ಯೂಟ್ಯೂಬ್ ಚಾನಲ್ ಗಳಿಗೆ ವಾರ್ನಿಂಗ್ ಕೊಟ್ಟ ವಿನಯ್ ಗೌಡ; ಬೆ.ಚ್ಚಿಬಿದ್ದ ಟ್ರೋಲ್ ಪೇಜ್ ಗಳು
ಕನ್ನಡ ಬಿಗ್‌ಬಾಸ್ ಸೀಜನ್ 10 ಮುಗಿದು ವಾರವಷ್ಟೇ ಕಳೆಯುತ್ತಿದ್ದು, ಜನ ಇನ್ನೂ ಬಿಗ್ ಬಾಸ್ ಶೋ ಸ್ಪರ್ಧಿಗಳ ಗುಂಗಿನಲ್ಲೇ ಇದ್ದಾರೆ. ಬಿಗ್ ಬಾಸ್ ಕನ್ನಡ ಸೀಜನ್ 10ರ ವಿನ್ನರ್ ಆಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದು, ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿದ್ದಾರೆ. ಆದರೆ ಈ ಬಾರಿ ಬಿಗ್ ಬಾಸ್‌ನಲ್ಲಿ ಸ್ಫರ್ಧಿಯೊಬ್ಬರು ಸಂಪೂರ್ಣ ಶೋನ ಹೈಲೆಟ್ ಆಗಿದ್ದು, ಕಪ್ ಗೆಲ್ಲದಿದ್ದರೂ, ಜನರ ಮನಸ್ಸು ಗೆದ್ದಿದ್ದಾರೆ. ಶೋ ಮುಗಿದ ಬಳಿಕ ಮತ್ತಷ್ಟು ಜನರಿಗೆ ಇಷ್ಟವಾಗಿದ್ದಾರೆ.
ಇವರು ಎಲ್ಲಾ ಟಾಸ್ಕ್‌ನಲ್ಲೂ 100% ಆಟವಾಡಿದವರು, ಖಂಡಿಸುವ ಸಮಯದಲ್ಲಿ ಎಂತವರ ಆಟವನ್ನೂ ಖಂಡಿಸಿದವರು, ಮೊದಮೊದಲು ಅಗ್ರೇಸಿವ್ ಆಟಗಾರ, ಜಗಳಗಳ ರೂವಾರಿ ಎನಿಸಿಕೊಳ್ಳುತ್ತಿದ್ದ, ಈ ಸ್ಫರ್ಧಿ ಶೋ ಮುಗಿಯುವ ಹಂತದಲ್ಲಿ ಬಿಗ್‌ಬಾಸ್ ಮನೆಯ ಜಂಟಲ್‌ಮನ್ ಎನಿಸಿಕೊಳ್ಳುತ್ತಾರೆ. ಇವರೇ ಬಿಗ್ ಬಾಸ್ ಮನೆಯ ಸಲಗ ವಿನಯ್ ಗೌಡ.
ಹೌದು ಇದೀಗ ಅವರು ಕೋಪಗೊಂಡು ಟ್ರೊಲ್ ಪೇಜ್ ಹಾಗೂ ಸಮಾಜಿಕ ಜಾಲತಾಣದ ಕೆಲವು ವೆಬ್ ಸೈಟ್ ಅದರ ಅಡ್ಮಿನ್ ಗಳನ್ನು ಬೈದಿದ್ದಾರೆ. ನಾನು ಡ್ರೋನ್ ಪ್ರತಾಪ್ ಗೆ ಯಾವಾಗ ಬೈದಿದ್ದೇನೆ ಸಖಾ ಸುಮ್ಮನೆ ಸುದ್ದಿ ಹಬ್ಬೀಸಬೇಡಿ ಎಂದಿದ್ದಾರೆ. ಅಷ್ಟೇ ಅಲ್ಲ ಇನ್ನೊಮ್ಮೆ ಹೀಗೆ ಮಾಡಿದ್ರೆ ಚೆನ್ನಾಗಿರಲ್ಲ ಎಂದು ಕೂಡ ಹೇಳಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಮಹಾದೇವನ ಪಾತ್ರ ಹಾಗೂ ಸಿನಿಮಾ ನಟನೆಯ ಮೂಲಕ ಜನರಿಂದ ಮೆಚ್ಚುಗೆ ಗಳಿಸಿದ್ದ ವಿನಯ್ ಗೌಡ ಇದೀಗ ಬಿಗ್ ಬಾಸ್ ಕನ್ನಡದ ಮೂಲಕ ತಮ್ಮ ನಿಜವಾದ ವ್ಯಕ್ತಿತ್ವದಿಂದ ಕರ್ನಾಟಕದ ಮನೆ ಮನೆ ತಲುಪಿದ್ದಾರೆ. ಬಿಗ್ ಬಾಸ್ ಮನೆಯ ಅಗ್ರೇಸಿವ್ ಆಟಗಾರ ಎನಿಸಿಕೊಂಡಿದ್ದ ವಿನಯ್ ಗೌಡ ಶೋ ಮುಗಿದ ಬಳಿಕ ಜನರಿಗೆ ಮತ್ತಷ್ಟು ಇಷ್ಟವಾಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಪೋಸ್ಟ್‌ಗಳು ಹರಿದಾಡುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.