ಬಿಗ್ಬಾಸ್ ಮನೆಗೆ ಹಿರಿಯ ನಟಿ ಪ್ರೇಮಾ ಎಂಟ್ರಿ, ಉಳಿದ ಸ್ಫಧಿ೯ಗಳಿಗೆ ನಡುಕ ಶುರು

 | 
Hd
 ಇನ್ನೇನು ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮದ ಎರಡು ಪ್ರೋಮೋಗಳು ರಿಲೀಸ್ ಆಗಿವೆ. ಹೊಸ ಸೀಸನ್‌ನ ನಿರೂಪಕ ಯಾರು ಎಂಬುದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಚರ್ಚೆ ನಡೆಯುತ್ತಿದೆ. ಈ ಬಾರಿ ಬಿಗ್ ಬಾಸ್‌’ ಕಾರ್ಯಕ್ರಮದಲ್ಲಿ ಹೋಸ್ಟ್‌ ಆಗಿ ಕಿಚ್ಚ ಸುದೀಪ್‌ ಮುಂದುವರೆಯುತ್ತಾರೋ ಇಲ್ವೋ ಎಂಬ ಡೌಟ್‌ ಇನ್ನೂ ವೀಕ್ಷಕರಿಗೆ ಕಾಡುತ್ತಿದೆ.
ಈಗ ಅಂಥದ್ದೇ ಹೊಸ ಗಾಸಿಪ್‌ವೊಂದು ಕಿವಿಗೆ ಬಿದ್ದಿದೆ. ಒಂದ್ಕಾಲದಲ್ಲಿ ಕನ್ನಡ ಚಿತ್ರರಂಗವನ್ನಾಳಿದ ಕೊಡಗಿನ ಬ್ಯೂಟಿ… ಸೂಪರ್ ಹಿಟ್‌ ಚಿತ್ರಗಳ ನಾಯಕಿ… ನಟಿ ಪ್ರೇಮಾ ಈ ಬಾರಿ ಬಿಗ್ ಬಾಸ್ ಕನ್ನಡ 11ಕಾರ್ಯಕ್ರಮದಲ್ಲಿ ಸ್ಪರ್ಧಿಸುತ್ತಾರಂತೆ. ಹಾಗಂತ ಸಾಮಾಜಿಕ ಜಾಲತಾಣದ ತುಂಬೆಲ್ಲಾ ಗುಲ್ಲೋ ಗುಲ್ಲು.
ಅಸಲಿಗೆ, ಬಿಗ್ ಬಾಸ್‌’ ಮನೆಗೆ ನಟಿ ಪ್ರೇಮಾ ಬರ್ತಾರಂತೆ ಎಂಬ ಅಂತೆ-ಕಂತೆ ಇಂದು ನಿನ್ನೆಯದ್ದಲ್ಲ. ಈ ಹಿಂದಿನ ಸೀಸನ್‌ಗಳಲ್ಲೂ ನಟಿ ಪ್ರೇಮಾ ಹೆಸರು ಕೇಳಿಬಂದಿತ್ತು. ಆದರೆ, ಈವರೆಗೂ ಬಿಗ್ ಬಾಸ್‌ ಕಡೆಗೆ ತಿರುಗಿ ನೋಡದ ಪ್ರೇಮಾ ಈ ಬಾರಿ ಬಿಗ್ ಬಾಸ್’ ಮನೆಯೊಳಗೆ ಬಲಗಾಲಿಟ್ಟು ಬರ್ತಾರಾ? ಎಂಬ ಪ್ರಶ್ನೆ ಕಾಡ್ತಿದೆ.
ಸಿನಿಮಾರಂಗದಿಂದ ಕೊಂಚ ಗ್ಯಾಪ್ ಪಡೆದಿದ್ದ ಪ್ರೇಮಾ ಮತ್ತೆ ಸಿನಿಮಾಗಳಲ್ಲಿ ಅಭಿನಯಿಸಲು ಆರಂಭಿಸಿದರು. ಜಾಹೀರಾತುಗಳಲ್ಲೂ ಪ್ರೇಮಾ ಕಾಣಿಸಿಕೊಂಡರು. ಇತ್ತೀಚೆಗಷ್ಟೇ ಮಹಾನಟಿ ರಿಯಾಲಿಟಿ ಶೋನಲ್ಲಿ ನಟಿ ಪ್ರೇಮಾ ತೀರ್ಪುಗಾರರ ಸ್ಥಾನ ಅಲಂಕರಿಸಿದ್ದರು. ಈಗ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಆದ ‘ಬಿಗ್ ಬಾಸ್’ ಮನೆಗೆ ಪ್ರೇಮಾ ಸ್ಪರ್ಧಿಯಾಗಿ ಹೋಗ್ತಾರಾ ಎಂಬುದೇ ಸದ್ಯದ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.