ಆಟೋ ಡ್ರೈವರ್ ಆಗಿದ್ದ ವರುಣ್ ಸ್ಟಾರ್ ನಟ ಆಗಿದ್ದೇಗೆ, ಹಗಲು ರಾತ್ರಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ
Sep 16, 2024, 12:40 IST
|
ಬೃಂದಾವನ ಧಾರಾವಾಹಿ ಖ್ಯಾತಿಯ ನಟ ವರುಣ್ ಆರಾಧ್ಯ ತಾನು ಈ ಹಿಂದೆ ಪ್ರೀತಿ ಮಾಡುತ್ತಿದ್ದ ಹುಡುಗಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು, ಕೊಲೆ ಬೆದರಿಕೆ ಹಾಕುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆದರೆ ಆರೋಪಗಳಿಗೆ ವರುಣ್ ಆರಾಧ್ಯ ಈಗ ಸ್ಪಷ್ಟನೆ ನೀಡಿದ್ದಾರೆ. ನಾನು ಅಂತಹ ಹುಡುಗ ಅಲ್ಲ ಅಂದಿದ್ದಾರೆ.
ನಮ್ಮಿಬ್ಬರಿಗೂ ಜೀವನದಲ್ಲಿ ಮುಂದೆ ಬರಬೇಕು ಎಂಬ ಆಸೆ ಇದೆ. ಹೌದು, ಒಂದು ಸಮಯದಲ್ಲಿ ನಾವಿಬ್ಬರು ನಾಲ್ಕು ವರ್ಷ ಚೆನ್ನಾಗಿದ್ದೆವು. ಚೆನ್ನಾಗಿದ್ದಾಗ ಎಲ್ಲರೂ ಸಪೋರ್ಟ್ ಮಾಡಿದ್ದೀರಿ. ಅದಕ್ಕೆ ನಾನು ಋಣಿ ಆಗಿರುತ್ತೇನೆ. ನಮ್ಮ ನಡುವೆ ಬ್ರೇಕಪ್ ಆಗಿದೆ. ಇದೀಗ ಪುನಃ ನಮ್ಮ ಹಳೆಯ ರೀಲ್ಸ್ ವಿಡಿಯೋಗಳನ್ನು ಪದೇಪದೇ ಅಪ್ಲೋಡ್ ಮಾಡುತ್ತಿದ್ದರೆ, ನಮ್ಮಿಬ್ಬರ ವೃತ್ತಿ ಬದುಕಿಗೂ ಡ್ಯಾಮೇಜ್ ಆಗುತ್ತದೆ. ದಯವಿಟ್ಟು ಇದನ್ನು ಇಲ್ಲಿಗೆ ಬಿಟ್ಟುಬಿಡಿ ಎಂದಿದ್ದಾರೆ.
ಕೊರೋನಾ ಸಮಯದಲ್ಲಿ ವರುಣ್ ಆರಾಧ್ಯ ತಂದೆಯನ್ನು ಕಳೆದುಕೊಂಡ ಮೇಲೆ ವರುಣ್ ತಂದೆಯ ಪ್ರೀತಿಯ ಆಟೋ ಓಡಿಸಲು ಶುರು ಮಾಡಿದ್ದರು.ಆಟೋ ಓಡಿಸಿಕೊಂಡು, ಕೆಲವೊಮ್ಮೆ ಆಟೋ ಬಾಡಿಗೆಗೆ ಬಿಟ್ಟು ಮತ್ತು ಆನ್‌ಲೈನ್‌ನಲ್ಲಿ ಪ್ರಾಡೆಕ್ಟ್ ಪ್ರಮೋಷ್ ಮಾಡಿಕೊಂಡು ಮನೆ ನಡೆಸುತ್ತಿದ್ದರು. ಬೈಕ್ ಮಾರಿ ಅಕ್ಕ ಆರಾಧ್ಯಾ ಮದುವೆ ಕೂಡ ಮಾಡಿದ್ರು.
ಆದ್ರೆ ಯೂಟ್ಯೂಬ್ ಸ್ಟಾರ್, ರೀಲ್ಸ್ ಕಿಂಗ್, ಕಿರುತೆರೆ ನಟ ವರುಣ್ ಆರಾಧ್ಯ ಮತ್ತೆ ಟ್ರೋಲಿಗೆರಿಗೆ ಆಹಾರವಾಗಿದ್ದಾರೆ. ಕೆಲಸವಿಲ್ಲದೆ ಹಣ ಮಾಡುವುದು ಇವನಿಂತ ಕಲಿಯಬೇಕು ಎಂದು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಅವರ ಬದುಕು ಮುಳ್ಳಿನ ಹಾಸಿಗೆ ಆಗಿತ್ತು. ಒಂದಿಷ್ಟು ಕಷ್ಟ ಪಡದೆ ಇಂದು ಹೆಸರು ಬಂದಿದ್ದಲ್ಲ ಅಂದಿದ್ದಾರೆ.ಹಣ ಆಸೆಗೆ ವರುಣ್ ಆರಾಧ್ಯ ವರ್ಷಾ ಕಾವೇರಿ ಜೊತೆ ಬ್ರೇಕಪ್ ಮಾಡಿಕೊಂಡು ಶ್ರೀಮಂತ ಹುಡುಗಿ ಹಿಂದೆ ಬಿದ್ದಿದ್ದಾನೆ ಅಂತ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.