ಮತ್ತೆ ಗಭಿ೯ಣಿಯಾದ ಹಿರಿಯ ನಟಿ ತಾರಾ, ಕನ್ನಡಿಗರಿಗೆ ಶಾಕ್ ಮೇಲೆ ಶಾಕ್
ವೈರಲ್ ಅಗುತ್ತಿದೆ ನಟಿ ತಾರಾ ಅನುರಾಧ ಫೋಟೋ. ಮತ್ತೆ ತಾಯಿಯಾಗುತ್ತಿದ್ದೀರಾ ಎಂದು ಹುಬ್ಬೇರಿಸುವಂತೆ ಮಾಡಿದ್ದಾರೆ. ಹೌದು ಕನ್ನಡ ಚಿತ್ರರಂಗದಲ್ಲಿ, ರಾಜಕೀಯದಲ್ಲಿ ಮತ್ತು ಕನ್ನಡ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ನಟಿ ತಾರಾ ಅನುರಾಧ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಅಗುತ್ತಿದೆ.
ಹಳದಿ ಮತ್ತು ಕೆಂಪು ಕಾಟನ್ ಸೀರೆಯಲ್ಲಿ ಬೇಬಿ ಬಂಪ್ ಹಿಡಿದುಕೊಂಡು ತಾರಾ ಅನುರಾಧ ಪೋಸ್ ಕೊಟ್ಟಿದ್ದಾರೆ. ತಾರಾ ಎರಡನೇ ಬಾರಿ ತಾಯಿಯಾಗುತ್ತಿದ್ದಾರೆ ಎಂದು ಕಾಮೆಂಟ್ ಹರಿದಾಡುತ್ತಿದೆ. ಅಲ್ಲದೆ ಕೆಲವರು ತಾರಾ ಅವರಿಗೆ ವಿಶ್ ಮಾಡಲು ಮುಂದಾಗಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಮಕ್ಕಳನ್ನು ಮುದ್ದು ಮಾಡುತ್ತಿದ್ದ ರೀತಿ ನೋಡಿ ತಾರಾ ಗ್ರೇಟ್ ಅಮ್ಮ ಎನ್ನುತ್ತಿದ್ದರು.
ಆದರೆ ಈ ಫೋಟೋದ ಹಿಂದೆ ಡಿಫರೆಂಟ್ ಸ್ಟೋರಿ ಇದೆ. ಉಸಿರೇ ಉಸಿರೇ ಚಿತ್ರದಲ್ಲಿ ತಾರಾ ಅಭಿನಯಿಸುತ್ತಿದ್ದು, ಈ ಚಿತ್ರದ ಲುಕ್ ಎನ್ನಲಾಗಿದೆ.ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ರಾಜೀವ್ ನಟನೆಯ ಉಸಿರೇ ಉಸಿರೇ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಕಿಚ್ಚ ಸುದೀಪ್ ಬೆಂಬಲವಿದೆ.
ಎನ್ ಗೊಂಬೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರದೀಪ್ ಯಾದವ್ ನಿರ್ಮಾಣ ಮಾಡುತ್ತಿದ್ದಾರೆ. ಶ್ರೀಜಿ ಘೋಷ್ ನಾಯಕಿಯಾಗಿ ಕಾಣಿಸಿಕೊಳ್ಳಿದ್ದು, ವಿವೇಕ್ ಚಕ್ರವರ್ತಿ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ಕಿರುತೆರೆಯಲ್ಲಿ ರಾಜಾ ರಾಣಿ ಹಾಗೂ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ನಟಿ ತಾರಾ ಅನುರಾಧಾ ಭಾಗವಹಿಸಿದ್ದರು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.