ವಿಶಾಲ್ ದಾಂಪತ್ಯದಲ್ಲಿ‌ ಬಿರುಕು? ಇಬ್ಬರ ನಡುವೆ ಬಿ ರುಗಾಳಿ ಎಬ್ಬಿಸಿದ ನಟಿ

 | 
Nd
ಕೆಲ ದಿನಗಳ ಹಿಂದಷ್ಟೇ 12 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ತಮ್ಮ ಮೆಚ್ಚಿನ ನಟನ ಮದಗಜರಾಜ ಸಿನಿಮಾ ತೆರೆಗೆ ಬರುವ ಖುಷಿಯಲ್ಲಿದ್ದ ತಮಿಳು ನಟ ವಿಶಾಲ್ ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿದೆ. ಮದಗಜರಾಜ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ವಿಶಾಲ್ ಅವರನ್ನು ನೋಡಿ ಅಭಿಮಾನಿಗಳು ನಿಜಕ್ಕೂ ಒಂದು ಕ್ಷಣ ಶಾಕ್ ಆಗಿದ್ದಾರೆ. ಹೇಗಿದ್ದ ನಟ ಹೇಗಾಗಿದ್ದಾರೆ? ಚಿಕ್ಕವಯಸ್ಸಿಗೆ ಇಂದೆತಹ ಪರಿಸ್ಥಿತಿ ಎಂದು ಆತಂಕಗೊಂಡಿದ್ದಾರೆ.
ನಡುಗುವ ಧ್ವನಿ, ಮೈಕ್‌ ಹಿಡಿಗುಕೊಳ್ಳಲಾಗದೇ ನಗುತ್ತಿದ್ದ ಕೈ, ನಿಂತು ಮಾತನಾಡಲು ಸಾಧ್ಯವಾದಂತಹ ಸ್ಥಿತಿಯಲ್ಲಿ ವಿಶಾಲ್ ಕಾಣಿಸಿಕೊಂಡಿದ್ದಾರೆ. ವೈರಲ್ ಫೀವರ್‌ನಿಂದ ಬಳಲುತ್ತಿದ್ದ ವಿಶಾಲ್‌ ತಮ್ಮ ಸಿನಿಮಾದ ಯಶಸ್ಸಿಗಾಗಿ ಅದೇ ಪರಿಸ್ಥಿತಿಯಲ್ಲಿ ಮದಗಜರಾಜ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾದರು. ನಡುಗುತ್ತಲೇ, ತೊದಲುತ್ತಲೇ ಕಾರ್ಯಕ್ರಮವನ್ನು ಪೂರೈಸಿಕೊಟ್ಟರು.
ಸದ್ಯ ಆಸ್ಪತ್ರೆಗೆ ದಾಖಲಾಗಿರುವ ವಿಶಾಲ್‌ ಅವರ ಆರೋಗ್ಯದಲ್ಲಿ ಸ್ಪಲ್ಪಮಟ್ಟಿನ ಚೇತರಿಕೆ ಇದೆ ಎಂದು ಅವರ ತಂದೆ ತಿಳಿಸಿದ್ದಾರೆ. ಇದರಿಂದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಪೋಷಕರ ಆರೈಕೆಯಲ್ಲಿರುವ ವಿಶಾಲ್‌ ನೆಲವತೈದು ವರ್ಷವಾದರೂ ಯಾಕೆ ಮದುವೆಯಾಗಿಲ್ಲ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ನಟನೆ ಹಾಗೂ ವ್ಯಕ್ತಿತ್ವದಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ವಿಶಾಲ್‌ ಯಾಕೆ ಇನ್ನೂ ಒಂಟಿಯಾಗಿದ್ದಾರೆ. ಅವರ ಜೀವನದಲ್ಲಿ ಪ್ರೀತಿಯಾಗಿಲ್ವಾ? ಇನ್ನೂ ಮದುವೆಯಾಗಿಲ್ಲ ಯಾಕೆ? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಚಿತ್ರರಂಗದಲ್ಲಿ ಸಾಮಾನ್ಯವಾಗಿ ಇರುವಂತೆ ಕೆಲ ನಟಿಯರ ಹೆಸರಿನ ಜೊತೆ ವಿಶಾಲ್ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ವರಲಕ್ಷ್ಮಿ ಶರತ್‌ಕುಮಾರ್ ಅವರೊಂದಿಗೆ ಪ್ರೀತಿಯಲ್ಲಿದ್ದಾರೆ ಎನ್ನುವ ಸುದ್ದಿ ಜೋರಾಗಿಯೇ ಕೇಳಿಬಂದಿತ್ತು. ಅವರಿಬ್ಬರು ಮದುವೆಯಾಗುತ್ತಾರೆ ಎನ್ನುವ ಲೆಕ್ಕಾಚಾರ ಕೂಡ ಜೋರಾಗಿತ್ತು. ಈ ಎಲ್ಲಾ ವಿಚಾರಗಳಿಗೂ ಶಾಕ್‌ ಕೊಡುವಂತೆ ವಿಶಾಲ್ ಅವರ ನಿಶ್ಚಿತಾರ್ಥ ನಡೆದುಹೋಯಿತು.
2019ರ ಮಾರ್ಚ್‌ನಲ್ಲಿ ಹೈದರಾಬಾದ್ ಮೂಲದ ಬ್ಯಾಸ್ಕೆಟ್‌ ಬಾಲ್ ಪ್ಲೇಯರ್ ಅನಿಶಾ ಅಲ್ಲಾ ರೆಡ್ಡಿ ಜೊತೆ ವಿಶಾಲ್ ಎಂಗೇಜ್‌ಮೆಂಟ್ ಕೂಡ ನಡೆದಿತ್ತು. ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಮದುವೆಯಾಗಲು ಈ ಜೋಡಿ ಸಜ್ಜಾಗಿದ್ದರು. ಹೈದರಾಬಾದ್‌ನಲ್ಲಿ ಕುಟುಂಬಸ್ಥರ ಸಮ್ಮಖದಲ್ಲಿಯೇ ವಿಶಾಲ್ ಹಾಗೂ ಅನಿಶಾ ಎಂಗೇಜ್‌ಮೆಂಟ್ ಅದ್ಧೂರಿಯಾಗಿ ನಡೆಯಿತು
ಇನ್ನೇನು ಮದುವೆ ದಿನಾಂಕ ಸಮೀಪಿಸುತ್ತಿದ್ದಂತೆ ವಿಶಾಲ್‌ ಅಭಿಮಾನಿಗಳಿಗೆ ಮತ್ತೊಂದು ಶಾಕ್‌ ಎದುರಾಗಿತ್ತು. ವಿಶಾಲ್ ಜೊತೆ ಎಂಗೇಜ್‌ಮೆಂಟ್ ಆಗಿದ್ದ ಅನಿಶಾ ಅಲ್ಲಾ ರೆಡ್ಡಿ ಏಕಾಏಕಿ ಇನ್‌ಸ್ಟಾಗ್ರಾಮ್‌ನಲ್ಲಿದ್ದ ತಮ್ಮ ಎಂಗೇಜ್‌ಮೆಂಟ್ ಫೋಟೊಗಳನ್ನು ಡಿಲೀಟ್ ಮಾಡಿದ್ದರು. ಇದರಿಂದ ಇವರಿಬ್ಬರ ನಡುವಿನ ಸಂಬಂಧ ಮುರಿದು ಬಿದ್ದಿರುವುದು ಖಚಿತವಾಯಿತು. ಇಬ್ಬರ ನಡುವೆ ಹೊಂದಾಣಿಕೆ ಇಲ್ಲದೇ ಈ ಮದುವೆ ರದ್ದಾಯಿತು. ಬಳಿಕ ತಮ್ಮ ಸಿನಿಮಾಗಳಲ್ಲೇ ಬ್ಯೂಸಿಯಾದ ವಿಶಾಲ್‌ ಈವರೆಗೂ ಪ್ರೀತಿ, ಮದುವೆ ವಿಚಾರದಲ್ಲಿ ಸುದ್ದಿಯಾಗಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.