ಮಗ ಯುವರಾಜ್ ಮದುವೆ ಬಗ್ಗೆ ಮಾತಾಡಿದ ವಿನೋದ್ ರಾಜ್, ಹೆಣ್ಣು ಯಾರು ಗೊತ್ತಾ

 | 
Bs

ವಯೋಸಹಜ ಅನಾರೋಗ್ಯದಿಂದ ಕನ್ನಡದ ಹಿರಿಯ ನಟಿ ಲೀಲಾವತಿ ನಿಧನರಾಗಿದ್ದಾರೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ, ಸ್ಯಾಂಡಲ್‌ವುಡ್‌ನ ಸಿನಿಮಾ ಮಂದಿ ಕಂಬನಿ ಮಿಡಿದಿದೆ. ಈ ನಡುವೆ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೂ ಆಗಮಿಸಿ ಕೊನೇ ಬಾರಿ ನಮನ ಸಲ್ಲಿಸಿ ತೆರಳಿದ್ದಾರೆ.

ಈ ನಡುವೆ ವಿನೋದ್‌ ರಾಜ್‌ ಅವರ ಪತ್ನಿ ಅನು ಮತ್ತು ಮಗ ಯುವರಾಜ್‌ ಸಹ ಚೆನ್ನೈನಿಂದ ಆಗಮಿಸಿ ಲೀಲಾವತಿಯವರ ಅಂತಿಮ ದರ್ಶನ ಪಡೆದಿದ್ದಾರೆ. ಈ ನಡುವೆ ವಿನೋದ್‌ ರಾಜ್‌ಗೆ ಮದುವೆಯಾಗಿದೆ, ಎದೆಯತ್ತರ ಬೆಳೆದ ಮಗನೂ ಇದ್ದಾನೆ ಎಂಬ ವಿಚಾರ ಬಹುತೇಕರಿಗೆ ಗೊತ್ತಿರಲಿಲ್ಲ. ಕೆಲ ತಿಂಗಳ ಹಿಂದಷ್ಟೇ ಇದೇ ವಿಚಾರವಾಗಿ ನಡೆದ ವಿವಾದದ ವೇಳೆ ಮದುವೆ ವಿಚಾರವನ್ನು ಬಯಲು ಮಾಡಿದ್ದರು ವಿನೋದ್.‌

ಅದರಂತೆ, ವಿನೋದ್‌ ರಾಜ್‌ ಅವರ ಪುತ್ರ ಯುವರಾಜ್‌, ಚೆನ್ನೈನಲ್ಲಿಯೇ ಅಮ್ಮನ ಜತೆಗೆ ಬೆಳೆಯುತ್ತಿದ್ದಾನೆ. ಸದ್ಯ ಇಂಜಿನಿಯರಿಂಗ್‌ ವಿದ್ಯಾಭ್ಯಾಸ ಮುಂದುವರಿಸಿದ್ದು, ಆಗಾಗ ಅಮ್ಮನ ಜತೆಗೆ ಅಪ್ಪ ವಿನೋದ್‌ ರಾಜ್‌ ಮನೆಗೆ ಬಂದು ಹೋಗುತ್ತಿದ್ದರು. ಲೀಲಾವತಿ ಅವರ ಆರೋಗ್ಯ ಹದಗೆಟ್ಟ ಬಳಿಕವೂ ಅಜ್ಜಿಯನ್ನು ನೋಡಲು ತಾಯಿ ಅನು ಜತೆ ಯುವರಾಜ್‌ ಆಗಮಿಸಿದ್ದರು. ಮೊಮ್ಮಗನನ್ನು ಕಂಡರೆ ಲೀಲಾವತಿಗೂ ತುಂಬ ಪ್ರೀತಿ.

ತಾಯಿ ಲೀಲಾವತಿ ಸಾವಿನ ನಡುವೆಯೂ, ನಟ ವಿನೋದ್ ರಾಜ್, ತನ್ನ ಮಗನ ಮಾಹಿತಿ ಹಂಚಿಕೊಂಡಿದ್ದಾರೆ. ತನ್ನ ಮಗನನ್ನು ವಿದ್ಯಾಭ್ಯಾಸ ಮಾಡಿಸೋ ಸಲುವಾಗಿ ದೂರ ಇಟ್ಟಿದ್ವಿ. ಈಗ ಓದು ಮುಗಿಸಿ ಒಳ್ಳೆಯ ಕೆಲಸದಲ್ಲಿ ಇದ್ದಾನೆ ಅಂತ ತಿಳಿಸಿದ್ದಾರೆ.ನನ್ನ ತಾಯಿ ಹೇಗೆ ನನ್ನ ತಿದ್ದಿ, ತೀಡಿದ್ದರೋ ಹಾಗೆಯೇ, ಯುವರಾಜ್ ನನ್ನು ನನ್ನ ಪತ್ನಿ ಬೆಳೆಸಿದ್ದಾರೆ. 

ಚೆನ್ನೈನಲ್ಲಿ ಯುವರಾಜ್ ಇದ್ರೂ, ಚೆನ್ನಾಗಿ ಕನ್ನಡ ಮಾತನಾಡುತ್ತಾನೆ ನನ್ನಂತೆ ಅವನಿಗೆ ಕದ್ದು ಮುಚ್ಚಿ ಮದುವೆ ಮಾಡುವುದಿಲ್ಲ.ಹೆಣ್ಣು ನೋಡಿದ್ದೇನೆ ಗ್ರಾಂಡ್ ಆಗಿ ಮದುವೆ ಮಾಡುತ್ತೇನೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್  ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.