ಅಮ್ಮನ ಸಮಾಧಿ ಮುಂದೆ ಎದ್ದುಬಿದ್ದು ಡ್ಯಾನ್ಸ್ ಮಾಡಿದ ವಿನೋದ್ ರಾಜ್ ಕುಮಾರ್
ಒಬ್ಬ ತಾಯಿ ಮಕ್ಕಳನ್ನು ಪ್ರೀತಿಸಿದಷ್ಟೇ ಮಕ್ಕಳು ತಾಯಿಯನ್ನು ಪ್ರೀತಿಸಬಹುದು ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿ ವಿನೋದ್ ರಾಜ್ ಹೌದು ಕನ್ನಡ ಚಿತ್ರರಂಗದಲ್ಲಿ ತಾಯಿ ಮಗ ಹೀಗಿರಬೇಕು ಎಂಬುದಕ್ಕೆ ನಿದರ್ಶನವಾಗಿರುವ ವಿನೋದ್ ಅವರು ತಮ್ಮ ತಾಯಿ ಲೀಲಾವತಿ ಅವರನ್ನು ತಮ್ಮ ಜೀವಕ್ಕಿಂತ ಪ್ರೀತಿಸುತ್ತಾರೆ. ತಾಯಿ ಅಗಲಿಕೆಯ ನೋವಿನಲ್ಲೇ ಇರುವ ವಿನೋದ್ ಅವರು ತಮ್ಮ ತಾಯಿ ನೆನಪಿಗಾಗಿ ದೇವಸ್ಥಾನವನ್ನು ಕಟ್ಟುತ್ತಿದ್ದಾರೆ.
ತಾಯಿ ಲೀಲಾವತಿ ಇಲ್ಲದ ನೋವಿನಲ್ಲೇ ದಿನ ಕಳೆಯುತ್ತಿರುವ ನಟ ವಿನೋದ್ ರಾಜ್ ಅವರು ಇದೀಗ ತನ್ನ ತಾಯಿಗೋಸ್ಕರ ದೇವಸ್ಥಾನವನ್ನು ಕಟ್ಟಿಸುತ್ತಿದ್ದಾರೆ. ಇನ್ನೂ ಅವರ ನೆನಪಲ್ಲಅಮ್ಮನ ಸಮಾಧಿ ಮುಂದೆ ಅವರಿಷ್ಟದ ಸ್ಟೆಪ್ಸ್ ಹಾಕಿ ವಿನೋದ್ ರಾಜ್ ಕುಣಿದಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಅಮ್ಮನಿಗೆ ನಾನು ಡ್ಯಾನ್ಸ್ ಮಾಡುವುದು ಇಷ್ಟವೆಂದು ಹೇಳಿದ ವಿನೋದ್ ರಾಜ್ ಅವರು ಲೀಲಾವತಿ ಅವರ ಸಮಾಧಿ ಮುಂದೆ ಅವರಿಷ್ಟದ ಸ್ಟೆಪ್ಸ್ ಹಾಕಿ ಕುಣಿದಿದ್ದಾರೆ. ಸಾಮಾಜಿಕ ಜಾಲತಾಣದಕಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು, ಲೀಲಾವತಿ ಅಮ್ಮನಿಗೆ ತಕ್ಕ ಮಗ ನೀವು, ದೇವರಂತ ಮನುಷ್ಯ, ಮಾನವೀಯತೆ ಮೌಲ್ಯ ಉಳ್ಳ ಮನುಷ್ಯ ಎಂದು ಕೊಂಡಾಡಿದ್ದಾರೆ.
ಇನ್ನೂ ಲೀಲಾವತಿ ಅವರ ಗುಡಿಯ ಕೆಲಸ ಶುರುವಾಗಿದೆ. ತಾಯಿ ದೂರವಾಗಿದ್ದರು ಅವರ ನೆನಪಲ್ಲೇ ಇರುವ ವಿನೋದ್ ರಾಜ್ ಅವರು ತಮ್ಮ ತಾಯಿಯನ್ನು ನೆನೆದು ಈಚೆಗೆ ಶೋವೊಂರಲ್ಲಿ ಕಣ್ಣೀರು ಹಾಕಿದ್ದರು. ಜೀ ಕನ್ನಡದ ಮಹಾನಟಿ ಶೋನಲ್ಲಿ ಭಾಗವಹಿಸಿದ್ದ ಅವರು ನನಗೆ ಅಂತಾ ಇದ್ದ ಜೀವ ನಮ್ಮ ತಾಯಿಯದ್ದು. ಅವರ ನೆನಪು ದಿನನಿತ್ಯ ಕಾಡುತ್ತದೆ ಎಂದು ಎಮೋಷನಲ್ ಆಗಿ ಹೇಳಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.