ಬಿಜೆಪಿ ಹೊಸ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ, ಖ್ಯಾತ ನಾಯಕ ಸಿ. ಟಿ. ರವಿ ಅಸಮಾಧಾನ

 | 
Ndd

 ನೂತನ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕಕ್ಕೆ ಸಂಬಂಧ ನಿನ್ನೆ ಮಾಜಿ ಸಚಿವ ಸಿ.ಟಿ.ರವಿ  ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ತಂದೆ ಬಳಿಕ ಮಗನಿಗೆ ಅಧಿಕಾರ ಸಿಕ್ತಾ ಪ್ರಶ್ನೆಗೆ, ಕುಟುಂಬ ರಾಜಕಾರಣದ  ಬಗ್ಗೆ ಈಗೇನಾದ್ರೂ ಮಾತಾಡಿದ್ರೆ ಅದು ಸಮರ್ಪಕ ಅಲ್ಲ ಎಂದು ಉತ್ತರಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರಿಗೆ ಶುಭಾಶಯ ತಿಳಿಸಿದ್ದೇನೆ. ಇದು ಅಧಿಕಾರ ಅಲ್ಲ ಜವಾಬ್ದಾರಿಯಾಗಿದ್ದು, ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ನಾನು ಪಕ್ಷಕ್ಕೆ ಕೇಳಿ ರಾಷ್ಟ್ರೀಯ ಮಟ್ಟದಲ್ಲಿ ಜವಾಬ್ದಾರಿ ಪಡೆದಿಲ್ಲ. ಪಕ್ಷ ಕೊಟ್ಟ ಜವಾಬ್ದಾರಿ ನಿರ್ವಹಿಸುತ್ತ ಬಂದಿದ್ದೇನೆ ಎಂದರು.

      ಇದೀಗ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಜವಾಬ್ದಾರಿ ನೀಡಲಾಗಿದೆ. ನಾನು ರಾಜ್ಯಾಧ್ಯಕ್ಷ ಸ್ಥಾನ ಕೇಳಿಯೇ ಇಲ್ಲ ಎಂದು ಸಿ.ಟಿ.ರವಿ ಸ್ಪಷ್ಟಪಡಿಸಿದರು. ನಾನು ಯಾವುದೇ ಸ್ಥಾನ ಕೇಳದೇ ಇರೋದರಿಂದ ನನ್ನ ಅಸಮಾಧಾನದ ಪ್ರಶ್ನೆಯೇ ಬರೋದಿಲ್ಲ ಎಂದರು.

         ರಾಮ ಮಂದಿರ ನಿರ್ಮಾಣ ಅಂತಿಮ‌ ಹಂತಕ್ಕೆ ಬಂದಿದ್ದೇನೆ. ಹಿಂದುತ್ವ, ರಾಷ್ಟ್ರೀಯತೆಗಾಗಿ ನಾನು‌ ರಾಜಕಾರಣಕ್ಕೆ ಬಂದಿದ್ದೇನೆ.  ವಿಜಯೇಂದ್ರ ಜೊತೆ ವ್ಯಕ್ತಿಗತವಾಗಿ ಯಾವುದೇ ತೊಂದರೆ ಇಲ್ಲ. ಕುಟುಂಬ ರಾಜಕಾರಣದ ಬಗ್ಗೆ ಈಗೇನಾದ್ರೂ ಮಾತಾಡಿದ್ರೆ ಸಮರ್ಪಕ ಅಲ್ಲ ಎಂದು ಮಾಧ್ಯಮಗಳ ಪ್ರಶ್ನೆಗಳಿಂದ ಜಾರಿಕೊಂಡರು.

  ನಿಮಗೆ ಕಾಡುತ್ತಿರೋ ಪ್ರಶ್ನೆ ನನಗೂ ಕಾಡುತ್ತಿದೆ ಎಂದ ಸಿ.ಟಿ.ರವಿ, ಈ ಸಂದರ್ಭದಲ್ಲಿ ಹೆಚ್ಚು ಮಾತಾಡಲಾರೆ. ಪಕ್ಷದ ವಿರುದ್ದ ನಾನು ಬಹಿರಂಗವಾಗಿ ಎಲ್ಲೂ ಹೇಳಿಲ್ಲ. ಪಕ್ಷದ ಒಳಗಿನ ವೇದಿಕೆಯಲ್ಲಿ ಪ್ರಶ್ನೆ ಮಾಡುವ ಸಂದರ್ಭದಲ್ಲಿ ಮಾಡ್ತೇನೆ.ನಾನು ಎರಡು, ಐದು ತಿಂಗಳ‌ ಹಿಂದೆ ಕೇಳಿದಾಗ ನಾನು ರಾಜ್ಯಾಧ್ಯಕ್ಷ ಸ್ಥಾನ ಆಕಾಂಕ್ಷಿ ಅಲ್ಲ ಎಂದಿದ್ದೇನೆ. ಹಾಗಾಗಿ ನನಗೆ ಅಸಮಾಧಾನ ಇಲ್ಲವೆಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು ಕೂಡ ಅವರ ಮಾತಿನಲ್ಲಿದ್ದ ಅಸಮಾಧಾನ ಬಹುತೇಕ ಕಾಣುತಿತ್ತು.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.