ಕನ್ನಡದ ಮಾಧ್ಯಮಗಳ ವಿರುದ್ಧ ರೊ ಚ್ಚಿಗೆದ್ದ ವಿಜಯ ರಾಘವೇಂದ್ರ, ನಿಮ್ಗೆ ದಶ೯ನ್ ಮಾತ್ರ ಕಾಣಿಸೋದಾ

 | 
ಹಾ
 ರೇಣುಕಾಸ್ವಾಮಿ ಕ್ರೂರ ಕೊಲೆ ಕೇಸ್​ನಲ್ಲಿ ದರ್ಶನ್​ ಸೇರಿ ಒಟ್ಟು 17 ಆರೋಪಿಗಳು ಜೈಲಿನಲ್ಲಿದ್ದಾರೆ. ನಟ ದರ್ಶನ್​ ಜೈಲಿಗೆ ಸೇರುತ್ತಿದ್ದಂತೆ ಸ್ಯಾಂಡಲ್​ವುಡ್​ ನಟ ನಟಿಯರು, ಕುಟುಂಬಸ್ಥರು, ಆತ್ಮೀಯರು ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಡುತ್ತಿದ್ದಾರೆ. ಈ ಬಗ್ಗೆ ಹಲವಾರು ಮಂದಿ ಭಿನ್ನ, ವಿಭಿನ್ನವಾದ ಪ್ರತಿಕ್ರಿಯೆಗಳನ್ನು ಕೊಡುತ್ತಿದ್ದಾರೆ.
ನಟ ದರ್ಶನ್​ ಜೈಲು ಸೇರಿದ ಬಳಿಕ ಇದೇ ಮೊದಲ ಬಾರಿಗೆ ಸ್ಯಾಂಡಲ್​ವುಡ್ ನಟ ವಿಜಯ್ ರಾಘವೇಂದ್ರ ಅವರು ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಬಗ್ಗೆ ಮಾತಾಡಿರುವ ವಿಜಯ್ ರಾಘವೇಂದ್ರ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಭಾಗಿ ಆಗಿರೋದು ನೋವು ತರಿಸಿದೆ. ದರ್ಶನ್ ನಮ್ಮ‌ ಕುಟುಂಬದವ್ರು.‌ ನಮ್ಮ ಸೀನಿಯರ್. ದಯವಿಟ್ಟು ಈ ವಿಚಾರದಿಂದ ಎಲ್ಲರೂ ಹೊರಗೆ ಬರಬೇಕು. ಇದನ್ನು ನಾನು ಬೆಳವಣಿಗೆ ಅಂತಾ ಕರಿಯೋಕೆ ಇಷ್ಟ ಪಡಲ್ಲ.
 ಎಲ್ಲಿ ನೋಡಿದ್ರೂ ಬರೀ ರೇಣುಕಾಸ್ವಾಮಿ ಪ್ರಕರಣ ಸುದ್ದಿಯೇ ಓಡಾಡ್ತಿದೆ. ಡೆವಿಲ್ ಸಿನಿಮಾದ ನಿಂತಿರೋದು ಮಿಲನಾ ಪ್ರಕಾಶ್​​ ಅವರಿಗೂ ನೋವು ತಂದಿದೆ . ಮಾದ್ಯಮದವರು ನೋಡಿಕೊಂಡು ಸತ್ಯಾ ಸತ್ಯತೆ ಅರಿತುಕೊಂಡು ನ್ಯೂಸ್ ಮಾಡಿ. ಮನೆಯಲ್ಲಿ ಮಕ್ಕಳು ಪಾಲಕರು ಎಲ್ಲರೂ ನೋಡುತ್ತಾರೆ. ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರುತ್ತದೆ.
ಸುಮ್ಮನೆ ನಿಮ್ಮ ಸಿಟ್ಟಿಗೆ ದರ್ಶನ್ ಅವರನ್ನು ಬಲಿಯಾಗಿಸಬೇಡಿ. ತಪ್ಪು ಮಾಡಿದ್ರೆ ಕೋರ್ಟು ಕಚೇರಿ ಇದೆ. ಕುಳಿತಲ್ಲೇ ಎಲ್ಲವನ್ನು ಹೇಳಬೇಡಿ ಆದಷ್ಟು ಬೇಗ ಈ ಕಹಿ ಪರಿಸ್ಥಿತಿಯಿಂದ ನಮ್ಮ ಚಿತ್ರರಂಗ ಹೊರಗಡೆ ಬರಲಿ, ಕರ್ನಾಟಕ ಹೊರಗಡೆ ಬರಲಿ’ ಎಂದು ವಿಜಯ್​ ರಾಘವೇಂದ್ರ ಹೇಳಿದ್ದಾರೆ. ದರ್ಶನ್​ ಅವರು ಜೈಲು ಸೇರಿರುವುದು ತಮಗೆ ಬೇಸರ ಮೂಡಿಸಿದೆ ಎಂದು ಅವರು ಹೇಳಿದ್ದಾರೆ. 
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.