ಚಂದನ್ ಕಷ್ಟ ಪಟ್ಟು ಕಟ್ಟಿದ ಹೋಟೆಲ್ ನಲ್ಲಿ‌ ಭರ್ಜರಿ ಹಲಾಲ್ ಬಿರಿಯಾನಿ ತಿಂದ ವಿನಯ್ ಗೌಡ

 | 
ಗ೮
ಕಿರುತೆರೆ ನಟ ಚಂದನ್‌, ನಟನೆ ಜೊತೆ ಜೊತೆಗೆ ಹೋಟೆಲ್‌ ಉದ್ಯಮದಲ್ಲಿ ಕೂಡಾ ತೊಡಗಿಸಿಕೊಂಡಿದ್ದಾರೆ. 2 ವರ್ಷಗಳ ಹಿಂದಷ್ಟೇ ಬೆಂಗಳೂರಿನ ಸಹಕಾರ ನಗರದಲ್ಲಿ ಬಿರಿಯಾನ್‌ ಹೋಟೆಲ್‌ ತೆರೆದಿದ್ದ ಚಂದನ್‌, ಈಗ ಮದುವೆಯಾದ ನಂತರ ಪತ್ನಿ ಕವಿತಾ ಜೊತೆ ಸೇರಿ ಮತ್ತೊಂದು ಹೋಟೆಲ್‌ ಬ್ಯುಸ್ನೆಸ್‌ ಆರಂಭಿಸಿದ್ದಾರೆ.
ಶುಕ್ರವಾರ, ಬೆಂಗಳೂರು-ಮೈಸೂರು ರಸ್ತೆಯಲ್ಲಿ ಚಂದನ್‌-ಕವಿತಾ ಮಂಡಿಪೇಟೆ ಪಲಾವ್‌ ಎಂಬ ಹೊಸ ಬ್ಯುಸ್ನೆಸ್‌ ಆರಂಭಿಸಿದ್ದಾರೆ. ಈ ಹೋಟೆಲ್‌ ಓಪನಿಂಗ್‌ ಸರಳವಾಗಿ ನೆರವೇರಿದೆ. ಈ ಫೋಟೋ, ವಿಡಿಯೋಗಳನ್ನು ಈ ಕ್ಯೂಟ್‌ ಜೋಡಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚಂದನ್‌ ಕುಮಾರ್‌ ಹಾಗೂ ಕವಿತಾ ಗೌಡ ಇಬ್ಬರ ಹೊಸ ಉದ್ಯಮಕ್ಕೆ ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗ, ಕಿರುತೆರೆ ಸ್ನೇಹಿತರು ಶುಭ ಕೋರುತ್ತಿದ್ದಾರೆ. ಇನ್ನು ಚಂದನ್‌ ಕುಮಾರ್‌ ವಿಡಿಯೋ ಮಾಡಿ, ಈ ಹೋಟೆಲ್‌ನ ಮೂರು ವಿಶೇಷತೆಗಳನ್ನು ಹೇಳಿಕೊಂಡಿದ್ದಾರೆ.
ಎಲ್ರಿಗೂ ನಮಸ್ಕಾರ, ಮೈಸೂರು ರೋಡ್‌ ಮಂಡಿಪೇಟೆ ಪಲಾವ್‌ ಹೋಟೆಲ್‌ ಪೂಜೆ ನಡೆದಿದೆ. ನಮ್ಮ ರೆಸ್ಟೋರೆಂಟ್‌ನಲ್ಲಿ ಮೂರು ವೀಶೇಷತೆಗಳಿವೆ. ಇದು ಮೈಸೂರ್‌ ರೋಡ್‌ನ ಟೋಲ್‌ ಬಳಿ ಇದೆ. ಬೆಂಗಳೂರಿನ ಕಡೆಯಿಂದ ಬಂದರೆ ಟೋಲ್‌ ದಾಟುವ ಮುನ್ನ ನಮ್ಮದೇ ಕೊನೆಯ ರೆಸ್ಟೋರೆಂಟ್‌, ಕೆಂಗೇರಿಗೆ ಬಹಳ ಹತ್ತಿರವಾಗಿದೆ. ಇಲ್ಲಿ ಅಡುಗೆ ಮಾಡುವುದು ಸೌದೆ ಒಲೆಯಲ್ಲಿ, ಈಗಾಗಲೇ ನೀವು ಬಹಳ ಕಡೆ ನೋಡಿದ್ದೀರಿ, ಈಗಿನ ಟ್ರೆಂಡ್‌ ಹಾಗೇ ಇದೆ. 
ಇದು ಎರಡನೇ ವಿಶೇಷತೆ, ಮೂರನೇ ವಿಶೇಷತೆ ಎಂದರೆ ಬೆಳಗ್ಗೆ 4 ಗಂಟೆಗೆ ನಿಮಗೆ ತಿನ್ನಲು ನಿಮಗೆ ಬಿರ್ಯಾನಿ ರೆಡಿ ಇರುತ್ತದೆ. ನೀವು ರಾತ್ರಿ ಇಡೀ ಪಾರ್ಟಿ ಮಾಡಿ ಬಂದು ಇಲ್ಲಿ ಫುಡ್‌ ಎಂಜಾಯ್‌ ಮಾಡಬಹುದು ಎಂದಿದ್ದಾರೆ. ಇನ್ನು ಇವರ ಹೊಟೇಲ್ ಗೆ ಬಿಗ್ಬಾಸ್ ಖ್ಯಾತಿಯ ವಿನಯ್ ಗೌಡ ಬಂದಿದ್ದಾರೆ. ಅವರನ್ನು ಕಂಡು ಚಂದನ್ ಕುಮಾರ್ ಸಕತ್ ಖುಷಿ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.