ರೂಮ್ ಗೆ ಕರೆದ್ರೇ ಯಾಕ್ರೀ ಹೋಗ್ತೀರಾ, ಕನ್ನಡದ ನಟಿಮಣಿಯರಿಗೆ ಟಾಂಗ್ ಕೊಟ್ಟ ಹಿರಿಯ ನಟಿ ಭಾವನಾ

 | 
Gu
 ಮಲಯಾಳಂ ಸಿನಿಮಾ ರಂಗದಲ್ಲಿ ನಟಿಯರಿಗೆ ಲೈಂಗಿಕ ದೌರ್ಜನ್ಯ ಕುರಿತಂತೆ ವರದಿ ಸಲ್ಲಿಸಿದ್ದ ಹೇಮಾ ಸಮಿತಿ ಮಾದರಿಯಲ್ಲಿ ಸ್ಯಾಂಡಲ್‌ವುಡ್‌ಗೂ ಒಂದು ಸಮಿತಿ ರಚಿಸಬೇಕು ಎಂದು ಸಿನಿರಂಗದ ಹಲವರು ಮನವಿ ಮಾಡಿದ್ದರು. ಇದೀಗ ನಮ್ಮ ಸ್ಯಾಂಡಲ್‌ವುಡ್‌ಗೆ ಅಂತಹ ಕಮಿಟಿ ಬೇಡ ಎನ್ನುವ ಕೂಗು ಕಲಾವಿದರಿಂದಲೇ ಕೇಳಿ ಬಂದಿದೆ.
ಕನ್ನಡ ಚಿತ್ರರಂಗದ ನಟಿ ಭಾವನಾ ರಾಮಣ್ಣ ಅವರು ಸಮಿತಿ ರಚನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ಫಿಲ್ಮ್‌ ಚೇಂಬರ್‌ನಲ್ಲಿ ನಡೆದ ಕಲಾವಿದರ ಸಭೆಯಲ್ಲಿ ನಟಿ ಭಾವನಾ ಈ ರೀತಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.ಹೆಣ್ಣು ಅಂದಾಗ ಕೆಲವು ಸಮಸ್ಯೆಗಳು ಬರುವುದು ಸಹಜ. ಇಂಡಸ್ಟ್ರಿ ಅಂದ ಮೇಲೆ ಅದು ಇದ್ದೇ ಇರುತ್ತದೆ. 
ಈಗೆಲ್ಲ 100 ಮದುವೆಗಳಲ್ಲಿ 10 ಮದುವೆ ಉಳಿದರೆ ಅದೇ ಹೆಚ್ಚು. ಒಂದು ವೇಳೆ ನಮ್ಮ ಕನ್ನಡ ಚಿತ್ರರಂಗದಲ್ಲೂ ಆ ರೀತಿ ಕೆಟ್ಟದ್ದು ಇದೆ ಎನ್ನುವುದಾದರೆ ಅಲ್ಲಿ ಕೆಲಸ ಮಾಡಲು ಹೋಗಬೇಡಿ. ಕಾಸ್ಟಿಂಗ್ ಕೌಚ್‌ನ ಕೂಗು ನಮ್ಮ ಇಂಡಸ್ಟ್ರಿಯಲ್ಲಿ ಕೇಳಿ ಬಂದಿಲ್ಲ ಎಂದು ನಟಿ ಭಾವನಾ ಹೇಳಿದ್ದಾರೆ.ಫೈರ್‌' ಸಂಸ್ಥೆ ವಿರುದ್ಧವೂ ಗುಡುಗಿರುವ ಭಾವನಾ, ಕೆಲವರು ಸಮಾನ ಮನಸ್ಕರು ಗುಂಪು ಕಟ್ಟಿಕೊಂಡು, ಅದಕ್ಕೆ ಫೈರ್ ಸಂಸ್ಥೆ ಎಂದು ಬಿಂಬಿಸಿದ್ದಾರೆ.
ಸಿನಿಮಾ ಅವಕಾಶದ ಆಸೆಗೆ ಹೆಣ್ಣುಮಕ್ಕಳು ಹೇಳಿದಂತೆ ಕೇಳೋದು ಯಾಕೆ.ಕರೆದಲ್ಲಿ ಹೋಗೋದು ಯಾಕೆ ಹೆಣ್ಣುಮಕ್ಕಳಿಗೆ ಏನಾದರೂ ಸಮಸ್ಯೆಗಳಾದರೆ ಅದಕ್ಕೆಂದೇ ಫಿಲ್ಮ್‌ ಚೇಂಬರ್‌ ಇದೆ. ಕಲಾವಿದರು ಹಾಗು ನಿರ್ಮಾಪಕರ ಸಂಘಗಳೂ ಇವೆ. ಅಲ್ಲಿ ಹೋಗಿ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು. ಅದಕ್ಕಾಗಿ ಹೊಸ ಸಂಘ ಮಾಡಬೇಕಾದ ಅಗತ್ಯವಿಲ್ಲ ಎಂದು ಫೈರ್‌ ವಿರುದ್ಧ ಮಾತನಾಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ