ಗೀತಾ ಮುಂದೆ ಸ್ವಂತ ಪತ್ನಿಗೆ ತಾಳಿ ಕಟ್ಟಿದ ವಿಜಿ; ಮೆಚ್ಚಿಕೊಂಡ ಕರುನಾಡು

 | 
Gyu

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗೀತಾ ಧಾರಾವಾಹಿಯಲ್ಲಿ ಕಥಾನಾಯಕ ವಿಜಯ್ ಪಾತ್ರದಲ್ಲಿ ಅಭಿನಯಿಸಿದವರು ಧನುಷ್ ಗೌಡ. ನಾಲ್ಕು ವರ್ಷಗಳ ಕಾಲ ಗೀತಾ ಸೀರಿಯಲ್‌ ಪ್ರಸಾರ ಕಂಡಿತ್ತು. ಗೀತಾ ಸೀರಿಯಲ್‌ ಮುಗಿದು ಕೆಲ ತಿಂಗಳು ಉರುಳಿವೆ. ಇದೀಗ ಗೀತಾ ಹೀರೋ ಧನುಷ್‌ ಗೌಡ ಅವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ಜರುಗಿದೆ.

ನಿಜ ಬದುಕಿನಲ್ಲಿ ಗೀತಾ ನಟ ಧನುಷ್ ಗೌಡ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಧನುಷ್ ಗೌಡ ಹಾಗೂ ಸಂಜನಾ ಅವರ ಮದುವೆ ಗ್ರ್ಯಾಂಡ್ ಆಗಿ ನಡೆದಿದೆ. ಸಂಬಂಧಿ ಆಗಿರುವ ಸಂಜನಾ ಅವರನ್ನ ಧನುಷ್ ಗೌಡ ವರಿಸಿದ್ದಾರೆ. ಮಾಂಗಲ್ಯಧಾರಣೆ ವೇಳೆ ವಧು ಸಂಜನಾ ಕಣ್ಣೀರಿಟ್ಟರು. ಈ ವೇಳೆ ಸಂಜನಾ ಕೆನ್ನೆಗೆ ಸಿಹಿ ಮುತ್ತು ಕೊಟ್ಟ ಧನುಷ್ ಗೌಡ ಸಮಾಧಾನ ಪಡಿಸಿದರು.

ಧನುಷ್ ಗೌಡ - ಸಂಜನಾ ಮದುವೆಗೆ ಕುಟುಂಬಸ್ಥರು, ಆತ್ಮೀಯರು ಹಾಗೂ ಕಿರುತೆರೆ ಕಲಾವಿದರು ಸಾಕ್ಷಿಯಾಗಿದ್ದರು. ಅಷ್ಟಕ್ಕೂ ಎಲ್ಲರೂ ಗೀತಾ ಸಿರಿಯಲ್ ನಲ್ಲಿ ಗೀತಾ ಪಾತ್ರ ಮಾಡಿರುವ ಭವ್ಯ ಗೌಡ ಅವರು ಮತ್ತು ಧನುಷ್ ಅವರು ಮದುವೆ ಆಗುತ್ತಾರೆ ಎಂದು ಅಂದುಕೊಂಡಿದ್ದರು. 

ಹಲವು ಮಾಧ್ಯಮಗಳ ಇಂಟರ್ವ್ಯೂ ನಲ್ಲಿಯೂ ನಾವು ಸ್ನೇಹಿತರು ಎಂಬ ಮಾತನ್ನು ಹೇಳಿದ್ದರು. ಅದರಂತೆಯೇ ನಟ ಧನುಷ್ ಅವರು ಮನೆಯಲ್ಲಿ ನೋಡಿದ ಅವರ ಸೋದರ ಅತ್ತೆ ಮಗಳನ್ನು ಮದುವೆ ಆಗಿದ್ದರೆ. ಅವರ ಹೆಸರು ಸಂಜನಾ. ಸಂಜನಾ ಅವರು ಯಾವ ವೃತ್ತಿ ಮಾಡುತ್ತಾ ಇದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.