ಸ್ವಂತ ಹೆಂಡತಿ ಮಗ ಬಗ್ಗೆ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ವಿನೋದ್ ರಾಜ್ ಮಾತು

 | 
ಪುೂ

ನಮ್ಮ ಕನ್ನಡ ಚಿತ್ರರಂಗದ  ದೀಮಂತ ನಾಯಕಿ ಲೀಲಾವತಿಯವರ  ಪುತ್ರ ನಟ ವಿನೋದ್ ರಾಜ್ ರವರ  ಮದುವೆಯ  ವಿಚಾರ ಇದೀಗ ಹೆಚ್ಚು ಸದ್ದು ಮಾಡುತ್ತಿರುವ ವಿಚಾರವಾಗಿದ್ದು ಇಲ್ಲಿಯ ವರೆಗೂ ಪ್ರತಿಯೊಬ್ಬರು ಕೂಡ ವಿನೋದ್ ರಾಜ್ ಮದುವೆಯಾಗಿಲ್ಲ ಎಂದು ಭಾವಿಸಿದ್ದರು. 

ಅಲ್ಲದೇ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಕಾರಣಕ್ಕೆ  ವಿನೋದ್ ಮದುವೆಯಾಗಿಲ್ಲ ಎಂಬ ಸುದ್ದಿ ಕೂಡ ಹರಿದಾಡಿತ್ತು. ಸದ್ಯ ಇದೀಗ ಈ ಎಲ್ಲಾ ಅಂತೆ ಕಂತೆಗಳಿಗೆ ಫುಲ್ ಸ್ಟಾಪ್ ಇಡಲಾಗಿದ್ದು ವಿನೋದ್ ರಾಜ್ ಮದುವೆಯಾಗಿರುವ ಸುದ್ದಿ ನಿಜವಾಗಿದೆ. 

ಇತ್ತೀಚೆಗಷ್ಟೇ ನಿರ್ದೇಶಕ ಹಾಗೂ ಡಾ.ರಾಜ್ ಕುಟುಂಬಕ್ಕೆ ಹತ್ತಿರವಾಗಿದ್ದ ಪ್ರಕಾಶ್ ರಾಜ್ ಮೆಹು ಫೋಟೋವೊಂದನ್ನು ಹಂಚಿಕೊಂಡಿದ್ದು ಆ ಫೋಟೋದಲ್ಲಿ ವಿನೋದ್ ರಾಜ್ ಕುಮಾರ್ ಪತ್ನಿ ಹಾಗೂ ಪುತ್ರ ಕೂಡ ಇದ್ದರು. ಈಗ ಲೀಲಾವತಿ ಯವರೇ ಈ ವಿಚಾರ ಒಪ್ಪಿಕೊಂಡಿದ್ದಾರೆ. ಸದ್ಯ ಹಿರಿಯ ನಟಿ ಲೀಲಾವತಿಯವರು ಯೂಟ್ಯೂಬ್ ಚಾನೆಲ್ ವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು ನನ್ನ ಮಗನ ಮದುವೆ ಆಗಿದೆ. 

ಹೌದು ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಆದರೆ ಬಹಳ ಸಿಂಪಲ್ ಆಗಿ ಮದುವೆ ಮಾಡಿದೆ. ನನ್ನ ಹತ್ತಿರ ದುಡ್ಡಿಲ್ಲದ್ದಕ್ಕೆ ತಿರುಪತಿ ಬೆಟ್ಟದ ಮೇಲೆ ಸುಮಾರು 20 ವರುಷದ ಹಿಂದೆಯೇ ಮಾಡಿದೆ. ಅವನೇನು ಹೆಣ್ಣು ಹುಡುಗಿ ಅಲ್ಲ, ಕದ್ದು ಬಸುರಾಗಿದ್ದಕ್ಕೆ ಮದ್ವೆ ಮಾಡಿಸಿದೆ ಎಂದು ನಾನು ಹೇಳುವುದಿಲ್ಲ. ಅವನು ಪವಿತ್ರವಾಗಿ ಜೊತೆಗೆ ನನಗೆ ಒಳ್ಳೆ ಮಗನಾಗಿದ್ದಾನೆ. 

ನಾನೇ ಇಷ್ಟಪಟ್ಟು ಮದುವೆ ಮಾಡಿಸಿದ್ದು, ತಿರುಪತಿ ಬೆಟ್ಟದ ಮೇಲೆ ಮದುವೆ ಮಾಡಿಸಿದೆ. ತಿರುಪತಿ ಬೆಟ್ಟ ಶ್ರೇಷ್ಠ ಜಾಗ ಎಂದು ಅನಿಸಿ ಅಲ್ಲಿಯೇ ಮದುವೆ ಮಾಡಿಸಿದೆ. ಎಲ್ಲರಿಗೂ ಗೊತ್ತಾಗಿ ಕೊಂಕು ಮಾತು, ಡೊಂಕು ಮಾತು ಕೇಳುವ ಬದಲು ಮಾತನಾಡುವುದಕ್ಕಿಂತ ಪರಿಶುದ್ದವಾದ ಜಾಗದಲ್ಲಿ ಮದುವೆ ಮಾಡುವುದು ಒಳ್ಳೆಯದು ಎಂಬ ಅಭಿಪ್ರಾಯದಿಂದ ಹಾಗೆ ಮಾಡಿದೆ. 

ವೆಂಕಟರಮಣ ಸನ್ನಿಧಿಯಲ್ಲಿ ಮದುವೆ ನಡೆದಿದ್ದು,7 ಜನ ಕನ್ನಡಿಗರು ಈ ಸಂದರ್ಭ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು. ಎಂಥೆಂದವರ ಮದುವೆ ಎಲ್ಲೆಲ್ಲೋ ಆಗಿದೆ. ಪ್ಯಾಲೇಸ್ ಗಳಲ್ಲಿ ಮಾಡಿದ್ದಾರೆ. ಆದರೆ ನನಗೆ ಆ ಶಕ್ತಿ ಇರಲಿಲ್ಲ. ಅನೇಕರು ಈ ಕುರಿತು ಹೀಯಾಳಿಸಿದ್ದು ಹಾಗಾಗಿ ಚರ್ಚೆ ಮಾಡಲಿಲ್ಲ ಎಂದು ಹೇಳಿದ್ದಾರೆ. ತದನಂತರದಲ್ಲಿ ವಿನೋದ್ ರಾಜ್ ಮಾತನಾಡಿ
ಹಿಂದೆ ಚಪ್ಪಲೀಲಿ ಹೊಡೆದ್ರು, ಈಗ ಇದನ್ನು ಶುರು ಹಚ್ಚಿಕೊಂಡಿದ್ದಾರೆ. 

ಇದನ್ನು ಬಿಟ್ಟು ಬೇರೆ ಏನೂ ಜೀವನದಲ್ಲಿ ಬರೋದಿಲ್ವಾ? ನಮ್ಮ ಪ್ರಾಣ ಹೋದರೂ ಸರಿ. ಕೆಲವು ತಪ್ಪಾದ ಪ್ರಶ್ನೆಗಳಿಗೆ ಉತ್ತರ ಕೊಡೋಕೆ ನಮಗೆ ಇಷ್ಟ ಇಲ್ಲ. ನಾವು 6 ಕೋಟಿ ಜನ ಏನು ಅಭಿಮಾನಿಗಳಿದ್ದಾರೋ. ಕನ್ನಡದ ಮೇಲೆ ಏನು ಅಭಿಮಾನ ಇಟ್ಟಿದ್ದಾರೋ. ಅದೇ ಅಭಿಮಾನ ನಾನು, ನನ್ನ ತಾಯಿ ಅಂತರಾಳದಲ್ಲಿ ಇಟ್ಟಿದ್ದೀವಿ. ನನ್ನ ತಾಯಿಯವರಿಗೆ ನಾನು ಮಾತು ಕೊಟ್ಟಿದ್ದೀನಿ. ಅವರು ಏನು ಹೇಳುತ್ತಾರೋ, ಅದರಂತೆ ನಡೆದು ಈ ಮಣ್ಣಿನಲ್ಲಿ ಹೋಗುವವನು ನಾನು ಎಂದು ಕಣ್ಣೀರಿಟ್ಟರು. ನಮ್ಮ ಅಮ್ಮನನ್ನು ಬದುಕಲು ಬಿಡಿ ಎಂದು ಕೈಜೋಡಿಸಿ ಬೇಡಿಕೊಂಡಿದ್ದಾರೆ.