ಮೀಡಿಯಾಗಳಿಗೆ ನೇರ ಟಾಂಗ್ ಕೊಟ್ಟು ಮೌನ ಮುರಿದ ವಿಜಯಲಕ್ಷ್ಮಿ
Sep 10, 2024, 12:14 IST
|
ನಟ ದರ್ಶನ್ ತನ್ನ ಗೆಳತಿ ಪವಿತ್ರಾ ಗೌಡರಿಂದಾಗಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ತನ್ನ ಆಪ್ತೆ ಪವಿತ್ರಾ ಗೌಡಾಗೆ ಅಶ್ಲೀಲ ಮೆಸೇಜ್ ಮಾಡಿದ್ದಾನೆ ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಎನ್ನುವವರನ್ನು ಕೊಲೆ ಮಾಡಿಸಿದ್ದಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾರೆ.
ಇದೇ ವೇಳೆ ಇಷ್ಟು ದಿನ ಸುಮ್ಮನಿದ್ದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಗಂಡನ ಪರವಾಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಪತಿ ಪರವಾಗಿ ವಾದ ಮಾಡುವಂತೆ ಖ್ಯಾತ ವಕೀಲರನ್ನು ಭೇಟಿಯಾಗಿದ್ದಾರೆ. ದರ್ಶನ್ ಪರವಾಗಿ ವಾದ ಮಾಡುವಂತೆ ಹಿರಿಯ ವಕೀಲ ಸಿ ವಿ ನಾಗೇಶ್ ಅವರನ್ನು ಮನವಿ ಮಾಡಿದ್ದಾರೆ.
ಇನ್ನು ಮಾಧ್ಯಮದವರ ಮೇಲೆ ಹರಿಹಾಯ್ದ ವಿಜಯಲಕ್ಷ್ಮೀ . ದರ್ಶನ್ ಬಿಟ್ಟು ಬೇರೆ ಯಾವುದೇ ವಿಷಯ ನಿಮ್ಮ ಬಳಿ ಇಲ್ವಾ. ದರ್ಶನ್ ರಿಲೀಸ್ ಆಗೋದಿನ ಹೇಳ್ತೀನಿ ಬಂದು ಹಿಡ್ಕೊಳ್ಳಿ. ಅದನ್ನು ಬಿಟ್ಟು ದಿನಾ ನಮ್ಮ ಹಿಂದೆ ಸುತ್ತಬೇಡಿ ಎಂದಿದ್ದಾರೆ.ಇನ್ನು, ದರ್ಶನ್ ಪತ್ನಿ ವಿಜಯಲಕ್ಷ್ಮಿ ಇಷ್ಟು ದಿನದಲ್ಲಿ ಪ್ರಕರಣದ ಬಗ್ಗೆ ಏನೂ ಮಾತನಾಡಿಲ್ಲ. ತನ್ನ ಗಂಡ ಮತ್ತೊಬ್ಬ ಹೆಂಗಸಿಗಾಗಿ ಜೈಲು ಪಾಲಾಗುವುದನ್ನು ಯಾವ ಹೆಂಡತಿಯು ಸಹಿಸುವುದಿಲ್ಲ.
ಹೀಗಾಗಿ ಕೋಪಗೊಂಡಿದ್ದ ವಿಜಯಲಕ್ಷ್ಮಿ ತನ್ನ ಪತಿ ದರ್ಶನ್ ಅರೆಸ್ಟ್ ಆದ ದಿನವೇ ಡಿಪಿ ತೆಗೆದಿದ್ದರು. ಬಳಿಕ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನೇ ಡಿಲೀಟ್ ಮಾಡಿದ್ದರು.ಆದರೆ, ಕೆಲ ದಿನಗಳ ಬಳಿಕ ಮತ್ತೆ ಇನ್‌ಸ್ಟಾಗ್ರಾಮ್ ಆಕ್ಟಿವ್ ಆಗಿದೆ. ಆದರೆ, ಈ ಹಿಂದೆ ತಾವು ಮಾಡಿದ್ದ ಎಲ್ಲ ಪೋಸ್ಟ್ ಗಳನ್ನು ವಿಜಯಲಕ್ಷ್ಮಿ ಡಿಲೀಟ್ ಮಾಡಿದ್ದಾರೆ. ಫಾಲೋ ಮಾಡುತ್ತಿದ್ದ ಎಲ್ಲರನ್ನು ಅನ್ ಫಾಲೋ ಮಾಡಿದ್ದಾರೆ.
ಇಲ್ಲಿ ಗಮನಿಸಬೇಕಾದದ್ದು, ಇನ್‌ಸ್ಟಾಗ್ರಾಮ್ ಅಕೌಂಟ್ ನಲ್ಲಿ ವಿಜಿ ದರ್ಶನ್ ಎಂದೇ ಇದೆ. ಬಯೋದಲ್ಲಿ ವಿಜಯಲಕ್ಷ್ಮಿ ದರ್ಶನ್ ಎಂಬುದು ಹಾಗೆ ಉಳಿಸಿಕೊಂಡಿದ್ದಾರೆ. ಇವೆಲ್ಲದರ ನಡುವೆ ಗಂಡನಿಗಾಗಿ ಕಾನೂನು ಹೋರಾಟಕ್ಕೆ ಸಿದ್ಧರಾಗಿ ಮಾದ್ಯಮಗಳಿಗೆ ತಿರುಗಿ ನಿಂತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.