ವಾಸುಕಿ ವೈಭವ್ ಪತ್ನಿಯ ಸೀಮಂತ ಶಾಸ್ತ್ರ, ತುಂಬಾ ಸಿಂಪಲ್ ಆಗಿ ಸೀಮಂತ ಮುಗಿಸಿದ ವಾಸುಕಿ

 | 
Kkk
ಬಿಗ್ ಬಾಸ್‌ ಮಾಜಿ ಸ್ಪರ್ಧಿ, ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರು ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಹೌದು, 2023ರ ನವೆಂಬರ್‌ನಲ್ಲಿ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದ ವಾಸುಕಿ ವೈಭವ್ ಅವರು ತಂದೆಯಾಗುತ್ತಿದ್ದಾರೆ. ವಾಸುಕಿ ವೈಭವ್ ಮತ್ತು ಬೃಂದಾ ದಂಪತಿ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ವಾಸುಕಿ ವೈಭವ್ ತಿಳಿಸಿದ್ದಾರೆ.
ತಮ್ಮ ಪತ್ನಿ ಬೃಂದಾ ಅವರ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿರುವ ವಾಸುಕಿ ವೈಭವ್, ಎಲ್ಲಾ ಸುಂದರ ಮಹಿಳೆಯರಿಗೆ ತಾಯಂದಿರ ದಿನದ ಶುಭಾಶಯಗಳು. ನೀವು ಇಲ್ಲದೆ ಈ ಜಗತ್ತು ಅಸ್ತಿತ್ವದಲ್ಲಿರುತ್ತಿರಲಿಲ್ಲ. ಈ ತಾಯಂದಿರ ದಿನ ನನಗೆ ವಿಶೇಷವಾಗಿದೆ. ನಿಮ್ಮೆಲ್ಲರಿಗೂ ತಾಯಿ ಆಗಲಿರುವವರನ್ನು ತೋರಿಸುತ್ತಿದ್ದೇನೆ. ಪ್ರತಿಯೊಬ್ಬರಿಂದಲೂ ಪ್ರೀತಿ, ಶುಭಾಶಯಗಳು ಮತ್ತು ಆಶೀರ್ವಾದಗಳನ್ನು ಬಯಸುತ್ತೇನೆ..ಎಂದು ವಾಸುಕಿ ವೈಭವ್ ಹೇಳಿಕೊಂಡಿದ್ದಾರೆ.
ಇನ್ನು ಕುಟುಂಬಸ್ಥರ, ಸ್ನೇಹಿತರ ಜೊತೆಗೆ ಸೀಮಂತ ಕೂಡಾ ನಡೆದಿದ್ದು ಬೃಂದಾ ಸಂತೋಷಪಟ್ಟಿದ್ದನ್ನು ಕಾಣಬಹುದಾಗಿದೆ.ವಾಸುಕಿ ವೈಭವ್ ಅವರು ಹಂಚಿಕೊಂಡಿರುವ ಪೋಸ್ಟ್‌ಗೆ ಸಾವಿರಾರು ಮಂದಿ ಲೈಕ್ ಒತ್ತಿದ್ದಾರೆ. ಮಾನ್ವಿತಾ ಕಾಮತ್, ಅಮೃತಾ ಪ್ರೇಮ್, ಪೂರ್ಣಚಂದ್ರ ಮೈಸೂರು, ರೂಪಿಕಾ, ಚೈತ್ರಾ ವಾಸುದೇವನ್‌, ಆರ್‌ಜೆ ಪೃಥ್ವಿ, ಆರೋಹಿ ನಾರಾಯಣ್, ಸೃಷ್ಟಿ ಪಾಟೀಲ್, ತನುಜಾ ವೆಂಕಟೇಶ್ ಮುಂತಾದವರು ಶುಭ ಹಾರೈಸಿದ್ದಾರೆ
ರಂಗಭೂಮಿ ದಿನಗಳಿಂದಲೂ ಬೃಂದಾ ವಿಕ್ರಮ್ ಮತ್ತು ವಾಸುಕಿ ವೈಭವ್ ಅವರು ಸ್ನೇಹಿತರಾಗಿದ್ದರು. ಆಗಿನಿಂದಲೇ ಪ್ರೀತಿ ಮಾಡುತ್ತಿದ್ದ ಈ ಜೋಡಿ, ಕೊನೆಗೆ ಹಿರಿಯ ಒಪ್ಪಿಗೆ ಮೇರೆಗೆ 2023ರ ನವೆಂಬರ್‌ನಲ್ಲಿ ಮದುವೆ ಆಗಿತ್ತು. ಬಹಳ ಶಾಸ್ತ್ರೋಕ್ತವಾಗಿ ನಡೆದಿದ್ದ ಈ ಮದುವೆಗೆ ಅಂದು ಅನೇಕ ಸೆಲೆಬ್ರಿಟಿಗಳು ಆಗಮಿಸಿ, ಶುಭ ಕೋರಿದ್ದರು. ಬೃಂದಾ ವಿಕ್ರಮ್ ಅವರು ರಂಗಭೂಮಿಯಲ್ಲಿ ಹೆಚ್ಚು ಸಕ್ರಿಯವಾಗಿದ್ದು, ರಾಮಾ ರಾಮಾ ರೇ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲೂ ನಟಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.