಖಾಸಗಿ ಪೋಟೊ ಕಳುಹಿಸಿ ಅವಾಚ್ಯ ಪದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದು, ವರ್ಷಾ ಕಾವೇರಿ ಮಾಜಿ ಪ್ರಿಯಕರನ ವಿರುದ್ಧ ದೂರು ನೀಡಿದ್ದು ಈ ಸಂಬಂಧ ಎಫ್ಐಆರ್ ದಾಖಲಾಗಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.