ದರ್ಶನ್ ಕೂಗಿಗೆ ಎದ್ದು ಬಿದ್ದು ಓಡಿಬಂದ ವಿಜಯಲಕ್ಷ್ಮಿ
Apr 5, 2025, 08:48 IST
|

ಹೆಂಡತಿ ಅಂದ್ರೆ ಹೀಗಿರಬೇಕು ಎಂದು ತೋರಿಸಿಕೊಟ್ಟಿದ್ದು ವಿಜಯಲಕ್ಷ್ಮಿ ದರ್ಶನ್ ಅವರು ಹೌದು ದರ್ಶನ್ ತೂಗುದೀಪ್ ಕನ್ನಡ ಸಿನಿಮಾ ರಂಗದ ಹೀರೋ ಮಾತ್ರವಲ್ಲ, ದರ್ಶನ್ ತೂಗುದೀಪ್ ಅವರು ಕೋಟ್ಯಂತರ ಜನರಿಗೆ ಸಹಾಯ ಮಾಡಿ ಮಾದರಿ ಕೂಡ ಆಗಿದ್ದಾರೆ ಅನ್ನೋ ಮಾತು ಅವರ ಅಭಿಮಾನಿಗಳು ಹೇಳುತ್ತಾರೆ. ದರ್ಶನ್ ತೂಗುದೀಪ್ ಮತ್ತೆ ಕನ್ನಡ ಸಿನಿಮಾ ರಂಗದ ಸೂಪರ್ ಹೀರೋ ಆಗುತ್ತಾರೆ ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ, ಅದು ನಿಜವಾಗುವ ಸಮಯ ಕೂಡ ಬಂದಿದೆ.
ಇನ್ನು ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಒಳ್ಳೇ ಮನುಷ್ಯ, ಆದರೆ ಡಿ-ಬಾಸ್ ದರ್ಶನ್ ತೂಗುದೀಪ್ ಸುತ್ತಮುತ್ತ ಇದ್ದವರು ಶುದ್ಧ ಅದು & ಇದು ಅಂತೆಲ್ಲಾ ಆರೋಪ ಕೇಳಿ ಬಂದಿತ್ತು. ಅದರಲ್ಲೂ ರೇಣುಕಾಸ್ವಾಮಿ ಬರ್ಬರ ಮರ್ಡರ್ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಸುತ್ತಮುತ್ತ ಇದ್ದವರೇ ಸೇರಿಕೊಂಡು ಕುತಂತ್ರ ಮಾಡಿ, ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನು ಇದೇ ಕೇಸ್‌ನಲ್ಲಿ ಲಾಕ್ ಮಾಡಿಸಿ ಸಮಸ್ಯೆ ಮಾಡಿದರು ಅನ್ನೋ ಭಾರಿ ಗಂಭೀರ ಆರೋಪ ಕೂಡ ಇದೆ.
ದರ್ಶನ್ ತೂಗುದೀಪ್ ಅವರು ತಮ್ಮ ಹೆಂಡತಿ ಜೊತೆಗೆ ಹಲವು ಬಾರಿ ಜಗಳ ಮಾಡಿಕೊಂಡು, ವಿಜಯಲಕ್ಷ್ಮೀ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಕೂಡ ಮಾಡಿದ್ದರು ಎಂಬ ಭಾರಿ ಗಂಭೀರ ಆರೋಪ ಕೇಳಿ ಬಂದಿತ್ತು. ಹೀಗಿದ್ದರೂ ಗಂಡ ಕಷ್ಟದಲ್ಲಿ ಪರದಾಡುವಾಗ ತಕ್ಷಣ ಬಂದು ಗಂಡನ ರಕ್ಷಣೆ ಮಾಡಿದರು ವಿಜಯಲಕ್ಷ್ಮೀ ಅವರು ಎಂಬ ಹೆಮ್ಮೆಯ ಮಾತುಗಳನ್ನ ಅವರ ಅಭಿಮಾನಿಗಳು ಹೇಳುತ್ತಾರೆ. ಹೀಗಿದ್ದಾಗಲೇ ಗಂಡ ಡಿ-ಬಾಸ್ ದರ್ಶನ್ ಅವರ ರಕ್ಷಣೆಗೆ ವಿಜಯಲಕ್ಷ್ಮೀ ದರ್ಶನ್ ಅವರು ಏನೆಲ್ಲ ಮಾಡಿದ್ದಾರೆ .
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸುತ್ತಿರುವ ಬಹು ನಿರೀಕ್ಷಿತ ದಿ ಡೆವಿಲ್ ಚಿತ್ರದ ಚಿತ್ರೀಕರಣ ರಾಜಸ್ಥಾನದಲ್ಲಿ ಬಿರುಸಿನಿಂದ ಸಾಗಿದೆ. ಮಾತಿನ ಭಾಗದ ಚಿತ್ರೀಕರಣ ನಡೆಯುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಚನ ರೈ, ಮಹೇಶ್ ಮಂಜ್ರೇಕರ್, ಅಚ್ಯುತಕುಮಾರ್ ಮುಂತಾದ ಕಲಾವಿದರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ವಿಜಯಲಕ್ಷ್ಮೀ ಕೂಡ ಸಾಥ್ ಕೊಟ್ಟಿದ್ದಾರೆ.
ಇದೀಗ ರಾಜಸ್ಥಾನದಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ನಟನ ಪತ್ನಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರಾಜಸ್ಥಾನದಲ್ಲಿ ಅದ್ಧೂರಿಯಾಗಿರುವ ಬಂಗಲೆವೊಂದರಲ್ಲಿ ನಿಂತು ದರ್ಶನ್ ಪತ್ನಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ಪೋಸ್ಟ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಬರುತ್ತಿವೆ. ಹೀಗೆ ದರ್ಶನ್ ಹೋದಲ್ಲಿ ಬಂದಲ್ಲಿ ಅವರ ಜೊತೆಯಾಗಿ ನಿಂತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Sat,12 Apr 2025
ನಟಿ ಆರತಿ ಕುಟುಂಬದ ಛಿದ್ರ, 3 ಮದುವೆ ಹಾಗೂ ಅವರ ಮಕ್ಕಳು ಹೇ ಗಿದ್ದಾರೆ
Sat,12 Apr 2025