ವೀರಪ್ಪನ್ ಹುಡ್ಕೊ ನೆಪದಲ್ಲಿ 18 ಮ.ಹಿಳೆಯರನ್ನು ತಿಂದು ತೇಗಿದ ಅ.ಧಿಕಾರಿಗಳು

 | 
Hdhd

ವೀರಪ್ಪನ್ ಹುಡುಕಲು ಹೋದ ಪೊಲೀಸರೇ ಅಪರಾಧಿಗಳಾದ ಘಟನೆ ಬಗ್ಗೆ ಕೇಳಿದ್ರೆ ನಿಜಕ್ಕೂ ನಿಮ್ಮ ಕಣ್ಣಲ್ಲಿ ಕಣ್ಣೀರು ಬಾರದಿರದು. 1992ರಲ್ಲಿ ಕಾಡುಗಳ್ಳ ವೀರಪ್ಪನ್‌ ಶೋಧದ ನೆಪದಲ್ಲಿ ಆದಿವಾಸಿಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು ಎಂಬ ಸುದ್ದಿ ಆಗಾಗ ಸದ್ದು ಮಾಡುತ್ತಿತ್ತು. ಇದು ವೀರಪ್ಪನ್‌ ಎಂಬ ಕ್ರೂರಿ ಮಾಡಿದ ಕ್ರೌರ್ಯದಷ್ಟೇ ಆಘಾತಕಾರಿ ಎಂದು ವ್ಯಾಖ್ಯಾನಿಸಲಾಗುತ್ತಿತ್ತು. 

ಈ ಪ್ರಕರಣದಲ್ಲಿ ತಮಿಳುನಾಡಿನ ಅರಣ್ಯ ಮತ್ತು ಕಂದಾಯ ಇಲಾಖೆಯ ಅಂದಿನ 215 ಮಂದಿಗೆ ಶಿಕ್ಷೆ ವಿಧಿಸಲಾಗಿತ್ತು. ಈ ಶಿಕ್ಷೆಯನ್ನು ಮದ್ರಾಸ್‌ ಹೈಕೋರ್ಟ್‌ ಮತ್ತೆ ಎತ್ತಿ ಹಿಡಿದಿದೆ. ಧರ್ಮಪುರಿ ಜಿಲ್ಲೆಯ ವಾಚಾತಿ ಗ್ರಾಮದಲ್ಲಿ ಆದಿವಾಸಿಗಳ ಮೇಲೆ ಬರ್ಬರವಾಗಿ ಸಾಮೂಹಿಕ ಅತ್ಯಾಚಾರ ನಡೆದಿತ್ತು. 1992ರಲ್ಲಿ ನಡೆದ ಪ್ರಕರಣದಲ್ಲಿ 20 ವರ್ಷಗಳ ನಂತರ ಅಂದರೆ 2011ರಲ್ಲಿ 215 ಮಂದಿಗೆ ಶಿಕ್ಷೆ ವಿಧಿಸಲಾಗಿತ್ತು.

ಅವರು ಅದನ್ನು ಮೇಲ್ಮನವಿ ಮೂಲಕ ಮದ್ರಾಸ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈಗ ಅದರ ವಿಚಾರಣೆ ನಡೆದು ಶಿಕ್ಷೆಯನ್ನು ಕಾಯಂಗೊಳಿಸಲಾಗಿದೆ. ಮೇಲ್ಮನವಿಯನ್ನು ಮದ್ರಾಸ್‌ ಹೈಕೋರ್ಟ್‌ ಶುಕ್ರವಾರ ವಜಾ ಮಾಡಿದೆ. ಅದು ವೀರಪ್ಪನ್‌ ಅಟ್ಟಹಾಸದ ಮೇರು ಕಾಲ. ವೀರಪ್ಪನ್‌ ಧರ್ಮಪುರಿ ಭಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಶ್ರೀಗಂಧ ಕಡಿದು ಕಳ್ಳಸಾಗಣೆ ಮಾಡಲಾಗುತ್ತಿತ್ತು. 

ಈ ಚಟುವಟಿಕೆಯಲ್ಲಿ ಗ್ರಾಮಸ್ಥರು ಶಾಮೀಲಾಗಿದ್ದಾರೆ ಎಂಬ ಶಂಕೆ ಇತ್ತು. ಈ ಕಾರಣಕ್ಕಾಗಿ 1992ರ ಜೂನ್‌ 20ರಂದು ವಾಚಾತಿ ಗ್ರಾಮದ ಮೇಲೆ ತಮಿಳುನಾಡಿನ ಅರಣ್ಯ ಮತ್ತು ಕಂದಾಯ ಇಲಾಖೆಗಳ ಸಿಬ್ಬಂದಿ ದಾಳಿ ಮಾಡಿದ್ದರು. ದಾಳಿ ವೇಳೆ ಅಧಿಕಾರಿಗಳು ಹಲವು ಮನೆಗಳನ್ನು ಧ್ವಂಸಗೊಳಿಸಿ, ಮಹಿಳೆಯರ ಮೇಲೆ ಹಲ್ಲೆಗೈದು ಕ್ರೂರವಾಗಿ ನಡೆಸಿಕೊಂಡಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದರು. 

ಘಟನೆ ವೇಳೆ ಜನ ಜಾನುವಾರುಗಳ ಮೇಲೆ ಕೂಡಾ ಕ್ರೌರ್ಯ ಮೆರೆಯಲಾಗಿತ್ತು ಎನ್ನುವ ಅರೋಪವೂ ಇತ್ತು. ದಾಳಿ ವೇಳೆ ತಾವು ಅತ್ಯಾಚಾರಕ್ಕೊಳಗಾಗಿದ್ದಾಗಿ ಗ್ರಾಮದ 18 ಮಹಿಳೆಯರು ಕೆಲವು ದಿನದ ಬಳಿಕ ಸಂಕಷ್ಟ ತೋಡಿಕೊಂಡಿದ್ದರು. ಘಟನೆ ನಡೆದ ಮೂರು ವರ್ಷಗಳ ಬಳಿಕ ಸಿಪಿಎಂ ಪಕ್ಷದ ವತಿಯಿಂದ 1995ರಲ್ಲಿ ಕೋರ್ಟ್‌ಗೆ ದಾವೆ ಸಲ್ಲಿಸಿದರು. 

ಪ್ರಾಥಮಿಕ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತು. ಸುದೀರ್ಘಾವಧಿಯ ಸಿಬಿಐ ತನಿಖೆ ಮತ್ತು ವಿಚಾರಣೆಯ ಬಳಿಕ 2011ರ ಸೆಪ್ಟೆಂಬರ್ 29ರಂದು ವಿಚಾರಣಾ ನ್ಯಾಯಾಲಯ ತೀರ್ಪನ್ನು ನೀಡಿತ್ತು ಎನ್ನಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.