ಸಂಗೀತಳನ್ನು ಅಪ್ಪಿ ಮುದ್ದಾಡಿದ ವಿನಯ್, ಬಿಗ್ ಬಾಸ್ ಮನೆಯಲ್ಲಿ ಸಂಭ್ರಮ

 | 
Hi

ಬಿಗ್​ಬಾಸ್​ ಮನೆಗೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದ 17 ಸ್ಪರ್ಧಿಗಳಲ್ಲಿ ಸದ್ಯ 11 ಜನ ಉಳಿದುಕೊಂಡಿದ್ದಾರೆ. ಬಿಗ್​ಬಾಸ್​ ಸೀಸನ್ 10ರಲ್ಲಿ ಮೊದಲ ದಿನದಿಂದಲೂ ಸಂಗೀತಾ ವಿನಯ್​ ಮಧ್ಯೆ ಮನಸ್ತಾಪವಿತ್ತು. ಮೊದಲನೇ ವಾರದಲ್ಲಿ ಯಾವುದೋ ಸಣ್ಣ ವಿಚಾರಕ್ಕೆ ತನ್ನನ್ನು ವಿನಯ್ ನಾಮಿನೇಟ್ ಮಾಡಿದ ಮೇಲೆ ಸಂಗೀತಾಗೆ ತುಂಬಾನೆ ಬೇಸರ ಆಗಿತ್ತು. ಅವತ್ತು ನಾಮಿನೇಷನ್​ ವಿಚಾರದ ಆದ್ಮೇಲೆ ಸಂಗೀತಾ ವಿನಯ್​ ಜತೆ ಮಾತಾಡಿರೋದೆ ನೋಡಿಲ್ಲ. 

ಅಲ್ಲಿಂದ ಶರುವಾದ ಮನಸ್ತಾಪ 11ನೇ ವಾರದಲ್ಲೂ ಮುಂದುವರೆಯುತ್ತಿದೆ. ಈಗ ರಿಲೀಸ್​ ಆದ ಪ್ರೋಮೋದಲ್ಲಿ ಸಂಗೀತಾ ಹಾಗೂ ವಿನಯ್​ಗೆ ಟಾಸ್ಕ್​ ನೀಡಲಾಗುತ್ತದೆ. ಇದು ಈ ವಾರದ ಮನರಂಜನೆಗಾಗಿ ಬಂದ ಶೈನ್​ ಶೆಟ್ಟಿ ಹಾಗೂ ಪೂಜಾ ಗಾಂಧಿ ನಡೆಸಿ ಕೊಟ್ಟಿರುತ್ತಾರೆ. ಟಾಸ್ಕ್​​ ಅನುಸಾರ ಸಂಗೀತಾ ವಿನಯ್ ಅವರನ್ನು ಹೊಗಳಬೇಕು. ಬಳಿಕ ವಿನಯ್​​ ಸಂಗೀತಾ ಅವರನ್ನು  ಹೊಗಳಬೇಕು.

ಆ ಪ್ರಕಾರ ಅವರಿಬ್ಬರು ಮೈಕ್ ಮುಂದೆ ನಿಂತು ಮಾತನಾಡುತ್ತಾರೆ. ಆಗ ವಿನಯ್​ ಹಾಗೂ ಸಂಗೀತಾ ಮಾತನಾಡುವಾಗ ಮೈಕ್​ನಿಂದ ನೀರನ್ನು ಚಿಮುಕಿಸಲಾಗುತ್ತದೆ. ಸಂಗೀತಾಗೆ ಇರೋವಷ್ಟು ಪೇಶನ್ಸ್​ ಈ ಮನೆಯಲ್ಲಿ ಯಾರಿಗೂ ಇಲ್ಲಾ ಸೋರಿ ಸಂಗೀತಾ ಎಂದು ವಿನಯ್​ ಹೇಳುತ್ತಾರೆ. ಆಗ ಸಂಗೀತಾ ಹೇಳ್ತಾರೆ ವಿನಯ್​ ಆ್ಯಕ್ಟಿಂಗ್​ನ ಯಾರೂ ಬೀಟ್​ ಮಾಡೋಕೇ ಆಗೋದಿಲ್ಲ ಅಂತ. ಆಗ ವಿನಯ್ ಸಂಗೀತಾ ಒಬ್ಬರೆ ನನ್ ಆ್ಯಕ್ಟಿಂಗ್ ಬೀಟ್​ ಮಾಡಿರೋದು ಎಂದು ಹೇಳುತ್ತಾರೆ. 

ಇದನ್ನು ನೋಡಿದ ಉಳಿದ ಸ್ಪರ್ಧಿಗಳು ಬಿದ್ದು ಬಿದ್ದು ನಕ್ಕಿದ್ದಾರೆ. ಆಗ ಶೈನ್​ ಶೆಟ್ಟಿ ಈ ಟಾಸ್ಕ್​ ಮುಗಿಯುವಾಗ ನಿಮ್ಮಿಬ್ಬರಿಗೆ ಲವ್​ ಆಗೋತರ ಇದೆ ಅಂತ ಶೈನ್​ ಶೆಟ್ಟಿ ಹೇಳುತ್ತಾರೆ. ಸದ್ಯ ಇಷ್ಟು ದಿನ ಪರಸ್ಪರ ವೈರಿಗಳಾಗಿದ್ದ ವಿನಯ್-ಸಂಗೀತಾ ದ್ವೇಷ ಮರೆತು ಸ್ನೇಹ ಜೀವಿ ಆಗ್ತಾರಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.