ವಿನೋದ್ ರಾಜ್ ತನ್ನ ಮುಂದಿನ ಜೀವನದ ಬಗ್ಗೆ ಮಹತ್ವದ ನಿರ್ಧಾರ, ಸ್ವಂತ ತಂದೆಯ ಮನೆಗೆ ಹೋ.ಗುತ್ತಾರಾ

 | 
Bh

ಹಿರಿಯ ನಟಿ ಲೀಲಾವತಿ ಅವರು ನಿಧನರಾಗಿ 11 ದಿನ ಕಳೆದ ಹಿನ್ನೆಲೆ ವೈಕುಂಠ ಸಮಾರಾಧನೆ ನಡೆಸಲಾಯ್ತು.  ಡಿಸೆಂಬರ್ 8ರಂದು ಲೀಲಾವತಿ  ಇನ್ನಿಲ್ಲವಾಗಿದ್ದಾರೆ. ನೆಲಮಂಗಲ ಬಳಿಯ ಸೋಲದೇವನಹಳ್ಳಿಯ ಲೀಲಾವತಿ‌ ನಿವಾಸದಲ್ಲಿ ವೈಕುಂಠ ಸಮಾರಾಧನೆ ನಡೆಯಿತು. ಸಮಾಧಿ ಸ್ಥಳಕ್ಕೆ ವಿನೋದ್​ ರಾಜ್ ಪೂಜೆ ಸಲ್ಲಿಸಿದ್ರು. ಇದೇ ವೇಳೆ ಅನೇಕ ಸ್ಯಾಂಡಲ್​ವುಡ್  ಕಲಾವಿದರು, ಗಣ್ಯರು, ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. 

ತಾಯಿ ಕಳೆದುಕೊಂಡು ದುಃಖದಲ್ಲಿರುವ ವಿನೋದ್​ ರಾಜ್​ಗೆ ಆಪ್ತರು ಧೈರ್ಯ ತುಂಬಿದ್ರು. ಇದೇ ವೇಳೆ ಮಾತಾಡಿದ ವಿನೋದ್ ರಾಜ್​ ಅಮ್ಮನ ನೆನಪು ಕಾಡುತ್ತಿದೆ ಆದರೆ ಅಮ್ಮ ಎಲ್ಲಿ ಹೋಗಿಲ್ಲ ನನ್ನೊಡನೆಯೆ ಇದ್ದಾಳೆ ಎಂದಿದ್ದಾರೆ. ಅಮ್ಮನ ಸ್ಮಾರಕ ಕಟ್ಟಿಸಬೇಕು ಅದಕ್ಕಾಗಿ ಎಲ್ಲಾ ಸಿದ್ದತೆ ಮಾಡಿದ್ದೀನಿ. ಅಮ್ಮನಿಗೆ ನನ್ನ ಮಗ ಅಂದ್ರೆ ತುಂಬಾ ಇಷ್ಟ. ಅವನಿಗೆ ಅಮ್ಮನೆ ಯುವರಾಜ್ ಅಂತ ಹೆಸರಿಟ್ಟಿದ್ದು, ಅವನಿಗೂ ಅವರಮ್ಮ ಕನ್ನಡವನ್ನು ಕಲಿಸಿಕೊಟ್ಟಿದ್ದಾರೆ ಎಂದು ವಿನೋದ್​ ರಾಜ್ ಹೇಳಿದ್ರು.

ಇದೇ ಮೊದಲ ಬಾರಿಗೆ ವಿನೋದ್​ ರಾಜ್ ಹೆಂಡತಿ ಹಾಗೂ ಮಗನ ಬಗ್ಗೆ ಮಾಧ್ಯಮಗಳ ಮುಂದೆ ಮಾತಾಡಿದ್ರು. ತಾಯಿ ಕಳೆದುಕೊಂಡ ದುಃಖದಲ್ಲಿರುವ ವಿನೋದ್​ ರಾಜ್​, ಎಲ್ಲವೂ ಜೀವನದಲ್ಲಿ ಒಂದು ಭ್ರಮೆ ಅನಿಸುತ್ತಿದೆ. ಎಷ್ಟು ಧೈರ್ಯ ತುಂಬಿಕೊಂಡ್ರು ದುಃಖದ ಕಟ್ಟೆ ಒಡೆಯುತ್ತೆ ಎನ್ನುತ್ತಾ  ಅಮ್ಮನ ನೆನಪಲ್ಲಿ ವಿನೋದ್ ರಾಜ್ ಹಾಡು ಹಾಡಿದ್ರು. ಈ ಹಿಂದಿ ಹಾಡಿನ ಅರ್ಥ ತಿಳಿದ್ರೆ ಎಲ್ಲಾ ಗೊತ್ತಾಗುತ್ತೆ ಎಂದು ಹೇಳಿದ್ರು.

ನನ್ನ ಮಗ ಚೆನ್ನೈ ನಲ್ಲೇ ಹುಟ್ಟಿ ಬೆಳೆದ ಅವನಿಗೂ ನಾವು ಕನ್ನಡ ಕಲಿಸಿದ್ದೀವಿ. ಅವರ ಅಜ್ಜಿಯೂ ಕನ್ನಡದ ಬಗ್ಗೆ ಸಾಕಷ್ಟು ಹೇಳಿ ಕೊಟ್ಟಿದ್ದಾರೆ. ನನಗೆ ವ್ಯವಸಾಯದ ಬಗ್ಗೆ ಏನು ಗೊತ್ತಿರಲಿಲ್ಲ ಇಲ್ಲಿ ಬಂದು ನನಗೆ ಗೊತ್ತಾಯ್ತು. ನಮ್ಮ ಅತ್ತೆ ಅವರ ಆಸೆಯಂತೆ ಈಗ ನಾವು ಬದುಕ್ತಿದ್ದೀವಿ. ಚೆನ್ನೈನಿಂದ ಇಲ್ಲಿಗೆ ಬಂದು ಒಂದು ಹಳ್ಳಿಯನ್ನೇ ಬದಲಾಯಿಸಿದ್ದಾರೆ. ನಮಗೆ ದೊಡ್ಡ ಜವಾಬ್ದಾರಿ ಹೊರಿಸಿ ಹೋಗಿದ್ದಾರೆ. ಆ ಜವಾಬ್ದಾರಿಯನ್ನು ನಾನು ನಿಭಾಯಿಸಿಕೊಂಡು ಹೋಗ್ತಿನಿ ಎಂದು ಅನು ಹೇಳಿದ್ರು. ಇನ್ನು ಅಮ್ಮನ ಆಸೆಯಂತೆ ಹೆಂಡತಿ ಮಕ್ಕಳ ಜೊತೆ ಬದುಕುತ್ತೇನೆ ಎಂದಿದ್ದಾರೆ ವಿನೋದ್ ರಾಜ್ ಅವರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.