'ಪತ್ನಿ ಸಾ ವಿನ ಒಂದು ವರ್ಷಗಳ ಬಳಿ ವಿಜಯ್ ರಾಘವೇಂದ್ರ ಹೊಸ ನಿರ್ಧಾರ'

 | 
Gw

ಕೆಲ ತಿಂಗಳುಗಳ ಹಿಂದಷ್ಟೇ ಪತ್ನಿ ಸ್ಪಂದನಾ ಅವರನ್ನು ದೂರ ಮಾಡಿಕೊಂಡ ನಟ ವಿಜಯ್ ರಾಘವೇಂದ್ರ ಅವರು ಪತ್ನಿ ಇಲ್ಲ ಜೀವನವನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದೇನೆ, ದುಃಖ ಸಮಯದಲ್ಲಿ ಕನ್ನಡಿಗರು ನನಗೆ ಆಸರೆಯಾಗಿದ್ದಕ್ಕೆ ಧನ್ಯವಾದ ಅಂತ ಹೇಳಿದ್ದಾರೆ. ಇತ್ತೀಚಿಗೆ ಕೊಂಚ ಚೇತರಿಸಿ ಕೊಂಡಂತೆ ಕಾಣುತ್ತಿದ್ದರು.

ಕನ್ನಡ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ವಿಜಯ್ ರಾಘವೇಂದ್ರ ಅವರು, ಆತ್ಮೀಯರನ್ನು ದೂರ ಮಾಡಿಕೊಳ್ಳುವ ಅನುಭವ ಯಾರಿಗೂ ಆಗೋದು ಬೇಡ. ಸಾಕಷ್ಟು ಕನಸು ಕಟ್ಟಿಕೊಂಡಿರುತ್ತೇವೆ, ನಿರೀಕ್ಷೆಯನ್ನು ಮೀರಿ ಆಸೆ ಇಟ್ಟುಕೊಂಡಾಗ ನೋವು ಕಡಿಮೆ ಆಗುತ್ತೆ. ಆಶಯ ಮೀರಿ ನಿರೀಕ್ಷೆ ಇಟ್ಟುಕೊಂಡಾಗ ನೋವು ಜಾಸ್ತಿ ಆಗುತ್ತೆ. ಅದನ್ನ ಬಹಳ ಗಟ್ಟಿಯಾಗಿ ಜೀವನದಲ್ಲಿ ರೂಢಿಸಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.

ಬೆಳಗ್ಗೆ ಎದ್ದ ಕ್ಷಣದಿಂದ ಹಿಡಿದು ಮಲಗುವವರೆಗೂ ಒಂದು ಸ್ಪರ್ಕ್​ ಇರುತ್ತೆ. ಒಂದು ನಗು, ಆತುರ, ಖುಷಿ ಇರುತ್ತಿತ್ತು. ಮನೆಗೆ ಬಂದಾಗ ನಮ್ಮೊಂದಿಗೆ ಇರುವವರಿಗಾಗಿ ಕಾಯೋದು ಸದಾ ಎಚ್ಚರಿಕೆ ನೀಡ್ತಾ ಇರುತ್ತೆ. ಕೆಲಸ ಬೇಗ ಮುಗಿಸಿ ಮನೆಗೆ ಬರೋ ಆತುರ ಇರುತ್ತೆ. ಈಗ ಅದು ಇಲ್ಲ ಅನ್ನೋದು ಬಹಳ ಕಷ್ಟ ಆಗುತ್ತೆ ಅಂತ ವಿಜಯ್ ರಾಘವೇಂದ್ರ ಹೇಳಿದ್ದಾರೆ.

ಅವಳಿಲ್ಲ ಎನ್ನುವ ಭಾವನೆ ಒಮ್ಮೊಮ್ಮೆ ಕಾಡುತ್ತದೆ. ಆದರೆ ಮಾತು ಕಡಿಮೆ, ಕೆಲಸ ಜಾಸ್ತಿ ಅನ್ನೋ ಗುಣ ಸ್ಪಂದನಾ ಅವರ ವ್ಯಕ್ತಿತ್ವ, ಇದೇ ನನ್ನನ್ನು ನನ್ನ ಮಗನನ್ನು ಮುಂದೆ ತೆಗೆದುಕೊಂಡು ಹೋಗ್ತಿದೆ . ನನ್ನೆಲ್ಲಾ ನಾಳೆಗಳು ಅವನಿಗಾಗಿ.ಅವನ ಭವಿಷ್ಯಕ್ಕಾಗಿ.ಮತ್ತೆಂದು ಮದುವೆ ಆಗುವ ಯೋಚನೆಯಿಲ್ಲ ಹೊಸ ಸಿನಿಮಾಗಳ ಮಾಡಬೇಕು. ಮಗ ಇಷ್ಟಪಟ್ಟರೆ ಸಿನೆಮಾ ಮಾಡಬೇಕು ಅದು ಸ್ಪಂದನ ಕನಸು ಕೂಡ.ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ.