ವಿಡಿಯೋ ತೆಗಿಬೇಡಾ, ಬಿಗ್ಬಾಸ್ ವಿನಯ್ ರಕ್ಷಕ್ ಸ್ನೇಹಿತ್ ಗೌಡ ಭಜ೯ರಿ ಪಾಟಿ೯
ಬಿಗ್ ಬಾಸ್ ವಿನಯ್ ಗೌಡ ಮತ್ತು ಸ್ನೇಹಿತ್ ಒಟ್ಟಿಗೆ ಎಲ್ಲೂ ಕಾಣಿಸಿಕೊಂಡಿದಿಲ್ಲ. ಬಿಗ್ ಬಾಸ್ ಮನೆಯಲ್ಲಿ ಗಾಢವಾದ ಸ್ನೇಹ ಬೆಳೆಸಿಕೊಂಡಿದ್ದ ಈ ಸ್ನೇಹಿತರು ಹೊರಗಡೆ ಬಂದ್ಮೇಲೆ ಒಟ್ಟಾಗಿ ಓಡಾಡಲೇ ಇಲ್ಲ. ಮೈಕಲ್, ನಮ್ರತಾ, ರಕ್ಷಕ್ ಇವರೇ ಜೊತೆಗೆ ಇರ್ತಾ ಇದ್ದರು. ಇದನ್ನ ನೋಡಿ ಅನೇಕರು ಸ್ನೇಹಿತ್ ಎಲ್ಲಿ ಸ್ನೇಹಿತ್ ಎಲ್ಲಿ ಅಂತಲೇ ಕೇಳೋರು. ಆದರೆ ಇದೀಗ ಸಡನ್ ಆಗಿಯೇ ಸ್ನೇಹಿತ್ ಮತ್ತು ವಿನಯ್ ಜೊತೆ ಜೊತೆಯಾಗಿಯೇ ಕಾಣಿಸಿಕೊಂಡಿದ್ದಾರೆ.
ವಿಶೇಷವಾಗಿ ಈ ಸ್ನೇಹಿತರು ತಮ್ಮ ದೈನಂದಿನ ಜಿಮ್ ವರ್ಕೌಟ್ ಟೈಮ್‌ನಲ್ಲಿಯೇ ಮುಖಾ-ಮುಖಿ ಆಗಿದ್ದಾರೆ. ಆದರೆ ಇಲ್ಲಿ ಸ್ನೇಹಿತ್ ವರ್ಕೌಟ್ ಮಾಡ್ತಿದ್ರೆ, ಲಿಫ್ಟಿಂಗ್ ಡೌನ್ ಆದಾಗ ವಿನಯ ಗೌಡ ಬಂದು ಸ್ನೇಹಿತ್‌ಗೆ ಹೆಲ್ಪ್ ಮಾಡ್ತಾರೆ. ಅದನ್ನು ನೋಡಿ ಅಭಿಮಾನಿಗಳು ಮಾತ್ರ ಸಕತ್ ಖುಷಿ ಆಗಿದ್ದಾರೆ.
ಬಿಗ್ ಬಾಸ್ ಕನ್ನಡ 10’ ಗ್ರ್ಯಾಂಡ್ ಫಿನಾಲೆ ಮುಗಿದ್ಮೇಲೆ ವಿನಯ್ ಗೌಡ, ನಮ್ರತಾ ಗೌಡ, ರಕ್ಷಕ್ ಬುಲೆಟ್ ಹಾಗೂ ಮೈಕಲ್ ಮೈಸೂರಿಗೆ ಭೇಟಿ ಕೊಟ್ಟಿದ್ದರು. ಚಾಮುಂಡಿ ಬೆಟ್ಟಕ್ಕೆ ಹೋಗಿ, ದೇವಿಯ ದರ್ಶನ ಪಡೆದಿದ್ದರು. ಇದಾದ ಬಳಿಕ ಪಾಪರೆಡ್ಡಿಪಾಳ್ಯ ಗ್ಯಾಂಗ್ ಎಂದೇ ಖ್ಯಾತಿ ಪಡೆದಿದ್ದ ವಿನಯ್ ಗೌಡ, ನಮ್ರತಾ ಗೌಡ, ರಕ್ಷಕ್ ಬುಲೆಟ್, ಮೈಕಲ್ ಅಜಯ್, ಪವಿ ಪೂವಪ್ಪ ಹಾಗೂ ಇಶಾನಿ ಒಟ್ಟಿಗೆ ಪಾರ್ಟಿ ಮಾಡಿದ್ದರು.
ಹೌದು ಇತ್ತೀಚಿಗೆ ವಿನಯ್ ಗೌಡ, ನಮ್ರತಾ ಗೌಡ, ಸ್ನೇಹಿತ್ ರಕ್ಷಕ್ ಬುಲೆಟ್, ಮೈಕಲ್ ಅಜಯ್, ಪವಿ ಪೂವಪ್ಪ ಹಾಗೂ ಇಶಾನಿ ಹೊಟೇಲ್ ಹೋಗಿದ್ದಾರೆ. ಆಗ ಫೋಟೋ ಕ್ಲಿಕ್ ವೀಡಿಯೊ ಮಾಡಲು ಬಂದ ಆಭಿಮಾನಿಗಳಿಗೆ ಬೇಡಾ ಅಂದಿದ್ದಾರೆ. ನೆಮ್ಮದಿಯಾಗಿ ಊಟ ಮಾಡೋಕೆ ಬಿಡಿ ಎಂದಿದ್ದಾರೆ. ಮೊದಲಿನಿಂದಲೂ ತಾನಾಯಿತು ತನ್ನ ಕೆಲಸವಾಯಿತು ಅಂತಿರುವ ಸ್ನೇಹಿತ್ ಯಾವುದೇ ವಿನಾಕಾರಣ ಮಾತಿಗೆ ತಲೆ ಹಾಕುವುದಿಲ್ಲ ಎಂದಿದ್ದಾರೆ ಅಭಿಮಾನಿಗಳು
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.