ವಿನಯ್ ಗೆ ಯೋಗ್ಯತೆ ಇಲ್ಲ ' ಕಾರ್ತಿಕ್ ಬಿಗ್ ಬಾಸ್ ವಿನ್ ಆಗಬೇಕು' ರೂಪೇಶ್ ಶೆಟ್ಟಿ

 | 
Hd

ಬಿಗ್‌ ಬಾಸ್‌ ಕಳೆದ ಸೀಜನ್‌ ವಿನ್ನರ್‌ ರೂಪೇಶ್‌ ಶೆಟ್ಟಿ  ಅವರು ಈಗ ನಾಡಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಟ. ಕರಾವಳಿ ಮತ್ತು ಕೋಸ್ಟಲ್‌ವುಡ್‌ನಲ್ಲಿ ಮಿಂಚುತ್ತಿದ್ದ ಅವರು ಬಿಗ್‌ ಬಾಸ್‌ ಓಟಿಟಿ ಮತ್ತು ಬಿಗ್‌ ಬಾಸ್‌ ಪ್ರಧಾನ ಶೋ ಬಳಿಕ ಅವರು ಕನ್ನಡ ನಾಡಿನ ಮನೆಮಗನಾಗಿದ್ದಾರೆ.

ಬಿಗ್‌ ಬಾಸ್‌ ಶೋನಲ್ಲಿ ಅವರನ್ನು ನೋಡಿದ ಪ್ರತಿಯೊಬ್ಬರೂ ರೂಪೇಶ್‌ ಶೆಟ್ಟಿ ಕನ್ನಡ ಚಿತ್ರರಂಗದಲ್ಲೂ ಮಿಂಚಬಲ್ಲ ಪ್ರತಿಭೆ ಎನ್ನುವುದನ್ನು ಒಪ್ಪಿಕೊಂಡಿದ್ದರು. ಬಿಗ್‌ ಬಾಸ್‌ ಬಳಿಕ ಕನ್ನಡಕ್ಕೊಬ್ಬ ಒಳ್ಳೆಯ ನಾಯಕ ಸಿಗುತ್ತಾನೆ ಎಂಬ ನಿರೀಕ್ಷೆ ಇತ್ತು. ಅದೀಗ ನಿಜವಾಗಿದೆ. ಹೌದು ರೂಪೇಶ್ ಶೆಟ್ಟಿ ಕೆಲ ಹೊಸ ಸಿನಿಮಾಗಳಿಗೆ ಸೈನ್ ಮಾಡ್ತಿದ್ದಾರೆ.

ಬಿಗ್‌ ಬಾಸ್‌ ರಿಯಾಲಿಟಿ ಶೋ ಅವರನ್ನು ಇಡೀ ಕರ್ನಾಟಕಕ್ಕೆ ಪರಿಚಯಿಸಿತು. ಬಿಗ್‌ ಬಾಸ್‌ ಒಟಿಟಿ ಶೋದಲ್ಲೇ ತನ್ನ ಒಳ್ಳೆಯತನ, ಇನ್ನೊಬ್ಬರ ಬಗ್ಗೆ ತೋರಿಸುವ ಕಾಳಜಿ, ಎಲ್ಲರೊಂದಿಗೆ ಬೆರೆಯುವ ಗುಣಗಳು ಮತ್ತು ಎಂಟರ್‌ಟೇನಿಂಗ್‌ ಕೆಪ್ಯಾಸಿಟಿಯಿಂದ ಗೆದ್ದರು. ಒಟಿಟಿ ಗೆದ್ದು ಪ್ರಧಾನ ಶೋಗೆ ಬಂದ ಅವರಿಗೆ ಇಲ್ಲಿ ಘಟಾನುಘಟಿಗಳ ಜತೆ ಸ್ಪರ್ಧಿಸಿ ಗೆಲ್ಲುವುದು ಸಾಧ್ಯವೇ ಎನ್ನುವ ದೊಡ್ಡ ಪ್ರಶ್ನೆ ಇತ್ತು. ಸಾನ್ಯಾ ಅಯ್ಯರ್‌ ಜತೆಗಿನ ಬಾಂಧವ್ಯ ಅವರಿಗೆ ಎಲ್ಲಿ ಮುಳುವಾಗುತ್ತೋ ಎನ್ನುವ ಆತಂಕವೂ ಇತ್ತು. 

ಆದರೆ, ಆ ಅತ್ಯುತ್ತಮ ಭಾವುಕ ಸಂಬಂಧವನ್ನು ಹಿತವಾಗಿ ಬಳಸಿಕೊಂಡ ರೂಪೇಶ್‌ ಎಲ್ಲರ ಜತೆಗೂ ಉತ್ತಮ ಬಾಂಧವ್ಯ ಕಟ್ಟಿಕೊಂಡರು. ಬಿಗ್‌ ಬಾಸ್‌ ಮನೆಯಲ್ಲಿ ಯಾರೂ ದ್ವೇಷಿಸಲಾಗದ ಒಂದು ಕ್ಯಾರೆಕ್ಟರ್‌ ಆಗಿ ನಿಂತು ಅಂತಿಮವಾಗಿ ಗೆಲುವು ಸಾಧಿಸಿದರು. ಈಗ ಅದೇ ರೀತಿ ಇರುವ ಕಾರ್ತಿಕ ಅವರು ಕೂಡ ಕನ್ನಡಿಗರ ಮನ ಗೆದ್ದಿದ್ದಾರೆ ಮಾತ್ರವಲ್ಲದೆ ಉತ್ತಮವಾಗಿ ಆಟ ಆಡಿದ್ದಾರೆ. 

ಇದೀಗ ರೂಪೇಶ್ ಶೆಟ್ಟಿ ಅವರು ಕಾರ್ತಿಕ ಗೆ ಬೆಂಬಲಿಸಿ ಅತ್ಯುತ್ತಮ ಸ್ಪರ್ಧಿ ಓಟ್ ಮಾಡಿ ಗೆಲ್ಲಿಸಿ ಎಂದು ಹೇಳಿದ್ದಾರೆ. ಸಕತ್ತಾಗಿ ಓಡುತ್ತಿರುವ ಬಿಗ್ಬಾಸ್ 10 ಮನೆಯ ಒಬ್ಬ ಒಳ್ಳೆಯ ಸ್ಪರ್ಧಿ ಅಂದರೆ ಅದು ಕಾರ್ತಿಕ ಹಾಗಾಗಿ ಅವರನ್ನು ಗೆಲ್ಲಿಸಿ ಅಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.