ಗಂಡ ಹೊರಬರುವಂತೆ ದೇವರ ಬಳಿ‌ ಹಗಲು‌ ರಾತ್ರಿ ಹರಕೆ ಮಾಡುತ್ತಿರುವ ವಿಜಯಲಕ್ಷ್ಮಿ

 | 
Ue

ಬಂಡೆ ಮಹಾಕಾಳಿ ದೇವಿ ಮೇಲೆ ನಟ ದರ್ಶನ್ ಕೂಡ ಅಪಾರ ಭಕ್ತಿ ಹೊಂದಿದ್ರು. ಅರೆಸ್ಟ್ ಆಗುವ 2 ದಿನಗಳ ಹಿಂದೆ ಕೂಡ ನಟ ದರ್ಶನ್ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದಿದ್ರು. ಬಳಿಕ ದೃಷ್ಟಿ ತೆಗೆಸಿ ತಡೆ ಒಡೆಸಿ ಹೋಗಿದ್ರು. ಮನಸ್ಸಿನಲ್ಲಿ ತಳಮಳ, ಗೊಂದಲವಾಗ್ತಿದೆ ಎಂದು ಮನೆಯಲ್ಲಿ ದೃಷ್ಟಿ ಪೂಜೆ ಸಹ ಮಾಡಿಸಲಾಗಿತ್ತು. 

ದೃಷ್ಟಿ ಪೂಜೆ ಮಾಡಿಸಿ ಶಕ್ತಿ ದೇವತೆ ಆರಾಧಿಸುವ ಪೂಜಾರಿಯಿಂದ ತಡೆ ಒಡೆಸಿದ್ರು. ಪೂಜೆ ಬಳಿಕ ಒಂದಷ್ಟು ದಿನ ಹೊರಗೆಲ್ಲಾದರು ಹೋಗಿ ಬನ್ನಿ ಎಂದು ನಟ ದರ್ಶನ್ ಗೆ ಪೂಜಾರಿ ಸಲಹೆ ಕೂಡ ಕೊಟ್ಟಿದ್ದರಂತೆ. ಈಗ ನಟ ದರ್ಶನ್ ಆರೋಪ ಮುಕ್ತರಾಗಲಿ ಎಂದು ಪತ್ನಿ ವಿಜಯಲಕ್ಷ್ಮಿ ಅದೇ ಶಕ್ತಿ ದೇವತೆ ಮೊರೆ ಹೋಗಿದ್ದಾರೆ. ನಟ ದರ್ಶನ್ ಬಂಡೆ ಮಹಾಕಾಳಿ ದೇವಿಯನ್ನ ಅರಾಧಿಸುತ್ತಿದ್ರು, ದೇವಿ ಮೇಲೆ ಅಪಾರ ನಂಬಿಕೆ ಹೊಂದಿದ್ರು ಎನ್ನಲಾಗ್ತಿದೆ. 

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದು, ವಿಚಾರಣಾಧೀನ ಖೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ದರ್ಶನ್ ಗೆಳತಿ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾಸ್ವಾಮಿ ಕೊಲೆಯಾಗಿದೆ ಎನ್ನಲಾಗ್ತಿದೆ. ದರ್ಶನ್ ಜೈಲು ಸೇರಿದ ಬಳಿಕ ಪರಪ್ಪನ ಅಗ್ರಹಾರಕ್ಕೆ ಮಗನ ಜೊತೆಗೆ ಬಂದ ವಿಜಯಲಕ್ಷ್ಮಿ, ಪತಿ ದರ್ಶನ್​ಗೆ ಧೈರ್ಯ ತುಂಬಿದ್ದಾರೆ. 

ಅಷ್ಟೇ ಅಲ್ಲದೇ ದರ್ಶನ್ ಅವರನ್ನು ಜೈಲಿನಿಂದ ಹೊರಗೆ ಕರೆತರಲು ಕಾನೂನು ಹೋರಾಟ ಮಾಡ್ತಿದ್ದಾರೆ.ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ಜೈಲುವಾಸ ಅನುಭವಿಸುತ್ತಿದೆ. ಸದ್ಯಕ್ಕೆ ದರ್ಶನ್ ಹಾಗೂ ಅವರ ಗ್ಯಾಂಗ್ಗೆ ಬಿಡುಗಡೆ ಭಾಗ್ಯ ಇಲ್ಲ ಸಿಗುವುದು ಕಷ್ಟ ಎನ್ನಲಾಗ್ತಿದೆ. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ್ದು, ಪ್ರಬಲ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ ಎನ್ನಲಾಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.