ಕಿಚ್ಚ ಸುದೀಪ್ ಮುಂದೆಯೇ ಸಂಗೀತ ತಲೆಗೆ ಸು.ತ್ತಿಗೆಯಿಂದ ಹೊಡೆದ ವಿನಯ್ ಗೌಡ

 | 
ಪರರಕ

ಬಿಗ್‌ಬಾಸ್ ದಿನದಿಂದ ದಿನಕ್ಕೆ ಕಷ್ಟದ ದಾರಿಯಲ್ಲಿ ಸಾಗುತ್ತಿದೆ. ಮನೆಯೊಳಗಿನ ಸ್ಪರ್ಧಿಗಳಿಗೆ ಪ್ರತಿ ವಾರವೂ ಹೊಸ ಹೊಸ ಚಾಲೆಂಜ್‌ಗಳು ಎದುರಾಗುತ್ತಿವೆ. ಇಂದಿದ್ದ ಹಾಗೆ ನಾಳೆ ಇಲ್ಲ. ಈ ಮನೆಯೊಳಗೆ ಯಾರೂ ಸ್ನೇಹಿತರೂ ಅಲ್ಲ, ಯಾರೂ ಶತ್ರುಗಳೂ ಅಲ್ಲ ಎಂಬುದು ಸತ್ಯವಾಗುತ್ತಿದೆ. ಸಂಗೀತಾ ಮತ್ತು ಕಾರ್ತಿಕ್‌ ಸ್ನೇಹದ ಬಂಡಿ ಹಳಿ ತಪ್ಪುತ್ತಿದೆ. ಅದಕ್ಕೆ ಸಾಕ್ಷ್ಯ ಒದಗಿಸಿದೆ ಇಂದಿನ ಬಿಗ್‌ ಬಾಸ್‌ ಪ್ರೋಮೋ.

ಒಂದು ಬೆರ್ಚಪ್ಪನನ್ನು ನಿಲ್ಲಿಸಲಾಗಿದೆ. ಅದರ ಮೇಲೆ ಒಂದು ಮಡಿಕೆ ಇದೆ. ಅದರ ಮೇಲೆ ಸದಸ್ಯರು ಒಬ್ಬರ ಫೋಟೊ ಹಾಕಿ, ಯಾವ ವಿಚಾರಕ್ಕೆ ಅವರ ಮೇಲೆ ಕೋಪ ಇದೆ ಎಂಬುದನ್ನು ಹೇಳಿ ಆಮೇಲೆ ಆ ಮಡಿಕೆಯನ್ನು ಒಡೆಯಬೇಕು.ಎಲ್ಲರೂ ಊಹಿಸುವಂತೆ ವಿನಯ್‌, ಸಂಗೀತಾ ಫೋಟೊ ಇಟ್ಟು ಮಡಿಕೆ ಒಡೆದಿದ್ದಾರೆ. ಸಂಗೀತಾ ಕೂಡ ವಿನಯ್ ಫೋಟೊ ಇಟ್ಟು ಮಡಿಕೆ ಒಡೆದಿದ್ದಾರೆ. ಆದರೆ ಈ ನಡುವೆ ಇನ್ನೊಂದು ಶಾಕಿಂಗ್ ಆಯ್ಕೆ ನಡೆದಿದೆ. 

ಅದು ಕಾರ್ತಿಕ್ ಅವರದ್ದು. ಕಾರ್ತಿಕ್ ಮಡಿಕೆಯ ಮೇಲಿಟ್ಟಿದ್ದು ಸಂಗೀತಾ ಫೋಟೊವನ್ನು! ಸದಾಕಾಲ ಸಂಗೀತಾ ನನ್ನ ಫ್ರೆಂಡ್‌ ಎಂದೇ ಹೇಳಿಕೊಂಡು ಬಂದಿದ್ದ ಕಾರ್ತಿಕ್, ಹಲವು ಸಂದರ್ಭಗಳಲ್ಲಿ ಅವರ ಪರವಾಗಿ ಗಟ್ಟಿಯಾಗಿ ನಿಂತಿದ್ದರು ಕೂಡ. ಆದರೆ ಹಿಂದಿನ ವಾರದಲ್ಲಿ ಪ್ರತಾಪ್ ಜೊತೆ ಮಾತನಾಡುತ್ತ, ಕಾರ್ತಿಕ್ ಬಕೆಟ್ ಹಿಡಿತಿದಾರೆ ಅನಿಸ್ತಿಲ್ವಾ? ಎಂದು ಸಂಗೀತಾ ಹೇಳಿದ್ದು ಅವರಿಗೆ ನೋವನ್ನುಂಟು ಮಾಡಿದೆ. 

ಹಾಗೆಯೇ ಕಾರ್ತಿಕ್ ಅವರಿಂದ ಸಂಗೀತಾರನ್ನು ಮೈನಸ್ ಮಾಡಿದ್ರೆ ಜೀರೊ ಬರುತ್ತದೆ ಎಂದಿರುವುದೂ ಅವರಿಗೆ ಅಸಮಾಧಾನವನ್ನುಂಟು ಮಾಡಿದೆ. ಇದೆಲ್ಲ ಕಾರಣ ಕೊಟ್ಟು ಸಂಗೀತಾ ಫೋಟೊ ಇಟ್ಟು ಮಡಿಕೆ ಒಡೆದಿರುವ ಕಾರ್ತಿಕ್, ನನ್ನಿಂದ ಸಂಗೀತಾರನ್ನು ಮೈನಸ್ ಮಾಡಿದ್ದೇನೆ. ನಾನು ಜೀರೊ ಅನ್ನುವುದನ್ನು ಪ್ರೂವ್ ಮಾಡಲಿ’ ಎಂದು ಸವಾಲು ಬೇರೆ ಹಾಕಿದ್ದಾರೆ. 

ಇದು ಮುಂದಿನ ವಾರದ ಟಾಸ್ಕ್‌ಗಳು ಇನ್ನಷ್ಟು ಟಫ್‌ ಆಗುವುದರ ಸೂಚನೆಯಂತೂ ಹೌದು. ಮನೆಯ ಸಮತೋಲಗಳು ಏರುಪೇರಾದಾಗ ಏನಾಗುತ್ತದೆ? ಯಾರು ಮುನ್ನಲೆಗೆ ಬರುತ್ತಾರೆ? ಯಾರು ಹಿನ್ನೆಲೆಗೆ ಸರಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.