ವಾಸುಕಿ ವೈಭವ್ ಹಾಗೂ ನಟಿ ಬೃಂದಾ ಎಂಗೇಜ್ ಮೆಂಟ್, ಬಿಗ್ ಬಾಸ್ ಗೆಳತಿ ಚಂದನಾ ಸಂಭ್ರಮ

 | 
ರರ

ಕನ್ನಡದ ಯುವ ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್  ಇಂದು ವೈವಾಹಿಕ  ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ, ರಂಗಭೂಮಿ ಕಲಾವಿದೆ ಬೃಂದಾ  ಜೊತೆ ಇಂದು ಅವರು ಸಪ್ತಪದಿ ತುಳಿದಿದ್ದಾರೆ. ನಟ ಸಿಹಿ ಕಹಿ ಸೇರಿದಂತೆ ಹಲವು ಕಲಾವಿದರು, ಎರಡು ಕುಟುಂಬದ ಸದಸ್ಯರು ಮತ್ತು ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದಾರೆ.

ಮದುವೆ ವಿಚಾರವನ್ನು ವಾಸುಕಿ ಗುಟ್ಟಾಗಿದ್ದರು. ಅಚಾನಕ್ಕಾಗಿ ನಟಿ ತಾರಾ ಈ ವಿಷಯವನ್ನು ಹೇಳಿಕೊಂಡಿದ್ದರು. ಟಗರು ಪಲ್ಯ ಸಿನಿಮಾದಲ್ಲಿ ವಾಸುಕಿ ಮದುವೆ ಆಗುವ ಗಂಡಿನ ಪಾತ್ರ ಮಾಡಿದ್ದರು. ಈ ಕುರಿತಾಗಿ ಮಾತನಾಡುತ್ತಾ ನಟಿ ತಾರಾ ಅತೀ ಶೀಘ್ರದಲ್ಲೇ ವಾಸುಕಿ ಮದುವೆ ಆಗುತ್ತಿರುವ ವಿಷಯವನ್ನು ಬಹಿರಂಗ ಪಡಿಸಿದ್ದರು. 

ಅಲ್ಲಿಂದ ವಾಸುಕಿ ವೈಭವ್ ಅವರ ಮದುವೆ ಯಾರೊಂದಿಗೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು.
ಹಲವು ತಿಂಗಳ ಹಿಂದೆಯೇ ವಾಸುಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ವಿಷಯ ಹರಿದಾಡುತ್ತಿತ್ತು. ಬಹುಕಾಲದ ಗೆಳೆತಿಯೊಂದಿಗೆ ಅವರು ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಅದೀಗ ನಿಜವಾದಂತೆ ಕಾಣುತ್ತಿದೆ. 

ಇಂದು ವಾಸುಕಿ ಸಪ್ತಪದಿ ತುಳಿಯಲಿದ್ದಾರೆ ಎನ್ನುವುದು ತಾಜಾ ಸಮಾಚಾರ. ಇನ್ನು ವಾಸುಕಿ ಮದುವೆ ಆಗುತ್ತಿರುವ ಬೃಂದಾ ಯಾರು ಎನ್ನುವ ವಿಚಾರವನ್ನು ಈವರೆಗೂ ವಾಸುಕಿ ಯಾರ ಜೊತೆಯೂ ಹಂಚಿಕೊಂಡಿರಲಿಲ್ಲ. ಬೃಂದಾ ಕೂಡ ರಂಗಭೂಮಿ ಕಲಾವಿದರು. ಸಾಕಷ್ಟು ನಾಟಕಗಳಲ್ಲಿ ಅವರು ನಟಿಸಿದ್ದಾರೆ. ಸ್ವತಃ ವಾಸುಕಿ ಜೊತೆಯೇ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ. 

ಹಲವು ವರ್ಷಗಳಿಂದಲೂ ಈ ಜೋಡಿ ಪ್ರೀತಿಸುತ್ತಿದ್ದ ಎನ್ನುತ್ತವೆ ಮೂಲಗಳು. ವಾಸುಕಿ ಅವರ ಮದುವೆ ತೀರಾ ಸರಳವಾಗಿ ಇಂದು ನಡೆದಿದೆ. ನಟ ಸಿಹಿ ಕಹಿ ಸೇರಿದಂತೆ ಹಲವು ಕಲಾವಿದರು, ಎರಡು ಕುಟುಂಬದ ಸದಸ್ಯರು ಮತ್ತು ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಮದುವೆ ತೀರಾ ಖಾಸಗಿ ಆಗಿರಲಿ ಎಂದು ಅವರು ಮಾಧ್ಯಮಗಳಿಗೂ ಮದುವೆ ವಿಚಾರವನ್ನು ತಿಳಿಸಿರಲಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.