ತಾಯಿ ಸಾ.ವಿನ ಕೆಲವೇ ದಿನಗಳಲ್ಲಿ ಸಂಪೂರ್ಣ ಬದಲಾದ ವಿನೋದ್ ರಾಜ್, ಪತ್ನಿ ಜೊತೆ ಗ್ರಾಂಡ್ ಲುಕ್

 | 
Hs

ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್ ಅವರು ತಾಯಿಯ ನಿಧನದ ನೋವಿನಲ್ಲಿದ್ದಾರೆ. ಈ ನಡುವೆ ನಟ ವಿನೋದ್ ರಾಜ್ ಅವರು ಅಮ್ಮನ ಕುರಿತು ಹೇಳಿಕೆ ಕೊಟ್ಟಿದ್ದಾರೆ. ನನ್ನ ಪ್ರಾಣನೇ ಹೋಗಬೇಕಿತ್ತು. ಅರ್ಧ ಜೀವ ಹೋಗಿತ್ತು. 56 ವರ್ಷ ಜೊತೆ ತಾಯಿ ಜೊತೆಗೆ ಕಾಲ ಕಳೆದೆ. 

ಒಂಚೂರೂ ಪ್ರೀತಿ ಕೊರತೆ ಮಾಡಲಿಲ್ಲ ಎಂದು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ನನ್ನ ಕೈಹಿಡಿದುಕೊಂಡೇ ಕಳೆದು ಹೋದರು. ನೀರು ಕುಡಿಸುತ್ತಲೇ ಪ್ರಾಣ ಕಳೆದುಕೊಂಡರು. ಎರಡು, ಮೂರು ತಿಂಗಳಿಂದ ನಾನೂ ಊಟ ಮಾಡೋದನ್ನು ಬಿಟ್ಬಿಟ್ಟೆ ಎಂದಿದ್ದಾರೆ. ಶಿವಣ್ಣ ಅವರು ಅಪ್ಸೆಟ್ ಆಗಬೇಡಿ ಎಂದು ಹೇಳಿದ್ದರು. ನಾನು ನನ್ನ ತಾಯಿ ಜೊತೆ ಇದ್ದೆ, ಈಗ ಯಾರು ಇಲ್ಲ. 

ಎಷ್ಟು ಬೇಡಿಕೊಂಡರೂ ತಾಯಿನ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಅವರು ಹೇಳಿದ ತಾಳ್ಮೆ, ಸಮಾಧಾನ ಯಾರು ಹೇಳಲು ಸಾಧ್ಯವಿಲ್ಲ. ಅವರಿಗೆ ಸಾಕಷ್ಟು ಕನಸುಗಳಿದ್ದವು. ಅಮ್ಮ ಹೇಳಿರೋ‌ ಬಾಕಿ ಕೆಲಸ ಮಾಡಿ ಮುಗಿಸುತ್ತೇನೆ. ಮನೆಯಿಂದ ಹೊರಡುವಾಗಲೇ ಐವತ್ತು ನೂರು ಕೊಟ್ಟು ಹೋಗುತ್ತಿದ್ದರು ಎಂದಿದ್ದಾರೆ. ನಾನು ಏನು ಇಲ್ಲದೇ ಬಂದವಳು, ಈಗ ಒಳ್ಳೆ ಸ್ಥಾನದಲ್ಲಿದ್ದೇನೆ. 

ನಮಗಿಂತ ಬಡತನದಲ್ಲಿರುವವರ ಬೆನ್ನಿಗೆ ನಿಲ್ಲಬೇಕು ಎಂದಿದ್ದರು ಎಂದು ವಿನೋದ್ ರಾಜ್ ನೆನಪಿಸಿಕೊಂಡಿದ್ದಾರೆ. ತನ್ನನ್ನು ಅಮ್ಮ ಸಾಕಿದಂತೆ ನನ್ನ ಮಗ ಯುವರಾಜನನ್ನು ತಿದ್ದಿ ತೀಡಿ ನನ್ನ ಹೆಂಡತಿ ಅನು ಸಾಕಿದ್ದಾಳೆ. ಅವನ ವಿದ್ಯಾಭ್ಯಾಸ ಹಾಗೂ ಕೆಲಸದ ಸಲುವಾಗಿ ಅವಳು ಚೆನ್ನೈ ಅಲ್ಲಿ ಇದ್ದರು. ಇನ್ನು ಮುಂದೆಯೂ ಸಹ ಅವನ ಕೆಲಸದ ಸಲುವಾಗಿ ಅವರು ಅಲ್ಲಿಯೇ ಇರುತ್ತಾರೆ. 

ನೋಡಬೇಕು ಅನ್ನಿಸಿದಾಗ ನಾನು ಅಲ್ಲಿಗೆ ಹೋಗಿ ಬರುತ್ತೇನೆ. ಅವರು ಸಹಾ ಇಲ್ಲಿಗೆ ಬಂದು ಹೋಗುತ್ತಾರೆ ಒಳ್ಳೆಯ ಸಂಬಳದ ಕೆಲಸ ಮಾಡುವ ಮಗನನ್ನು ಕೆಲಸ ಬಿಡು ಎನ್ನುವುದು ಒಳ್ಳೆಯದಲ್ಲ ಎಂದಿದ್ದಾರೆ ವಿನೋದ್ ರಾಜ್ ಅವರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.