ಪ್ರತಿಷ್ಠಿತ ಡಾಕ್ಟರ್ ಜೊತೆ ವಿಜಯ್ ರಾಘವೇಂದ್ರ ಮದುವೆ, ಮಗನ ಭವಿಷ್ಯಕ್ಕೆ ಇದು ಸರಿಯಾದ ನಿರ್ಧಾರ
Nov 12, 2024, 18:31 IST
|
ಹೆಂಡತಿ ಸ್ಪಂದನ ಮೃತ ಪಟ್ಟ ನಂತರ ನಟ ವಿಜಯ ರಾಘವೇಂದ್ರ ಅಕ್ಷರಶಃ ಅನಾಥವಾಗಿದ್ದರು. ಮಗನಿಗಾಗಿ ಬದುಕಬೇಕು ಎಂದು ಮತ್ತೆ ಸಿನಿಮಾಗಳಲ್ಲಿ ನಟಿಸತೊಡಗಿದರು. ಹೊಸ ಹೊಸ ಸಿನಿಮಾ ಪ್ರಾಜೆಕ್ಟ್ ತೆಗೆದುಕೊಂಡರು. ನಿಜ ಜೀವನದಲ್ಲಂತೂ ಎರಡನೇ ಮದುವೆ ಬಗ್ಗೆ ತಲೆಕೆಡಿಸಿಕೊಳ್ಳದ ಚಿನ್ನಾರಿ ಮುತ್ತ ಸಿನಿಮಾದಲ್ಲಿ ಡಾಕ್ಟರ್ ಒಬ್ಬರನ್ನ ಮದುವೆ ಆಗಲಿದ್ದಾರೆ.
ಹೌದು ರಿಪ್ಪನ್ ಸ್ವಾಮಿಯಲ್ಲಿ ವಿಜಯ್ ರಾಘವೇಂದ್ರ ಅವರ ಹೆಂಡತಿ ಪಾತ್ರ ನಿರ್ವಹಿಸಿದ್ದಾರೆ. ಡಾಕ್ಟರ್ ಪಾತ್ರವಾಗಿದ್ದರು, ಕೌಟುಂಬಿಕ ಪಾತ್ರದ ಮಹತ್ವ ಸಾರುವಂಥ ಪಾತ್ರವದು. ರಿಪ್ಪನ್ ಸ್ವಾಮಿ ಸಿನಿಮಾದಲ್ಲಿ ಹೀರೋಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಹೀರೋಯಿನ್ ಗು ಇದೆ. ಎರಡು ಕೂಡ ಸಮಾನವಾಗಿರುವಂಥ ಪಾತ್ರವದು. ಹೀಗಾಗಿ ಅಶ್ವಿನಿ ಅವರ ಪಾತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಿವೆ. ಸದ್ಯ ರಿಪ್ಪನ್ ಸ್ವಾಮಿ ಸಿನಿಮಾ ಸೆನ್ಸಾರ್ ಅಂಗಳದಲ್ಲಿದ್ದು, ಶೀಘ್ರವೇ ರಿಲೀಸ್ ಆಗಲಿದೆ.
ನಟಿ ಅಶ್ವಿನಿ ಚಂದ್ರಶೇಖರ್ ಮೂಲತಃ ಶಿವಮೊಗ್ಗದವರು. ಓದಿದ್ದೆಲ್ಲಾ ಬೆಂಗಳೂರಿನಲ್ಲಿ. ಇಂಜಿನಿಯರಿಂಗ್ ಮುಗಿಸಿದ ಅಶ್ವಿನಿ ಅವರಿಗೆ ಸೆಳೆದಿದ್ದು ಚಿತ್ರೋದ್ಯಮ. ಸೀದಾ ಈ ಕಡೆ ಬಂದ ಇಂಜಿನಿಯರ್ ತಮ್ಮ ನಟನಾ ಕೌಶಲ್ಯದಿಂದ ಕನ್ನಡ, ತಮಿಳು, ತೆಲುಗು ಇಂಡಸ್ಟ್ರಿಯಲ್ಲಿ ತಮ್ಮದೇ ಸ್ಥಾನ ಪಡೆದರು. ಅಶ್ವಿನಿ ಅವರು ಒಳ್ಳೆಯ ಡ್ಯಾನ್ಸರ್ ಕೂಡ. ಅದರಲ್ಲೂ ಡ್ಯಾನ್ಸ್ ನಲ್ಲಿ ವಿದ್ವತ್ ಮುಗಿಸಿದ್ದಾರೆ.
ಈಗಾಗಲೇ ನಟಿ ಅಶ್ವಿನಿ ಚಂದ್ರಶೇಖರ್ ಕನ್ನಡದಲ್ಲಿ ಪ್ರೇಮ ಪಲ್ಲಕ್ಕಿ, ಒಂದು ರೋಮ್ಯಾಂಟಿಕ್ ಪ್ರೇಮ ಕತೆ, ಆಕ್ಟೋಪಸ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಪ್ರೇಮ್ ಕಹಾನಿ, ಮಧ್ಯಲೋ ಪ್ರಭಾಸ್ ಪಳ್ಳಿ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲೂ ನಟಿಸೊರುವ ನಟಿ ಮೆರ್ಲಿನ್, ಪರಂಜು ಸೆಲ್ಲವ, ಕಾಲ್ ಟ್ಯಾಕ್ಸಿ, ಜಿವಿ2 ಸಿನಿಮಾದಲ್ಲಿ ನಟಿಸಿದ್ದಾರೆ.
ಜಿವಿ2ಗೆ ಬೆಸ್ಟ್ ಡಿಬೇಟ್ ಅವಾರ್ಡ್ ಕೂಡ ಬಂದಿದೆ. ಜಿ3 ಸಿನಿಮಾದ ಶೂಟಿಂಗ್ ಈಗ ಶುರುವಾಗ್ತಾ ಇದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.