ಬಿ,ಕಿನಿಯಲ್ಲೇ ಬಸ್ ಹತ್ತಿದ ಮಹಿಳೆ, ಎಲ್ಲೆಡೆ ವೈರಲ್ ಆದ ವಿಡಿಯೋ

 | 
ಹಹ

ಸಮಾನ್ಯವಾಗಿ ಬೀಚ್ ಅಲ್ಲಿ ಬಿಕಿನಿ ಧರಿಸಿ ಎಂಜಾಯ್ ಮಾಡೋದನ್ನು ನೋಡಿರುತ್ತೀರಿ. ಆದರೆ ಮಹಿಳೆಯೊಬ್ಬಳು ಜನರಿಂದ ತುಂಬಿದ್ದ ಬಸ್ ನಲ್ಲಿ ಬಿಕಿನಿ ಧರಿಸಿ ಪ್ರಯಾಣಿಸಿದ ವಿಡಿಯೋ ವೈರಲ್ ಆಗಿದೆ. ಈ ಕುರಿತು  ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶವೂ ವ್ಯಕ್ತವಾಗಿದೆ.

ಕೆಲ ದಿನಗಳ ಹಿಂದಷ್ಟೇ ಎಲ್ಲಡೆ ವೈರಲ್ ಆದ ಈ  ವೀಡಿಯೋ ಅಲ್ಲಿ ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿದ ವಿಡಿಯೋದಲ್ಲಿ, ಬಿಕಿನಿ ಧರಿಸಿದ ಮಹಿಳೆ ಬಸ್ ಹತ್ತಿ ಬಾಗಿಲಿನ ಬಳಿ ನಿಂತಿರುವುದು ಕಂಡುಬಂದಿದೆ. ಆಕೆಯನ್ನು ಕಂಡು ಕೆರಳಿದ, ಆಕೆಯ ಬಳಿ ನಿಂತಿದ್ದ ಇನ್ನೊಬ್ಬ ಮಹಿಳೆ ಅಲ್ಲಿಂದ ದೂರ ಹೋಗಿದ್ದಾರೆ.

ಅಷ್ಟಕ್ಕೂ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಪಡೆಯಲು ಈ ರೀತಿ ಮಾಡುವುದು ದುರದೃಷ್ಟಕರ. ಸ್ಥಳೀಯ ಬಸ್ಸುಗಳಲ್ಲಿ ಅಥವಾ ರೈಲುಗಳಲ್ಲಿ ಇದನ್ನು ವಿದೇಶದಲ್ಲಿಯೂ ನೋಡಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಗಂಡಸರನ್ನು ಇದು ಇರಿಸು ಮುರಿಸು ಮಾಡಿದ್ದಂತೂ ನಿಜ.

ಇನ್ನೂ ಹಲವರು ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವೈರಲ್ ಆಗಿರುವ ವಿಡಿಯೋ ಬಗ್ಗೆ ಅಧಿಕಾರಿಗಳು ಇನ್ನೂ ಪ್ರತಿಕ್ರಿಯಿಸಿಲ್ಲ.ಮಹಿಳೆಯರು ಈ ರೀತಿ ವರ್ತಿಸಿದರೆ ಸಾರ್ವಜನಿಕ ಪ್ರದೇಶದಲ್ಲಿ ತಲೆ ಎತ್ತಿ ನಡೆಯಲೂ ಅಸಾಧ್ಯ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.