ಮೈಕಲ್ ಗೆ ಜಿಮ್ ಹೇಳಿಕೊಡುತ್ತಿರುವ ವಿನಯ್; 6 ಪ್ಯಾಕ್ ಗಾಗಿ ಕಸರತ್ತು

 | 
Yu

ಎಲ್ಲಿಂದಲೋ ಬಂದು ಕರ್ನಾಟಕದಲ್ಲಿ ಉಳಿದು ಕನ್ನಡ ಗೊತ್ತಿಲ್ಲಾ ಎನ್ನುವ ಜನರ ನಡುವೆ ಮೈಕಲ್ ಅಜಯ್ ವಿಭಿನ್ನವಾಗಿ ಕಾಣುತ್ತಾರೆ. ಹೌದು ಕನ್ನಡವನ್ನು ಕಲಿತು ಮಾತಾಡಿ ಹಲವರ ಮೆಚ್ಚುಗೆಗೆ ಪಾತ್ರವಾಗಿರುವ ಇವರು ಬಿಗ್ಬಾಸ್ ಇಂದಾಗಿ ಎಲ್ಲರ ಗಮನ ಸೆಳೆದಿದ್ದಾರೆ.

ಇನ್ನು ಬಿಗ್ಬಾಸ್ ಸೀಸನ್ 10 ರ ಆನೆ ಎನಿಸಿಕೊಂಡಿರುವ ವಿನಯ್ ಗೌಡ ಹಾಗೂ ಮೈಕೆಲ್ ನಡುವೆ ಉತ್ತಮ ಫ್ರೆಂಡ್ ಶಿಪ್ ಇದೆ. ನಿಮಗೆಲ್ಲಾ ಗೊತ್ತಿರುವ ಹಾಗೆ, ಮೈಕಲ್ ಅಜಯ್ ಮಾಲೀಕತ್ವದಲ್ಲಿ ಬರ್ಗರ್ ಶಾಪ್ ಇದೆ. ಅದೇ ಮಾದರಿಯ ಬರ್ಗರ್‌ ಶಾಪ್‌ಗಳನ್ನು ಬೆಂಗಳೂರಿನ ಎರಡು ಏರಿಯಾಗಳಲ್ಲಿ ಆರಂಭಿಸುವ ಬಗ್ಗೆ ಮೈಕಲ್ ಅಜಯ್ ಹಾಗೂ ವಿನಯ್ ಪ್ಲಾನ್ ಮಾಡಿದ್ದಾರೆ. ಮೈಕಲ್ ಜೊತೆ ವಿನಯ್ ಕೈಜೋಡಿಸಿದ್ದಾರೆ.

ಅಷ್ಟೇ ಅಲ್ಲದೇ ಜಿಮ್ ಅಲ್ಲಿ ಕೂಡ ಮಣ್ಣಿನ ಮಗ ಮೈಕೆಲ್ ಗೆ ವಿನಯ್ ಗೌಡ ಟ್ರೈನ್ ಮಾಡ್ತಿದ್ದಾರೆ. ಈ ಹಿಂದೆ ಸ್ನೇಹಿತ್ ಗೆ ಕೂಡ ಜಿಮ್ ಅಲ್ಲಿ ತರಬೇತಿ ನೀಡಿ ಎಲ್ಲರ ಮನ ಗೆದ್ದಿದ್ದ ವಿನಯ್ ಗೌಡ ಇದೀಗ ಮೈಕೆಲ್ ಅವರಿಗೆ ಟ್ರೈನ್ ಮಾಡುತ್ತಿದ್ದಾರೆ. ಬಿಗ್ ಬಾಸ್ ಕನ್ನಡ 10 ಕಾರ್ಯಕ್ರಮದ ಆರಂಭದಲ್ಲಿ ನೆಗೆಟಿವ್ ಇಮೇಜ್ ಪಡೆದುಕೊಂಡ ವಿನಯ್ ಎಲ್ಲರ ಬೈಗುಳಕ್ಕೆ ಗುರಿಯಾಗಿದ್ದರು.

ಆದರೆ ಸೆಕೆಂಡ್‌ ಹಾಫ್‌ನಲ್ಲಿ ವಿನಯ್‌ಗೆ ಪಾಸಿಟಿವ್ ಇಮೇಜ್ ಬಿಲ್ಡ್ ಆಯ್ತು. ವಿನಯ್‌ಗೆ ಹೇಟರ್ಸ್ ಆಗಿದ್ದವರೇ ಇಂದು ಫ್ಯಾನ್ಸ್ ಆಗಿ ಕನ್ವರ್ಟ್ ಆಗಿದ್ದಾರೆ. ವಿನಯ್ ಗೌಡ ಅವರ ಸಿಂಪ್ಲಿಸಿಟಿ , ಮಾತು, ಅವರು ಅಭಿಮಾನಿಗಳೊಂದಿಗೆ ನಡೆದುಕೊಂಡ ರೀತಿ ಎಲ್ಲವೂ ಇಷ್ಟವಾಗಿದೆ. ಕಾರ್ತೀಕ್ ಬದಲಾಗಿ ಇವರೇ ಗೆಲ್ಲಬೇಕಿತ್ತು ಎನ್ನುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.