ಗೀತಾ ಳಿಗೆ ಕೈಕೊಟ್ಟು ಅತ್ತೆ ಮಗಳನ್ನು ವರಿಸಿದ ವಿಜಿ, ಗೀತಾ ಸೀರಿಯಲ್ ಅಭಿಮಾನಿಗಳಿಗೆ ಬೇಸರ

 | 
ಹೇ

ಕೆಲ ದಿನಗಳ ಹಿಂದಷ್ಟೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಧಾರಾವಾಹಿ ಗೀತಾ. ಈ ಧಾರಾವಾಹಿಯ ನಾಯಕ ‘ವಿಜಯ್’ ಅಂದ್ರೆ ಧನುಷ್ ಗೌಡ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವರ ವಿವಾಹ ಶುಕ್ರವಾರ ಅದ್ದೂರಿಯಾಗಿ ನೆರವೇರಿತು. ಗೀತಾ ಧಾರವಾಹಿ ನಟಿಯನ್ನೇ ಮದುವೆ ಆಗುತ್ತಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಅಗಿತ್ತು. ಆದರೆ ಸಡನ್ ಎಂಗೇಜ್ಮೆಂಟ್ ಆಗಿ ಶಾಕ್ ನೀಡಿದ್ದರು ವಿಜಯ್.

ಇನ್ನು ಧನುಷ್ ಗೌಡ ಅವರು ಸಂಜನಾ ಎಂಬವರ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಸಂಜನಾ ಧನುಷ್ ಅತ್ತೆಯ ಮಗಳಾಗಿದ್ದು, ಇದು ಅರೆಂಜ್ಡ್ ಮ್ಯಾರೇಜ್ ಆಗಿದೆ.ಧನುಷ್ ಗೌಡ ಹಾಗೂ ಸಂಜನಾ ಅವರ ಮದುವೆ ಗ್ರ್ಯಾಂಡ್ ಆಗಿ ನಡೆದಿದೆ. ಸಂಬಂಧಿ ಆಗಿರುವ ಸಂಜನಾ ಅವರನ್ನ ಧನುಷ್ ಗೌಡ ವರಿಸಿದ್ದಾರೆ. ಮಾಂಗಲ್ಯಧಾರಣೆ ವೇಳೆ ವಧು ಸಂಜನಾ ಕಣ್ಣೀರಿಟ್ಟರು. ಈ ವೇಳೆ ಸಂಜನಾ ಕೆನ್ನೆಗೆ ಸಿಹಿ ಮುತ್ತು ಕೊಟ್ಟ ಧನುಷ್ ಗೌಡ ಸಮಾಧಾನ ಪಡಿಸಿದರು. 

ಅರಿಶಿಣ ಶಾಸ್ತ್ರದ ಫೋಟೋಗಳು ಸಖತ್ ವೈರಲ್ ಆಗಿವೆ. ಅರಿಶಿಣ ಹಚ್ಚಿ ಧನುಷ್ ಅವರು ಗಮನ ಸೆಳೆದಿದ್ದಾರೆ.ಧನುಷ್ ಅವರು ಆರತಕ್ಷತೆ ಕಾರ್ಯಕ್ರಮವೂ ಅದ್ದೂರಿಯಾಗಿ ನಡೆದಿದೆ. ಧನುಷ್ ಅವರ ಆರತಕ್ಷತರೆ ಕಾರ್ಯಕ್ರಮದಲ್ಲಿ ಭವ್ಯಾ ಗೌಡ ಸೇರಿ ಅನೇಕರು ಆಗಮಿಸಿದ್ದರು. ಕಿರುತೆರೆಯಲ್ಲಿರೋ ಅವರ ಪರಿಚಯಸ್ಥರು ಬಂದು ನವ ದಂಪತಿಗಳನ್ನು ಹರಿಸಿದರು.

ಸೋಷಿಯಲ್‌ ಮೀಡಿಯಾದಲ್ಲೂ ಈ ಜೋಡಿಯ ಮದುವೆ ಫೋಟೋಗಳು ವೈರಲ್‌ ಆಗಿವೆ. ನೆಚ್ಚಿನ ನಟನಿಗೆ ಕಾಮೆಂಟ್‌ ಮೂಲಕವೇ ಶುಭಾಶಯಗಳನ್ನು ರವಾನಿಸುತ್ತಿದ್ದಾರೆ ಅವರ ಫ್ಯಾನ್ಸ್‌. ಕರ್ನಾಟಕದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣೆ ನಡೆಯುವ ಹೊತ್ತಿನಲ್ಲೇ ಧನುಷ್ ವೈವಾಹಿಕ ಜೀವನಕ್ಕೆ  ಕಾಲಿಟ್ಟಿದ್ದು, ಮದುವೆಗೂ ಮುನ್ನ ಪೂರ್ತಿ ರೆಡಿಯಾಗಿ ಮದುವೆ ಗೆಟಪ್ ನಲ್ಲೇ ಮತಗಟ್ಟೆಗೆ ತೆರಳಿ ವೋಟ್ ಮಾಡಿ ಕೂಡ ಬಂದಿದ್ದರು ಧನುಷ್.  

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.